Tuesday, August 16, 2022

ಕುಮಾರಸ್ವಾಮಿ ಮಾತಿನಲ್ಲೇ ಮರುಳು ಮಾಡುತ್ತಾರೆ – ಬಿ.ಸಿ ಪಾಟೀಲ್

Must read

ಹಾವೇರಿ: ಮಾಜಿ ಮುಖ್ಯಮಂತ್ರಿ ಹೆಚ್​.ಡಿ ಕುಮಾರಸ್ವಾಮಿ ಮಾತಿನಲ್ಲಿ ಬ್ರದರ್ ಅಂದು ಮರುಳು ಮಾಡುತ್ತಾರೆ ಎಂದು ಅನರ್ಹ ಶಾಸಕ ಬಿ. ಸಿ ಪಾಟೀಲ್ ಗುರುವಾರ ಹೇಳಿದ್ದಾರೆ.

ತಮ್ಮ ನಿವಾಸದಲ್ಲಿ ನಡೆಯುತ್ತಿರೋ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಒಲ್ಲದ ಮನಸ್ಸಿನಿಂದ ಕುಮಾರಸ್ವಾಮಿಯವರನ್ನು ಸಿಎಂ ಮಾಡಿದ್ವಿ ಎಂದು ಅಸಮಾಧಾನ ಹೊರಹಾಕಿದರು.

ಇನ್ನೂ ಮೂರು ಬಾರಿ ಹೇಳಿದರು ಕಾಂಗ್ರೆಸ್ ನಾಯಕರು ನನಗೆ ಸಚಿವ ಸ್ಥಾನ ನೀಡುವೆ ಅಂತ ಆದರೆ ಮಾಡಲಿಲ್ಲ, ಸಚಿವ ಸ್ಥಾನ, ನಿಗಮ ಮಂಡಳಿಯೂ ಇಲ್ಲ ಎಂದು ಕಿಡಿಕಾರಿದರು. ಮಂಡ್ಯ , ಮೈಸೂರು, ರಾಮನಗರಕ್ಕೆ ಮಾತ್ರ ಸಚಿವ ಸ್ಥಾನ ಅನುದಾನ. ನನಗೆ ಯಾವುದೇ ಕೆಲಸ ಮಾಡಲು ಸಮ್ಮೀಶ್ರ ಸರ್ಕಾರದಲ್ಲಿ ಬಿಡಲಿಲ್ಲ. ಕೇವಲ ಐದಾರೂ ಜಿಲ್ಲೆಯಲ್ಲಿ ಮಾತ್ರ ಅನುದಾನ ನೀಡಿದರು ಎಂದು ಆಕ್ರೋಶ ಹೊರಹಾಕಿದರು.

ಅಂದು ಉತ್ತರ ಕರ್ನಾಟಕದ ಜನ ಸಂಮಿಶ್ರ ಸರ್ಕಾರದ ಅವಧಿಯಲ್ಲಿ ಕುರಿಮರಿಗಳಂತೆ ಆಗಿದ್ದೆವು, ಸ್ವಾಭಿಮಾನಕ್ಕೆ ಧಕ್ಕೆ ಬಂದಾಗ ಹಿರೇಕೆರೂರು ನೆಲ ಏನು ಅಂತ ಗೊತ್ತಾಗುತ್ತದೆ. ಸ್ವಾಭಿಮಾನಕ್ಕಾಗಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದೆ. ಆದರೆ ನಾನು ಇವತ್ತು ಅನರ್ಹ ಶಾಸಕ ಅಲ್ಲ ಎಂದು ಬಿ. ಸಿ ಪಾಟೀಲ್​ ತಿಳಿಸಿದರು.

ಯಡಿಯೂರಪ್ಪ ಮುಖ್ಯ ಮಂತ್ರಿ ಆಗಲಿ ಎಂದು ಲಿಂಗಾಯತ ಶಾಸಕ ರಾಜೀನಾಮೆ ನೀಡಲಿಲ್ಲ, 16 ಶಾಸಕರು ಬೇರೆ ಬೇರೆ ಜಾತಿಯ ಶಾಸಕರು. ಬಿ. ಸಿ ಪಾಟೀಲ್ ಸ್ವಾಭಿಮಾನವನ್ನು ಹಣಕ್ಕೆ ಮಾರುವುದಿಲ್ಲ. ಈ ಮಣ್ಣಿನ ಶಕ್ತಿ ಮುಖ್ಯಮಂತ್ರಿ ಮಾಡುವ ಶಕ್ತಿ ಹಿರೇಕೆರೂರಿನಲ್ಲಿದೆ.

ಸಿಎಂ ಯಡಿಯೂರಪ್ಪ ಸಹಾಯದಿಂದ ಸದ್ಯ 185 ಕೋಟಿ ರೂಪಾಯಿ ಯೋಜನೆಗೆ ಅನುಮೋದನೆ ಸಿಕ್ಕಿದೆ ಎಂದು ಬಿ.ಸಿ ಪಾಟೀಲ್ ತಿಳಿಸಿದರು.

Latest article