Wednesday, May 18, 2022

'ಕುರುಬ ಸಮುದಾಯಕ್ಕೆ ಅವಹೇಳನ ಮಾಡಿದ್ರೆ ನನ್ನ ವಂಶ ನಾಶವಾಗಲಿ'

Must read

ತುಮಕೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರ ವಿರುದ್ದ ಮಾಜಿ ಸಚಿವ ಸೊಗಡು ಶಿವಣ್ಣ ಅವರು ಮತ್ತೆ ಗುಡುಗಿದ್ದಾರೆ. ವೀರ ಸಾವರ್ಕರ್ ಅವರನ್ನು ಅವಮಾನಿಸಿದಕ್ಕೆ ಸಿದ್ದರಾಮಯ್ಯ ಅವರನ್ನು ಜಾತಿ ಟೆರರಿಸ್ಟ್ ಶಿವಣ್ಣ ಅವರು ಅಂದಿದ್ದರು.

ಸೊಗಡು ಶಿವಣ್ಣ ಅವರ ಹೇಳಿಕೆ ಖಂಡಿಸಿ ಕುರುಬ ಸಮುದಾಯ ಮತ್ತು ಸಿದ್ದರಾಮಯ್ಯ ಅಭಿಮಾನಿಗಳು ನಿನ್ನೆ ಪ್ರತಿಭಟನೆ ನಡೆಸಿ ಅವರು ಕ್ಷಮೆ ಕೇಳುವಂತೆ ಪ್ರತಿಭಟನಾಕಾರರು ಒತ್ತಾಯ ಮಾಡಿದ್ದರು.

ಈ ಹಿನ್ನೆಲೆ ತುಮಕೂರಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸಿದ್ದರಾಮಯ್ಯ ಅವರನ್ನು ಪರಮೋಚ್ಚ ನಾಯಕರು ಅಂತಾರೆ, ಅವರಿಗೆ ಮಾನ-ಮರ್ಯಾದೆ ಇದೆಯಾ(?) ಬಾಗಲಕೋಟೆಯಲ್ಲಿ ಸ್ವೀಕರ್​ ಕಾಗೇರಿ ವಿರುದ್ದವೇ ಏಕವಚನದಲ್ಲಿ ಮಾತನಾಡಿದ್ದಾರೆ ಎಂದು ಅವರು ತಿಳಿಸಿದರು.

ಇನ್ನು ಒಬ್ಬ ಮಾಜಿ ಮುಖ್ಯಮಂತ್ರಿಗಳಿಗೆ ಸ್ವೀಕರ್​ ಅವರನ್ನು ಗೌರವಿಸಬೇಕು ಅನ್ನುವ ಜ್ಞಾನ ಇಲ್ಲ, ಪ್ರಧಾನಿ ಮೋದಿಯನ್ನು ಇಡೀ ಜಗತ್ತೇ ಮೆಚ್ಚಿಕೊಂಡಿದೆ. ಅಂಥವರನ್ನು ಸಿದ್ದರಾಮಯ್ಯರ ನರಹಂತಹಕ ಎನ್ನುತ್ತಾರೆ. ಇದು ಸಿದ್ದರಾಮಯ್ಯರ ಸಂಸ್ಕೃತಿ, ಇದಕ್ಕೆ ಸಿದ್ದರಾಮಯ್ಯರ ಬೆಂಬಲಿಗರು ಏನಂತಾರೆ ಎಂದು ಅವರು ನುಡಿದರು.

ಅದುವಲ್ಲದೇ ನಾಲ್ಕು ಬಾರಿ ಮುಖ್ಯಮಂತ್ರಿಯಾದ ಯಡಿಯೂರಪ್ಪ ಅವರನ್ನು ಸಿದ್ದರಾಮಯ್ಯರ ಏಕವಚನದಲ್ಲಿ ವಾಗ್ದಾಳಿ ನಡೆಸಬಹುದಾ(?) ನಾವು ಮಾತಾಡಿದರೆ ಮಾತ್ರ ತಪ್ಪೆ(?) ನನ್ನದು ಹಿಂದೂ ರಕ್ತ, ಹಿಂದುಗಳಿಗೆ ಅಗೌರವ ತೋರಿದರೆ ನನ್ನ ರಕ್ತ ಕುದಿಯುತ್ತದೆ ಹಾಗಾಗಿ ಸಾವರ್ಕರ್ ವಿರುದ್ದ ಮಾತಾಡಿದ ಸಿದ್ದರಮಯ್ಯರನ್ನ ತರಾಟೆ ತಗೊಂಡೆ ಎಂದು ಅವರು ಸ್ಪಷ್ಟನೆ ನೀಡಿದರು.

ಅಷ್ಟೇ ಅಲ್ಲದೇ ಜಾತಿ-ಜಾತಿ ನಡುವೆ ತಂದಿಕ್ಕಿ, ಭ್ರಷ್ಟಾಚಾರ ಮಾಡಿದ ಇವರುಗಳು ಹಿಂದೂ ಟೆರರಿದಸ್ಟ್​ಗಳು. ಸಿದ್ದರಾಮಯ್ಯ ಅವರನ್ನು ಏಕವಚನದಲ್ಲಿ ಮಾತಾಡೋದರಲ್ಲಿ ಪರನೋಚ್ಚ ನಾಯಕ. ಎನಲೋ ಮಗಾ.. ಏನಲೋ ತಮ್ಮ ಎಂದು ಗೌರವ ಕೊಡದೇ ಮಾತಾಡೋದರಲ್ಲಿ ಆತ ಪರಮೋಚ್ಚ ನಾಯಕ ಎಂದು ಸಿದ್ದರಾಮಯ್ಯ ವಿರುದ್ಧ ಗುಡುಗಿದರು.

ಇನ್ನು ನೀನು ಬದುವುದಕ್ಕೆ ಯಾಕೆ ಸಮಾಜ ಒಡೀತಿದ್ದಿರಾ(?) ಹಿಂದುಗಳನ್ನು ಯಾಕೆ ಅವಹೇಳನ ಮಾಡುತಿದ್ದೀರಾ(?) ಧರ್ಮಸ್ಥಳದ ಪಾವಿತ್ರತೆ ಹಾಳು ಮಾಡಿ ಧಾರ್ಮಿಕ ನಂಬಿಕೆಗೆ ಧಕ್ಕೆ ತಂದಿದ್ದಾರೆ. ಮಾತೆತ್ತಿದರೆ ಯಡಿಯೂರಪ್ಪ ಜೈಲಿಗೆ ಹೋಗಿ ಬಂದವರು ಅಂತಾರೆ, ಯಾಕೆ ಇವರಲ್ಲಿ ಮನಿ ಉಗ್ರವಾದಿಗಳು ಇಲ್ಲವಾ(?) ಜೈಲಿಗೆ ಹೋಗಿ ಬಂದಿಲ್ಲ, ನೀನೂ ಜೈಲಿಗೆ ಹೋಗುವೇ ಇರಪ್ಪಾ! ಅರ್ಕಾವತಿ ಹಗರಣ ಇಲ್ವಾ!ಲೋಕಾಯುಕ್ತ ತೆಗೆದು ಎಸಿಬಿ ಮಾಡಿಕೊಂಡು ಅರ್ಕಾವತಿಯಿಂದ ಬಚಾವ್ ಆಗಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

Also read:  ಮಹಾರಾಷ್ಟ್ರ: ಸಂವಿಧಾನ ಬದ್ಧವಾದ ಸರ್ಕಾರ ರಚನೆಯಾಗಿದೆ - ಪ್ರಹ್ಲಾದ್​ ಜೋಶಿ

ನಾವು ನಾಟಕ ನೋಡುವಾಗ ಭೀಮಾ, ಅರ್ಜುನ ಪಾತ್ರವನ್ನು ನೋಡುತ್ತಿವಿ, ಹಾಗೆನೇ ದುರ್ಯೋಧನನ ಮಾತನ್ನೂ ನೆನೆಪಿಸಿಕೊಳ್ಳುತ್ತವೆ ಎಂದು ಸಿದ್ದರಾಮಯ್ಯ ಅವರನ್ನು ಸೊಗಡು ಶಿವಣ್ಣ ಅವರು ದುರ್ಯೋಧನಿಗೆ ಹೋಲಿಸಿ ಮಾತನಾಡಿದರು.

ಹಾಗಾಗಿ ಅವರ ಮಾತನ್ನು ನಾವು ಕೆಲವೊಮ್ಮೆ ನೆನಪಿಸಿಕೊಳ್ಳುತ್ತೇವೆ. ಯಾಕೆಂದರೆ ಸಿದ್ದರಾಮಯ್ಯ ಅವರು ಏಕವಚನದಲ್ಲಿ ಮಾತಾಡುತ್ತಾರೆ. ನಮಗೂ ಕೂಡ ಆಗ್ಗಾಗೆ ಸಿದ್ದರಾಮಯ್ಯ ಅವರು ನೆನಪಾಗುತ್ತಾರೆ. ನಾನು ಯಾವುದೇ ಕಾರಣಕ್ಕೂ ಕ್ಷಮೆ ಕೇಳಲ್ಲ, ಇವರು ಜಾತಿ ವಿಭಜನೆ ಮಾಡೋರು. ನಾನು ಕುರುಬ ಸಮುದಾಯಕ್ಕೆ ಅವಹೇಳನ ಮಾಡಿದರೆ ನನ್ನ ವಂಶ ನಾಶವಾಗಲಿ. ಕುರುಬ ಸಮುದಾಯಕ್ಕೆ ಅವಹೇಳ ಮಾಡಿದರೆ ಯಾವುದಾರೂ ಸರ್ಕಾರ ನೇಣು ಹಾಕಲಿ ಎಂದು ಮಾಜಿ ಸಚಿವ ಸೊಗಡು ಶಿವಣ್ಣ ಅವರು ಮಾತನಾಡಿದ್ದಾರೆ.

Latest article