Wednesday, May 18, 2022

ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಮೌನ ಧರಣಿ

Must read

ಬೆಂಗಳೂರು: ಉದ್ಯಮಿಗಳಾ ವಿಜಯ್​ ಮಲ್ಯ, ಚೋಕ್ಸಿ ಸಾಲಮನ್ನಾ ಹಿನ್ನೆಲೆ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಮೂವರ ಪೋಸ್ಟರ್​ ಹಿಡಿದು​​ ಬುಧವಾರ ಕೈ ಭವನದ ಮುಂದೆ ಮೌನ ಪ್ರತಿಭಟನೆ ನಡೆಸಿತು.

ಈ ವೇಳೆ ಮಾಧ್ಯಮದ ಜೊತೆ ಮಾತನಾಡಿದ ಕಾಂಗ್ರೆಸ್​ ಮುಖಂಡ ಮನೋಹರ್ ಅವರು, ರಾಹುಲ್ ಗಾಂಧಿ ಅವರು ಸಾಲದ ಬಗ್ಗೆ ಸಂಸತ್ತಿನಲ್ಲೇ ಪ್ರಸ್ತಾಪಿಸಿದ್ದರು. ಈಗ ಕೇಂದ್ರ ಸರ್ಕಾರ ಅವರ ಸಾಲ ಮನ್ನಾ ಮಾಡಿದೆ. ಇಂತ ಸಂದರ್ಭದಲ್ಲಿ ೬೮ ಸಾವಿರ ಕೋಟಿ ಸಾಲ ಮನ್ನಾ ಮಾಡಿದ್ದೇಕೆ(?) ಎಂದು ಅವರು ಹೇಳಿದರು.

ಇನ್ನು ಜನಸಾಮಾನ್ಯರು ಸಂಕಷ್ಟದಲ್ಲಿದ್ದಾರೆ, ಜನಸಾಮಾನ್ಯರ ಸಂಕಷ್ಟಕ್ಕೆ ಸರ್ಕಾರ ಸ್ಪಂದಿಸಿಲ್ಲ, ರೈತರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ಆದರೆ, ಉದ್ಯಮಿಗಳ ಪರವಾಗಿ ಸರ್ಕಾರ ವರ್ತಿಸುತ್ತಿದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಕೈ ಕಾರ್ಯಕರ್ತರ ಆಕ್ರೋಶ ವ್ಯಕ್ಯಪಡಿಸಿದ್ದಾರೆ.

ಕೇಂದ್ರ ಸರ್ಕಾರ ಉದ್ಯಮಿಗಳಾದ ಮೆಹುಲ್​ ಚೋಕ್ಸಿ, 8,048 ಕೋಟಿ ರೂ.ಗಳು, ಆರ್​ಇಐ ಅಗ್ರೋ ಲಿ( ಸಂದೀಪ್​, ಸಂಜಯ್​ ಜುಂಝನ್​ವಾಲಾ) 4,314 ಕೋಟಿ ರೂ.ಗಳು, ವಿನ್ಸಮ್​ ಡೈಮಂಡ್ಸ್​​ (ಜತಿನ್ ಮೆಹ್ತಾ) 4,076 ಕೋಟಿ ರೂ.ಗಳು, ರೊಟೋಮ್ಯಾಕ್​ ಗ್ಲೋಬಲ್​ (ಕೊಠಾರಿ) 2,850 ಕೋಟಿ ರೂ.ಗಳು, ಕುಡೋಸ್ ಕೆಮಿ, ಪಂಜಾಬ್​ 2,326 ಕೋಟಿ ರೂ.ಗಳು, ರುಚಿ ಸೋಯಾ ಇಂಡಸ್ಟ್ರೀಸ್​ (ಬಾಬಾ ರಾಮದೇವ್, ಬಾಲಕೃಷ್ಣ) 2,212 ಕೋಟಿ ರೂ.ಗಳು, ಜೂಮ್​ ಡೆವಲಪರ್ಸ್​​ 2,012 ಕೋಟಿ ರೂ.ಗಳು, ಕಿಂಗ್​ ಫಿಶರ್​ ಏರ್​ಲೈನ್ಸ್​(ವಿಜಯ್​ ಮಲ್ಯ) 1,943 ಕೋಟಿ ರೂ.ಗಳು ಸಾಲಮನ್ನಾ ಮಾಡಿದೆ. ​

Latest article