Sunday, October 2, 2022

ಕೊರೊನಾ ವಿರುದ್ಧ ಹೋರಾಟಕ್ಕೆ ಶಕ್ತಿ ತುಂಬಿದ ನಟ: 3 ಕೋಟಿ ದೇಣಿಗೆ ನೀಡಿದ ರಾಘವ್..!

Must read

ಅದ್ಭುತ ಡ್ಯಾನ್ಸರ್.. ಅತ್ಯದ್ಭುತ ಕೊರಿಯೋಗ್ರಾಫರ್. ಸ್ಟಾರ್ ಡೈರೆಕ್ಟರ್. ಒಳ್ಳೆ ಆ್ಯಕ್ಟರ್. ಒಂದೇ ಮಾತಲ್ಲಿ ಹೇಳ್ಬೇಕು ಅಂದ್ರೆ, ರಾಘವ ಲಾರೆನ್ಸ್ ಬಹುಮುಖ ಪ್ರತಿಭೆ. ಡ್ಯಾನ್ಸ್, ಆ್ಯಕ್ಟಿಂಗ್, ಡೈರೆಕ್ಷನ್ ಅಷ್ಟೆ ಅಲ್ಲ ಹೃದಯ ವೈಶಾಲ್ಯತೆಯಲ್ಲೂ ರಾಘವ ಎಲ್ಲರಿಗೂ ಮಾದರಿಯಾಗಿದ್ದಾರೆ. ಕೊರೊನಾ ಸಂಕಷ್ಟಕ್ಕೂ ಸಹಾಯ ಮಾಡಿ ರಾಘವ ರಿಯಲ್ ಹೀರೋ ಅನ್ನಿಸಿಕೊಂಡಿದ್ದಾರೆ.

ಮತ್ತೆ ಮಿಡಿದ ಲಾರೆನ್ಸ್ ಮನ.. 3 ಕೋಟಿ ದೇಣಿಗೆ

ಕೊರೊನಾ ವಿರುದ್ಧ ಹೋರಾಟಕ್ಕೆ ಶಕ್ತಿ ತುಂಬಿದ ನಟ

ಮಾರಕ ಕೊರೊನಾ ವೈರಸ್ ಹಾವಳಿ ದಿನೇ ದಿನೇ ಹೆಚ್ಚಾಗ್ತಿದೆ. ವೈರಸ್ ನಿಯಂತ್ರಣಕ್ಕೆ, ಸೋಂಕಿತರ ಚಿಕಿತ್ಸೆಗೆ, ಲಾಕ್ಡೌನ್ನಿಂದ ಎದುರಾಗಿರೋ ಸಮಸ್ಯೆಗಳನ್ನ ಎದುರಿಸಲು ದೊಡ್ಡ ಮೊತ್ತದ ಹಣ ಬೇಕಾಗಿದೆ. ಎಲ್ಲರೂ ಕೈಲಾದಷ್ಟು ಸಹಾಯ ಮಾಡುವ ಮೂಲಕ ಕೊರೊನಾ ವಿರುದ್ಧದ ಹೋರಾಟಕ್ಕೆ ಸರ್ಕಾರ ಕೈ ಭದ್ರಪಡಿಸಬೇಕಿದೆ. ಸಾಮಾನ್ಯ ಜನರಿಂದ ಸೆಲೆಬ್ರಿಟಿಗಳವರೆಗೆ ಸಾಕಷ್ಟು ಜನ ಸಿಎಂ, ಪಿಎಂ ಪರಿಹಾರ ನಿಧಿಗೆ ದೇಣಿಗೆ ನೀಡ್ತಿದ್ದಾರೆ. ಆ ಮೂಲಕ ಕೋಟಿ ಕೋಟಿ ಹಣ ಬಂದು ಸೇರ್ತಿದೆ.

ಚಂದ್ರಮುಖಿ-2 ಚಿತ್ರದಲ್ಲಿ ತಲೈವಾಗೆ ಲಾರೆನ್ಸ್ ಸಾಥ್..!

ಸಂಭಾವನೆಯ ಮುಂಗಡ ಹಣ ದೇಣಿಗೆ ನೀಡಿದ ಪಾಂಡಿ

ಸದ್ಯ ನೃತ್ಯ ನಿರ್ದೇಶಕ ನಟ, ನಿರ್ದೇಶಕ ರಾಘವ ಲಾರೆನ್ಸ್ ಬರೋಬ್ಬರಿ 3 ಕೋಟಿ ದೇಣಿಗೆ ನೀಡಿದ್ದಾರೆ. 15 ವರ್ಷಗಳ ಹಿಂದೆ ಪಿ. ವಾಸು ನಿರ್ದೇಶನದ ಚಂದ್ರಮುಖಿ ಸಿನಿಮಾ ಸೂಪರ್ ಹಿಟ್ ಆಗಿತ್ತು. ಈ ಚಿತ್ರದ ಸೀಕ್ವೆಲ್ಗೆ ಪ್ಲಾನ್ ನಡೀತಿದ್ದು, ರಜಿನಿಕಾಂತ್ ಜೊತೆ ರಾಘವ ಲಾರೆನ್ಸ್ ಸಹ ನಟಿಸ್ತಿದ್ದಾರೆ. ಈ ವಿಚಾರವನ್ನ ಖುದ್ದು ರಾಘವ ಲಾರೆನ್ಸ್ ಕನ್ಫರ್ಮ್ ಮಾಡಿದ್ದಾರೆ. ಚಿತ್ರಕ್ಕಾಗಿ ಸಿಕ್ಕಿದ ಸಂಭಾವನೆ ಮುಂಗಡ ಹಣವನ್ನ ದೇಣಿಗೆ ನೀಡಿದ್ದಾರೆ.

ಪಿಎಂ ಮತ್ತು ತಮಿಳುನಾಡು ಸಿಎಂ ಪರಿಹಾರ ನಿಧಿಗೆ ತಲಾ 50 ಲಕ್ಷ, ಸಿನಿಮಾ ಕಾರ್ಮಿಕರ ಒಕ್ಕೂಟ ಮತ್ತು ತಮಿಳು ಡ್ಯಾನ್ಸರ್ಸ್ ಒಕ್ಕೂಟಕ್ಕೆ ತಲಾ 50 ಲಕ್ಷ ದೇಣಿಗೆಯಾಗಿ ನೀಡಿದ್ದಾರೆ. ಅಂಗವಿಕಲ ಮಕ್ಕಳ ಕಲ್ಯಾಣಕ್ಕಾಗಿ 25 ಲಕ್ಷ, ತಮ್ಮ ಹುಟ್ಟೂರಿನಲ್ಲಿ ಸಂಕಷ್ಟಕ್ಕೆ ಸಿಲುಕಿರುವವರಿಗೆ ಆಹಾರ ಪೂರೈಸಲು 75 ಲಕ್ಷ ಕೊಟ್ಟಿದ್ದಾರೆ. ತಮ್ಮ ಚಾರಿಟಿ ಮೂಲಕ ಸಾಕಷ್ಟು ಮಕ್ಕಳಿಗೆ ಉಚಿತ ಶಸ್ತ್ರ ಚಿಕಿತ್ಸೆ ಮಾಡಿಸಿರೋ ರಾಘವ, ಕೇರಳ ಪ್ರವಾಹದ ಸಂದರ್ಭದಲ್ಲಿ 1 ಕೋಟಿ ದೇಣಿಗೆ ನೀಡಿದ್ರು. ಹೀಗೆ ಸಾಕಷ್ಟು ಬಾರಿ ಸಹಾಯ ಮಾಡಿ ರಾಘವ ಹೃದಯ ವೈಶಾಲ್ಯತೆ ಮೆರೆದಿದ್ದಾರೆ.

Also read:  ಹರ್ಮನ್​ಪ್ರೀತ್​ ಕೌರ್​ ಕ್ಯಾಚ್​ಗೆ ಅಭಿಮಾನಿಗಳು ಫಿದಾ.!

ಎಂಟ್ರಟ್ರೈನ್ಮೆಂಟ್ ಬ್ಯೂರೋ, ಟಿವಿ5

Latest article