ಬೆಂಗಳೂರು: ಕಿಸ್ ಇದೊಂದು ಸಿನಿಮಾ ಮಾತ್ರ ಅಲ್ಲ, ಪ್ರೇಮಿಗಳ ಪ್ರಪಂಚ. ಮತ್ತೊಂದು ಪ್ರೇಮಲೋಕ. ಪರಿಶುದ್ಧ ಪ್ರೇಮಕಥೆಯ ಉತ್ಸವ. ತುಂಟ ತುಟಿಗಳ ಆಟೋಗ್ರಾಫ್ ಆದ್ರೂ. ಇಡೀ ಕುಟುಂಬ ನೋಡಬಹುದಾದಂತಹ ಪರಿಶುದ್ಧ ಪ್ರೇಮ ದೃಶ್ಯಕಾವ್ಯ. ಅಂತಹ ಯೂತ್ಫುಲ್ ಕಿಸ್ಗೆ ಆ್ಯಕ್ಷನ್ ಪ್ರಿನ್ಸ್ ಮುತ್ತಿಕ್ಕಿದ್ದಾರೆ.
ಕಿಸ್ ಹೈಸ್ಕೂಲ್ ಹುಡ್ಗರಿಂದ ಹಿಡಿದು ಕಾಲೇಜ್ ಹುಡ್ಗರ ವರೆಗೆ, ಅಷ್ಟೇ ಯಾಕೆ ಮನರಂಜನೆ ಬಯಸೋ ಪ್ರತಿಯೊಬ್ಬ ಸಿನಿಪ್ರಿಯನ ಬಾಯಲ್ಲೂ ಜೈಕಾರ ಹೊಡೆಸಿಕೊಳ್ತಿರೋ ತುಂಟ ತುಟಿಗಳ ಆಟೋಗ್ರಾಫ್. ಕಳೆದ ವಾರ ತೆರೆಕಂಡ ಸ್ಟೈಲಿಶ್ ಡೈರೆಕ್ಟರ್ ಎಪಿ ಅರ್ಜುನ್ರ ಕಿಸ್ಗೆ ಇದೀಗ ಹ್ಯಾಟ್ರಿಕ್ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಮುತ್ತಿಕ್ಕಿದ್ದಾರೆ.
ಶ್ರೀಲೀಲಾ ಹಾಗೂ ವಿರಾಟ್ ನಟನೆಯ ಸ್ಯಾಂಡಲ್ವುಡ್ನ ಕ್ಯೂಟ್ ಟ್ರೆಂಡಿ ಆನ್ ಸ್ಕ್ರೀನ್ ಜೋಡಿಯಾಗಿದ್ದು, ಔಟ್ ಲುಕ್ನಷ್ಟೇ ಮುದ್ದಾಗಿ ನಟಿಸಿರುವ ಈ ಜೋಡಿ ಅಕ್ಷರಶಃ ದೊಡ್ಡ ಪರದೆ ಮೇಲೆ ಮೋಡಿ ಮಾಡುತ್ತಿದೆ. ಬರೀ ಯೂತ್ಸ್ ಅಷ್ಟೇ ಅಲ್ಲ, ಇಡೀ ಕುಟುಂಬ ಕೂತು ನೋಡುವಂತಹ ಪರಿಶುದ್ಧವಾದಂತಹ ಪ್ರೇಮಕಥಾನಕ ಹೊಂದಿದೆ.
ಜೆಪಿ ನಗರದ ಸಿದ್ಧಲಿಂಗೇಶ್ವರ ಥಿಯೇಟರ್ನಲ್ಲಿ ಕಿಸ್ ಸಿನಿಮಾ ನೋಡಿದ ಧ್ರುವ ಸರ್ಜಾ ಡೈರೆಕ್ಟರ್ ಅರ್ಜುನ್ ಹಾಗೂ ಶ್ರೀಲೀಲಾ-ವಿರಾಟ್ರನ್ನ ಹಾಡಿ ಹೊಗಳಿದ್ದಾರೆ. ಅದ್ಧೂರಿ ದಿನಗಳನ್ನ ನೆನೆದ ಧ್ರುವ, ಅಂದು ಇದೇ ನಿರ್ದೇಶಕರು ನನ್ನನ್ನ ಇಂಟ್ರಡ್ಯೂಸ್ ಮಾಡಿದಾಗ ನಾನೊಬ್ಬ ಹೊಸಬ. ಇಂದು ಇವರೂ ಹೊಸಬರೇ. ಆದ್ರೆ ಹೊಸ ಪ್ರತಿಭೆಗಳನ್ನ ಇಟ್ಟುಕೊಂಡು ಅತ್ಯದ್ಭುತ ಸಿನಿಮಾ ಮಾಡಿದ್ದಾರೆ ಅಂತ ಕಿಸ್ಗೆ ಫುಲ್ ಮಾರ್ಕ್ಸ್ ಕೊಟ್ಟಿದ್ದಾರೆ.
ಚಿಕ್ಕಣ್ಣನ ಕಾಮಿಡಿ ಟ್ರ್ಯಾಕ್ನ ಹೈಲೆಟ್ ಮಾಡಿ ಹೇಳಿದ ಬಹದ್ದೂರ್ ಗಂಡು, ಶ್ರೀಲೀಲಾ- ವಿರಾಟ್ ಟಾಮ್ ಌಂಡ್ ಜೆರ್ರಿ ಸೀಕ್ವೆನ್ಸ್ಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ರು. ಅದರಲ್ಲೂ ನೀನೆ ಮೊದಲು ಹಾಡಿಗೆ ಧ್ರುವ ಸರ್ಜಾ ಕ್ಲೀನ್ ಬೋಲ್ಡ್ ಆಗಿಬಿಟ್ಟಿದ್ದಾರೆ.
ಅದೇನೇ ಇರಲಿ, ದೊಡ್ಡ ಸ್ಟಾರ್ಗಳ ಡೇಟ್ಸ್ ರೆಡಿ ಇದ್ದರು ಹೊಸಬರ ಜೊತೆ ಸಿನಿಮಾ ಮಾಡಿ ಗೆದ್ದಿರುವ ಎಪಿ ಅರ್ಜುನ್ಗೆ ಇಡೀ ಚಿತ್ರರಂಗ ಶಹಬ್ಬಾಶ್ ಅಂತಿದೆ. ನಿರ್ಮಾಪಕನಾಗಿಯೂ ಸಕ್ಸಸ್ ಆಗುತ್ತಿರುವ ಅರ್ಜುನ್ಗೆ ಅಂಬಾರಿ ಮೇಲೆ ಹೊರುವಷ್ಟು ಬಾಕ್ಸಾಫೀಸ್ ಕಲೆಕ್ಷನ್ ಆಗಲಿ ಅಂತ ಹಾರೈಸೋಣ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಎಂಟ್ರಟೈನ್ಮೆಂಟ್ ಹೆಡ್, ಟಿವಿ5