ಬೆಂಗಳೂರು: ಡಿಸೆಂಬರ್ 5ರಂದು ಕೆ.ಆರ್.ಪೇಟೆ ಉಪಚುನಾವಣೆ ಇದ್ದು, ಕೆ.ಆರ್.ಪೇಟೆ ಬಿಜೆಪಿ ಉಸ್ತುವಾರಿ ಬಿ.ವೈ.ವಿಜಯೇಂದ್ರ ಈ ಬಗ್ಗೆ ಮಾತನಾಡಿದ್ದಾರೆ.
ಕೆ.ಆರ್.ಪೇಟೆ ಚುನಾವಣೆ ಇದು ಜನ್ಮ ಕ್ಷೇತ್ರ. ಸಹಜವಾಗಿಯೇ ಮಹತ್ವ ಪಡೆದುಕೊಂಡಿದೆ. ತಂದೆಯವರ ಕನಸು ಇದೆ. ಇಲ್ಲಿ ಕಮಲ ಅರಳಿಸುವ ಮಹದಾಸೆ ಇದೆ. ಉಸ್ತುವಾರಿ ವಹಿಸಿ ಜನರ ಸಂಪರ್ಕ ಮಾಡಿದಾಗ ಜಾತಿ ಮೀರಿ ಬೆಂಬಲಕ್ಕೆ ನಿರ್ಧಾರ ಮಾಡಿದ್ದಾರೆ. ಯಡಿಯೂರಪ್ಪ 2008-09ರಲ್ಲಿ ಇಲ್ಲಿ ನೀರಾವರಿಗೆ ಹೆಚ್ಚು ಒತ್ತು ನೀಡಿದ್ದರು. ದಲಿತ ಕೇರಿಯಲ್ಲಿ ಅಭಿವೃದ್ಧಿ ಆಗಬೇಕಾಗಿದೆ. ಇನ್ನೂ ಗೂಳೆ ನಿಂತಿಲ್ಲ. ನಾರಾಯಣಗೌಡ ರ ಆಗಮನದಿಂದ ಪಕ್ಷಕ್ಕೆ ಶಕ್ತಿ ಬಂದಿದೆ. ನಮ್ಮನ್ನ ಸ್ವೀಕಾರ ಮಾಡೋದನ್ನ ನೋಡಿದರೆ ನಮಗೆ ವಿಶ್ವಾಸ ಇದೆ ಎಂದು ಹೇಳಿದ್ದಾರೆ.
ಸುವರ್ಣಾಕ್ಷರದಲ್ಲಿ ಬರೆಯಬಹುದಾದ ತೀರ್ಪನ್ನು ಕ್ಷೇತ್ರದ ಜನ ಕೊಡ್ತಾರೆ ಎಂಬ ವಿಶ್ವಾಸವಿದೆ. ಎಲ್ಲರೂ ಒಗ್ಗೂಡಿ ಕೆಲಸ ಮಾಡುತ್ತಿದ್ದಾರೆ. ಅತಂತ್ರ ಸರ್ಕಾರ ಇತ್ತು. ಯಾವುದೇ ಅಭಿವೃದ್ಧಿ ಆಗಿರಲಿಲ್ಲ. ಹೀಗಾಗಿ ರಾಜೀನಾಮೆ ನೀಡಿ ನಮ್ಮ ಕಡೆ ಬಂದಿದ್ದಾರೆ. ಸ್ಥಿರ ಸರ್ಕಾರಕ್ಕೆ ಬೆಂಬಲ ನಿಡ್ತಾರೆ ಎಂಬ ವಿಶ್ವಾಸ ಇದೆ. ಯಾರು ಯಾರನ್ನು ಇಳಿಸಿದರು ಎಂಬುದು ಜನರಿಗೆ ಗೊತ್ತಿದೆ. ಒಕ್ಕಲಿಗರ ಮುಖಂಡರನ್ನು ಸಿಎಂ, ಡಿಸಿಎಂ ಮಾಡಿದ್ದು ಯಡಿಯೂರಪ್ಪ. ಜಾತಿಗೆ ಮೀರಿ ಬಿಜೆಪಿ ಬೆಂಬಲಿಸ್ತಾರೆ ಎಂದು ವಿಜಯೇಂದ್ರ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇನ್ನು ನಾಮಪತ್ರ ವೇಳೆಯ ಘಟನೆ ನೋವಾಗಿದೆ. ನಾರಾಯಣಗೌಡ ಮಂತ್ರಿಯಾಗಿ ಬಂದಾಗ ಚಪ್ಪಲಿ ಹೊಡೆದವರೇ ಸನ್ಮಾನ ಮಾಡುತ್ತಾರೆ. ನೈತಿಕತೆ ಪಾಠ ಕಲಿಯುವ ಅವಶ್ಯಕತೆ ಯಡಿಯೂರಪ್ಪಗೆ ಇಲ್ಲ. ಹೆಚ್ಡಿಕೆ ಕಾಲದಲ್ಲಿ ಅನುದಾನವನ್ನು ಕೇವಲ ಎರಡು ಮೂರು ಜಿಲ್ಲೆಗೆ ಮೀಸಲಾಗಿತ್ತು. ಯಡಿಯೂರಪ್ಪ ರಾಜ್ಯಕ್ಕೆ ಸಮವಾಗಿ ಅನುದಾನ ನೀಡಿದ್ದಾರೆ ಎಂದು ಸಿಎಂ ಪರ ವಿಜಯೇಂದ್ರ ಬ್ಯಾಟ್ ಬೀಸಿದ್ದಾರೆ.