Wednesday, May 18, 2022

ಕಿರಿಕ್​ ಹುಡುಗಿ ಟಿಕ್​ಟಾಕ್​ ಬ್ಯಾನ್​ ಆಗಬಾರದು ಅಂದಿದ್ದೇಕೆ..?

Must read

ಕೊರೊನಾ ಸಮಸ್ಯೆ ಶುರುವಾದಾಗಿನಿಂದ ಚೀನಾ ಪ್ರಾಡಕ್ಟ್​, ಚೀನಾ ಆ್ಯಪ್​ ವಿರುದ್ಧ ದೇಶದ ಜನರು ಕಿಡಿ ಕಾರ್ತಿದ್ದಾರೆ. ಅದೇ ನಿಟ್ಟಿನಲ್ಲಿ ಟಿಕ್​ಟಾಕ್​ ಆ್ಯಪ್ ಬ್ಯಾನ್​ ಆಗಬೇಕು ಅಂತ ಅಭಿಯಾನ ಕೂಡ ಶುರುವಾಗಿದೆ. ಇದೀಗ ಕಿರಿಕ್​ ಹುಡುಗಿ ಸಂಯುಕ್ತಾ ಹೆಗ್ಡೆ ಕೂಡ ಈ ಬಗ್ಗೆ ಮಾತನಾಡಿದ್ದು, ಟಿಕ್​ಟಾಕ್​ ಬ್ಯಾನ್​ಆಗಬಾರದು ಅಂತ ಹೇಳಿದ್ದಾರೆ. ಹಾಗಾದ್ರೆ ಸಂಯುಕ್ತ ಟಿಕ್​ಟಾಕ್​ ಪರವಾಗಿ ಮಾತನಾಡ್ತಿದ್ದೀರಾ(?) ಕ್ಲಾರಿಟಿ ಬೇಕು ಅಂದ್ರೆ ಈ ಸ್ಟೋರಿ ಓದಿ.

ಟಿಕ್​ಟಾಕ್​ ನಿಂತ್ರೂ..ಕೂತ್ರೂ ಈ ಆ್ಯಪ್​ಅನ್ನ ಬಳಕೆ ಮಾಡುತ್ತಿದ್ದಾರೆ ನಮ್ಮ ಜನ. ಅದರಲ್ಲೂ ಟಿಕ್​ಟಾಕ್​ ಬಳಕೆದಾರರ ಪೈಕಿ ನಮ್ಮ ಭಾರತೀಯರೇ ಹೆಚ್ಚು ಅನ್ನೋದು ಹೌದು. ಆದರೆ, ಕೊರೊನಾ ಸಮಸ್ಯೆ ಶುರುವಾದಾಗಿನಿಂದ ಸ್ವ-ದೇಶಿ ಪ್ರಾಡಕ್ಟ್​ಗಳನ್ನು ಬಳಸಿ, ಟಿಕ್​ಟಾಕ್​ ಬ್ಯಾನ್ ಮಾಡಿ ಎಂಬ ಅಭಿಯಾನ ಶುರುವಾಯ್ತು.

ಈಗಾಗಲೇ ಗೊತ್ತೀರೋ ಟಿಕ್​ಟಾಕ್​ ಕೂಡ ಚೀನಾದ ಒಂದು ಆದಾಯದ ಮೂಲವಾಗಿದೆ. ಹಾಗಾಗಿ ಇದಕ್ಕೆ ಕಡಿವಾಣ ಹಾಕ್ಬೇಕು ಅಂತ್ಲೇ ಬ್ಯಾನ್​ ಟಿಕ್​ಟಾಕ್​ ಅಭಿಯಾನ ಶುರುವಾಘಿದ್ದು, ಈಗಾಗಲೇ ಸಾಕಷ್ಟು ಪರ್ಸೇಂಟ್ ಜನ ಈ ಆ್ಯಪ್​ಅನ್ನ ಅನ್​​ಇನ್ಸ್​ಟಾಲ್ ಮಾಡಿದ್ದಾರೆ ಹಾಗೂ ಸ್ಯಾಂಡಲ್​ವುಡ್​ನ ನಿರ್ದೇಶಕರುಗಳಾದ ಪವನ್ ಒಡೆಯರ್, ಎ.ಪಿ ಅರ್ಜುನ್, ಸಂತೋಷ್ ಆನಂದ್​ರಾಮ್ ಕೂಡ ಈ ಅಭಿಯಾನಕ್ಕೆ ಸಾಥ್​ ಕೊಟ್ಟಿದ್ದಾರೆ.

ಆದರೆ, ಇದೀಗ ಈ ಟೀಕ್​ಟಾಕ್​ ಬ್ಯಾನ್ ವಿಚಾರವಾಗಿ ಮಾತನಾಡಿರೋ ಕಿರಿಕ್​ ಪಾರ್ಟಿ ಖ್ಯಾತಿಯ ನಟಿ ಸಂಯುಕ್ತಾ ಹೆಗ್ಡೆ, ಟಿಕ್​ಟಾಕ್​ ಬ್ಯಾನ್ ಆಗಬಾರದು ಅಂತ ಹೇಳಿದ್ದಾರೆ. ಹಾಗಂತ ನಟಿ ಸಂಯುಕ್ತ ಇಲ್ಲಿ ಟಿಕ್​ಟಾಕ್​ ಪರ ಮಾತನಾಡುತ್ತಿಲ್ಲ. ಟಿಕ್​ಟಾಕ್​ ಬ್ಯಾನ್​ ಮಾಡೋದರಿಂದ ಯಾವ ಪ್ರಯೋಜನವೂ ಇಲ್ಲ. ಈ ಆ್ಯಪ್​ ಇಲ್ಲ ಅಂದರೆ ಮತ್ತೊಂದು ಆ್ಯಪ್​ ಮೊರೆ ಹೋಗ್ತಾರೆ ಜನ. ಹಾಗಾಗಿ ಮೊದಲು ಜನರ ಮನಸ್ಥಿತಿ ಬದಲಾಗಬೇಕು.

ಅಷ್ಟೇಅಲ್ಲ, ನಾನು ಟಿಕ್​ಟಾಕ್​ ಪರ ಮಾತನಾಡುತ್ತಿಲ್ಲ. ಟಿಕ್​ಟಾಕ್​​ ಏನಾಗುತ್ತೋ ಅದಕ್ಕೂ ನನಗೂ ಸಂಬಂಧವಿಲ್ಲ. ಮೊದಲು ನಾವು ಬದಲಾಗಬೇಕು. ನಮ್ಮೊಳಗೆ ಬದಲಾವಣೆಬೇಕು ಎಂದು ನಟಿ ಸಂಯುಕ್ತ ಹೆಗ್ಡೆ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಸದ್ಯ ಈಗಾಗಲೇ ಬ್ಯಾನ್ ಟಿಕ್​ಟಾಕ್​ ಅಭಿಯಾನ ಶುರುವಾಗಿದ್ದು, ಸಾಕಷ್ಟು ಮಂದಿ ಈ ಅಭಿಯಾನಕ್ಕೆ ಕೈ ಜೋಡಿಸಿದ್ದಾರೆ. ಮತ್ತೊಂದು ಕಡೆ ನಟಿ ಸಂಯುಕ್ತಾ ಹೆಗ್ಡೆ ಹೇಳೋ ಮಾತಿನಲ್ಲೂ ಅರ್ಥವಿದೆ. ಅದೇನೇ ಇರ್ಲಿ ಇನ್ನು ಮುಂದಾದ್ರೂ, ನಮ್ಮ ದೇಶದ ವಸ್ತುಗಳಿಗೆ, ವಿಚಾರಗಳಿಗೆ ಪ್ರಾಮುಖ್ಯತೆ ಕೊಟ್ರೆ ಒಳೀತು ಅನ್ನಿಸುತ್ತದೆ.

Also read:  'ಪ್ರಧಾನಿ ಮೋದಿ ಭಾರತಕ್ಕೆ ಮಾತ್ರ ಕೆಲಸ ಮಾಡುತ್ತಿಲ್ಲ'

Latest article