Thursday, May 19, 2022

ಕುಮಾರಸ್ವಾಮಿ ಎರಡು ಸಾರಿ ಮುಖ್ಯಮಂತ್ರಿ ಆಗುವುದಕ್ಕೆ ನಾನೇ ಕಾರಣ – ಬಿ ಸಿ ಪಾಟೀಲ

Must read

ಹಾವೇರಿ: ಕುಮಾರಸ್ವಾಮಿ ಎರಡು ಸಾರಿ ಮುಖ್ಯಮಂತ್ರಿ ಆಗಬೇಕಾದರೆ. ನಾನು ಶಾಸಕನಾಗಿ ಸಹಿ ಹಾಕಿದಕ್ಕೆ ಮುಖ್ಯಮಂತ್ರಿ ಆಗಿದ್ದು ಎಂದು ಗುರುವಾರ ಅನರ್ಹ ಶಾಸಕ ಬಿ. ಸಿ ಪಾಟೀಲ ಹೇಳಿದ್ದಾರೆ.

ಹಿರೇಕೆರೂರಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಿ ಸಿ ಪಾಟೀಲ ಹಗುರವಾಗಿ ಮಾತನಾಡಬಾರದು, ನೈತಿಕತೆ ಇಲ್ಲಾ ಅವರಿಗೆ ಎನ್ನುವ ಕುಮಾರಸ್ವಾಮಿ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದರು. ಬಿ.ಸಿ ಪಾಟೀಲಗೆ ನೈತಿಕ ಹಕ್ಕಿಲ್ಲವೇ. ನಾವು ಅನೈತಿಕತೆ ಮಾಡಿದ್ದೇವಾ..? ಎಂದು ಕುಮಾರಸ್ವಾಮಿ ವಿರುದ್ಧ ಕಿಡಿಕಾರಿದರು.

ನಾವು ನೈತಿಕತೆ ಕಳೆದುಕೊಂಡಿಲ್ಲಾ , ಯಾಕೆ ಹಾಗೇ ಮಾತನಾಡುತ್ತಾರೋ ಗೊತ್ತಾಗ್ತಿಲ್ಲಾ. ನಂತರ ಮುಂಬೈಗೆ ಹೋದಾಗ

ಕುಮಾರಸ್ವಾಮಿ ಕಾಲ್ ಮಾಡಿದ್ದರು ಎಂಬ ಆರೋಪ ಕುಮಾರಸ್ವಾಮಿ ನಿರಾಕರಣೆ ಹಿನ್ನೆಲೆ ತಿಳಿಸಿದ ಅವರು, ಅವರ ಪಿಎಯಿಂದ ಬಂದಿರೋದು ರೆಕಾರ್ಡ್ ಇದೆ. ಸುಮ್ಮನೇ ಮಾತ್ನಾಡುತ್ತಾರೆ ಎಂದರು.

ರಾಜಕೀಯದಲ್ಲಿ ಸ್ನೇಹಿತರು. ಈ ರೀತಿ ಸುಳ್ಳು ಹೇಳುವುದು ಸರಿಯಲ್ಲ. ಮುಖ್ಯಮಂತ್ರಿ ಆಗಿದ್ದವರು, ಸ್ನೇಹಿತರಲ್ಲಾ ಅನ್ನೋಕಾಗಲ್ಲಾ. ರಾಜಕೀಯ ಬೇರೆ, ಸ್ಬೇಹಿತರೆ ಬೇರೆ. ಅಪಾದನೆ ಮಾಡಿದಾಗ ಉತ್ತರ ಸರಿ ಅಲ್ಲಾ ಅನ್ಮೋದು ನನ್ನ ಹಕ್ಕು. ನಾವು ಯಾವ ಪಕ್ಷಕ್ಕೂ ಹೋಗಲ್ಲಾ.ಸ್ವತಂತ್ರರಾಗಿದ್ದೇವೆ. ಕಾಂಗ್ರೆಸ್ ನಿಂದ ನಮ್ಮನ್ನು ಉಚ್ಛಾಟನೆ ಮಾಡಿದ್ದಾರೆ. ಇದೀಗ ಬಣಕಾರ ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷರನ್ನಾಗಿ ಮಾಡಿದ್ದಾರೆ. ಹೀಗಾಗಿ ಅವರಿಗೂ ತಾಲೂಕಿನ ಅಭಿವೃದ್ಧಿ ಕಾರ್ಯಕ್ರಮದಲ್ಲಿ ಸನ್ಮಾನ ಇಟ್ಟುಕೊಂಡಿದ್ದೇವೆ ಎಂದ ಬಿ. ಸಿ ಪಾಟೀಲ ತಿಳಿಸಿದರು.

Latest article