ಚಿಕ್ಕಬಳ್ಳಾಪುರ: ಕಾಂಗ್ರೆಸ್-ಜೆಡಿಎಸ್ ಪಕ್ಷಗಳು ತಿರುಕನ ಕನಸು ಕಾಣ್ತಿವೆ. ಪ್ರಜಾಪ್ರಭುತ್ವದಲ್ಲಿ ನಮ್ಮ ಮಾಲೀಕರು ಜನರು, ಸಿದ್ದರಾಮಯ್ಯ, ದೇವೇಗೌಡರು, ಡಿಕೆಶಿ-ಹೆಚ್ಡಿಕೆ ಅಲ್ಲ ಎಂದು ಸಚಿವ ಸಿ.ಟಿ ರವಿ ಅವರು ಹೇಳಿದರು.
ಚಿಕ್ಕಬಳ್ಳಾಪುರ ಉಪಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಅಭ್ಯರ್ಥಿ ಡಾ.ಕೆ ಸುಧಾಕರ್ ಪರ ಪ್ರಚಾರ ಮಾಡಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಭಿವೃದ್ಧಿ ಕಡೆಗಣಿಸಿದ ಸರ್ಕಾರ ಮತ್ತೆ ಬೇಕಾ. ಮನೆ ಅಳಿಯನಿಗೆ ಈಗ ಚಿಕ್ಕಬಳ್ಳಾಪುರ ನೆನಪಾಗಿದೆ. ರಾಮನಗರ ಮತ್ತು ಚಿಕ್ಕಬಳ್ಳಾಪುರ ಎರಡು ಕಣ್ಣಿಂದಂತೆ ಎಂದು ಕುಮಾರಸ್ವಾಮಿ ಅವರು ಹೇಳುತ್ತಿದ್ದಾರೆ. ಆದರೆ ಕುಮಾರಸ್ವಾಮಿ ಅವರು, ಒಂದು ಕಣ್ಣಿಗೆ ಬೆಣ್ಣೆ ಇನ್ನೊಂದು ಕಣ್ಣಿಗೆ ಸುಣ್ಣ ಇಡುತ್ತಿದ್ದಾರೆ ಎಂದರು.
ಅಲ್ಲದೆ, ಕಾಂಗ್ರೆಸ್-ಜೆಡಿಎಸ್ನವರು ಬರೆ ಬೊಗಳೇ ದಾಸರಾಗಿದ್ದಾರೆ. ನಾವು ಬರಿ ಮಾತು ಹೇಳದೆ ಕೆಲಸ ಮಾಡಿದ್ದೇವೆ. ಕಾಂಗ್ರೆಸ್ ಜೆಡಿಎಸ್ ನವರು ಹೊಟ್ಟೆಗೆ ಎಣ್ಣೆ ಬಿಟ್ಕೊಳ್ಳಲಿ. ನಾವು ಕಣ್ಣಿಗೆ ಎಣ್ಣೆ ಹಾಕ್ಕೊಂಡು ನಾಳೆ, ನಾಡಿದ್ದು ಕೆಲಸ ಮಾಡಬೇಕು. ಒಂದು ಒಟು ಮೂರು ಲಾಭವಾಗುತ್ತದೆ. ಒಂದು ಶಾಸಕ, ಸಚಿವ ಸ್ಥಾನ ಎಂದು ಮತದಾರರಿಗೆ ಪ್ರವಾಸೋದ್ಯಮ ಸಚಿವ ಸಿ.ಟಿ ರವಿ ಅವರು ತಿಳಿಸಿದರು.