Sunday, October 2, 2022

ಕೊರೊನಾ ವಾರಿಯರ್ಸ್‌ಗಾಗಿ ಅನ್ನಪೂರ್ಣೆಯಾದ ತುಪ್ಪದ ಬೆಡಗಿ..!

Must read

ಸೆಲೆಬ್ರಿಟಿಗಳು ಅಂದ್ರೆ ಬರೀ ನಟನೆ, ನೇಮು- ಫೇಮು, ಸ್ಟಾರ್ಡಮ್ ಮಾತ್ರವಲ್ಲ. ಜವಾಬ್ದಾರಿ ಕೂಡ ಇರಲೇಬೇಕು. ಸಾಮಾಜಿಕ ಬದ್ಧತೆ ಇಲ್ಲಾ ಅಂದ್ರೆ ಅವ್ರ ಸಿನಿಮಾ ಸಮಾಜಕ್ಕೆ ಬೇಡವೇ ಬೇಡ ಅಂತಲೇ ಹೇಳಬಹುದು. ಸದ್ಯ ಕೊರೊನಾ ವಿರುದ್ಧ ಸಾಕಷ್ಟು ಮಂದಿ ಫಿಲ್ಮ್ ಸೆಲೆಬ್ರಿಟೀಸ್ ನಿರಂತರ ಹೋರಾಟ ಮಾಡ್ತಾ ಬಂದಿದ್ದಾರೆ.

ಸ್ಯಾಂಡಲ್ವುಡ್ನ ಗ್ಲಾಮರ್ ಡಾಲ್ ರಾಗಿಣಿ ದ್ವಿವೇದಿ. ಬಹುತೇಕ ಬಿಗ್ ಸ್ಟಾರ್ಸ್ ಜೊತೆ ಮಿಂಚಿದ ಒನ್ ಆಫ್ ದ ಲೀಡ್ ಌಕ್ಟ್ರೆಸ್ ಸ್ಯಾಂಡಲ್ವುಡ್ನ ಗ್ಲಾಮರ್ ಡಾಲ್ ರಾಗಿಣಿ ದ್ವಿವೇದಿ. ಇತ್ತೀಚೆಗೆ ಸಿನಿಮಾಗಳ ಆಯ್ಕೆಯಲ್ಲಿ ಕೊಂಚ ಚೂಸಿ ಆಗಿರೋ ತುಪ್ಪದ ಬೆಡಗಿ, ಕನ್ನಡಿಗರಿಂದಲೇ ನೇಮು- ಫೇಮು, ಆಸ್ತಿ- ಅಂತಸ್ತು ಗಳಿಸಿದ್ರು. ಇದೀಗ ತಾನು ಗಳಿಸಿದ್ದನ್ನ ಮತ್ತೆ ಅದೇ ಸಮಾಜಕ್ಕೆ ಕೊಡೋ ಸಮಯ ಬಂದಿದೆ.

ಕೊರೊನಾ ಎಫೆಕ್ಟ್ಗೆ ಎಲ್ಲವೂ ಅಲ್ಲೋಲ ಕಲ್ಲೋಲ ಆಗಿಬಿಟ್ಟಿದೆ. ಜನ ಜೀವನ ಅಸ್ತವ್ಯಸ್ಥ ಆಗ್ತಿದೆ. ಈ ಮಧ್ಯೆ ಶ್ರೀಸಾಮಾನ್ಯನ ಬದುಕು ಅಕ್ಷರಶಃ ಬಸ್ಟ್ಯಾಂಡ್ ಆಗಿ ಹೋಗಿದೆ. ಒಂದೊಂದು ಊಟಕ್ಕೂ ಪರದಾಡುವಂತಹ ಸಮಯ ಬಂದಿದೆ. ಕೆಲಸಕ್ಕೆ ಹೋಗುವಂತಿಲ್ಲ. ಉಪವಾಸವೂ ಮಲಗುವಂತಿಲ್ಲ ಅನ್ನುವಂತಾಗಿದೆ. ಹೀಗಿರುವಾಗ ಫಿಲ್ಮ್ ಸೆಲೆಬ್ರಿಟೀಸ್ ಅವರವರ ಕೈಲಾದ ಸಹಾಯ ಮಾಡ್ತಾ ಬರ್ತಿದ್ದಾರೆ.

ವಾರಿಯರ್ಸ್ಗಾಗಿ ಅನ್ನಪೂರ್ಣೆಯಾದ ತುಪ್ಪದ ಬೆಡಗಿ

ವಿಕ್ಟೋರಿಯಾ ವೈದ್ಯರು ನರ್ಸ್ಗಳಿಗೆ ಕೈಯ್ಯಾರೆ ಅಡುಗೆ

ನಟಿ ರಾಗಿಣಿ ಕೊರೊನಾ ವಿರುದ್ಧ ತಮ್ಮ ಪ್ರಾಣ ಒತ್ತೆ ಇಟ್ಟು ಸಮರ ಸಾರಿರೋ ಅಂತಹ ವೈದ್ಯರು, ನರ್ಸ್ಗಳು ಹಾಗೂ ಆರೋಗ್ಯ ಸೇವಾಕರ್ತರಿಗೆ ಅನ್ನಪೂರ್ಣೆ ಅನಿಸಿಕೊಂಡಿದ್ದಾರೆ. ಹೌದು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿರೋ ಅಷ್ಟೂ ಮಂದಿ ಡಾಕ್ಟರ್ಸ್, ನರ್ಸ್ಗಳು ಹಾಗೂ ವೈದ್ಯಕೀಯ ಸೇವಾಕರ್ತರಿಗೆ ತಮ್ಮ ಕೈಯ್ಯಾರೆ ಅಡುಗೆ ಮಾಡಿ ಕಳುಹಿಸಿಕೊಟ್ಟಿರೋದು ವಿಶೇಷ.

ಕ್ಲೌಡ್ ಕಿಚನ್ ಜೊತೆ ಕೈಜೋಡಿಸಿರೋ ರಾಗಿಣಿ, ಸುಮಾರು ಮೂರು ದೊಡ್ಡ ಪಾತ್ರೆಗಳ ತುಂಬಾ ಅನ್ನ ಮಾಡಿ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದಾರೆ. ಒಬ್ಬ ನಟೀಮಣಿ ಬಣ್ಣ ಹಚ್ಚಿ ಕ್ಯಾಮೆರಾ ಮುಂದೆ ಅಭಿನಯಿಸಿ, ಅದಕ್ಕೆ ಸಂಭಾವನೆ ಪಡೆದು ಕೈತೊಳೆದುಕೊಳ್ಳೋದಷ್ಟೇ ತಮ್ಮ ಕೆಲಸ ಅನ್ನದೆ, ಈ ರೀತಿ ಸಾಮಾಜಿಕ ಬದ್ಧತೆ ಕಾಯ್ದುಕೊಂಡಿರೋದು ಪ್ರಶಂಸನೀಯ.

Also read:  ಮಾಧ್ಯಮ ಕ್ಷೇತ್ರ ಕೂಡಾ ಅಗತ್ಯ ಸೇವೆ ಎಂದು ಪರಿಗಣಿಸಿ ರಾಜ್ಯಸರ್ಕಾರ ಇವರ ಸುರಕ್ಷತೆಗೆ ಗಮನನೀಡಬೇಕು - ಸಿದ್ದರಾಮಯ್ಯ

ಪೌರ ಕಾರ್ಮಿಕರ ಸ್ಥಿತಿ ಗತಿ ವಿಚಾರಿಸಿದ್ದ ರಾಗಿಣಿ ದ್ವಿವೇದಿ

ಪೊಲೀಸರಿಗೆ ಸಲಾಂ ಜೊತೆ ಹಣ್ಣು- ಹಂಪಲು ವಿತರಣೆ

ಯಲಹಂಕದ ನ್ಯಾಯಾಂಗ ಬಡಾವಣೆಯಲ್ಲಿರೋ ರಾಗಿಣಿ, ಲಾಕ್ಡೌನ್ನಿಂದ ಎಲ್ಲರೂ ಮನೆಯಲ್ಲಿದ್ರೆ, ನಗರವನ್ನು ಸ್ವಚ್ಚಗೊಳಿಸೋದ್ರಲ್ಲಿ ಕಾರ್ಯೋನ್ಮುಖರಾಗಿದ್ದ ಪೌರ ಕಾರ್ಮಿಕರನ್ನ ಕರೆದು ಅವ್ರ ಸ್ಥಿತಿಗತಿ ವಿಚಾರಿಸಿದ್ರು. ಅವ್ರಿಗೆ ಟೀ ಮಾಡಿಕೊಟ್ಟು ಮಾನಸಿಕ ಸ್ಥೈರ್ಯ ತುಂಬೋ ಕಾರ್ಯ ಮಾಡಿದ್ರು.

ಅದಾದ ಬಳಿಕ ಇತ್ತೀಚೆಗೆ ಯಲಹಂಕದ ಪೊಲೀಸ್ ಸ್ಟೇಷನ್ಗೆ ತೆರಳಿ ಅಲ್ಲಿ ಹಗಲಿರುಳು ಕೆಲಸ ಮಾಡ್ತಿದ್ದ ಪೊಲೀಸ್ ಸಿಬ್ಬಂದಿಗೆ ಬಿಸ್ಕೆಟ್, ನೀರು, ಹಣ್ಣು- ಹಂಪಲು ನೀಡಿ ಅವ್ರ ಕೈಂಕರ್ಯಕ್ಕೆ ಸೆಲ್ಯೂಟ್ ಹೇಳಿ ಬಂದಿದ್ದರು. ನಿಜಕ್ಕೂ ಇದೊಂದು ರೀತಿಯ ಉತ್ತೇಜನ ಕಾರ್ಯವೇ ಸರಿ. ಕಷ್ಟಪಟ್ಟು ಕೆಲಸ ಮಾಡೋರಿಗೆ ಬೆನ್ನು ತಟ್ಟೋರು ಇಲ್ಲ ಅಂದ್ರೆ, ಅವ್ರ ಕೆಲಸಕ್ಕೆ ಅರ್ಥವೇ ಇಲ್ಲದಂತಾಗುತ್ತದೆ. ಹಾಗಾಗಿ ರಾಗಿಣಿ ಮಾಡಿದ ಈ ಕಾರ್ಯವನ್ನು ಸ್ಮರಿಸಲೇಬೇಕು. ನಿಮ್ಮ ಸೇವೆ ನಿತ್ಯ ನಿರಂತರವಾಗಿ ಹೀಗೇ ಮುಂದುವರೆಯಲಿ ಅನ್ನೋದು ಕನ್ನಡಿಗರ ಆಶಯ.

Also read:  'ಮಾಜಿ ಸಿಎಂ ಹೆಚ್ಡಿಕೆ ನನ್ನ ಬಗ್ಗೆ ಏನೇ ಹೇಳಿದ್ರು ಅದು ಆಶೀರ್ವಾದ'

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಎಂಟ್ರಟೈನ್ಮೆಂಟ್ ಹೆಡ್, ಟಿವಿ5

Latest article