Thursday, May 19, 2022

ಕಾನೂನು ಪ್ರಕಾರ ರಾಜೀನಾಮೆ ನೀಡಿದ್ದರು, ಉದ್ದೇಶಪೂರ್ವಕವಾಗಿ ಅನರ್ಹ ಮಾಡಿದ್ರು – ಅನರ್ಹ ಶಾಸಕ ವಾಗ್ದಾಳಿ

Must read

ಶಿರಸಿ/ಕಾರವಾರ: ಉಪಚುನಾವಣೆಗೆ ತಡೆಯಾಜ್ಞೆ ನೀಡುವ ಮೂಲಕ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರು ತೀರ್ಪು ತಪ್ಪು ಅನ್ನುವುದನ್ನು ಸಾಬೀತು ಮಾಡಿದೆ ಎಂದು ಅನರ್ಹ ಶಾಸಕ ಶಿವರಾಮ್ ಹೆಬ್ಬಾರ್ ಅವರು ಸುಪ್ರೀಂ ಕೋರ್ಟ್​ನ ತೀರ್ಪನ್ನು ಸ್ವಾಗತಿಸಿದರು.

ನಗರದಲ್ಲಿಂದು ಉಪಚುನಾವಣೆಗೆ ತಡೆ ಹಿನ್ನೆಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೂರಕ್ಕೆ ನೂರರಷ್ಟು ನಮಗೆ ಚುನಾವಣೆ ಎದುರಿಸೋಕೆ ಹೆದರಿಕೆ ಇಲ್ಲ. ಆದರೆ ಅನರ್ಹರು ಅನ್ನುವ ಪಟ್ಟವನ್ನು ಹೊತ್ತುಕೊಂಡು ಚುನಾವಣೆಗೆ ಸ್ಪರ್ಧಿಸೋದು ಕಷ್ಟ ಎಂದರು.

ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರು ಅನರ್ಹತೆ ಅನ್ನೋ ಪಟ್ಟ ಉದ್ದೇಶಪೂರ್ವಕವಾಗಿ ನೀಡಿದ್ದು. ನಾವು ಕಾನೂನುಬದ್ಧವಾಗೇ ರಾಜೀನಾಮೆ ನೀಡಿದ್ದೇವು. ಆದರು ಸ್ಪೀಕರ್ ರಾಜಕೀಯ ಪ್ರೇರಿತವಾಗಿ ಅನರ್ಹ ಪಟ್ಟ ನಮಗೆ ನೀಡಿದರು ಎಂದು ಅವರು ಮಾಜಿ ಸ್ಪೀಕರ್ ವಿರುದ್ಧ ಹರಿಹಾಯ್ದರು.

ಅಲ್ಲದೇ ಸರ್ವೋಚ್ಚ ನ್ಯಾಯಾಲಯದ ತೀರ್ಪನ್ನು ಕೂಡ ಧಿಕ್ಕರಿಸಿ ಸ್ಪೀಕರ್ ಆದೇಶ ನೀಡಿದರು. ಈ ತೀರ್ಪಿನಿಂದ ನೋವಾಗಿ ನಾವು ಸುಪ್ರೀಂ ಕೋರ್ಟ್​ಗೆ ಹೋಗಿದ್ದು, ಕಳೆದ 2 ದಿನಗಳಿಂದ ಎಲ್ಲಾ ಆಯಾಮಗಳಲ್ಲಿ ಕೋರ್ಟ್ ವಿಚಾರಣೆ ನಡೆಸುತ್ತಿತ್ತು. ಈ ಬಗ್ಗೆ ಕೋರ್ಟ್​ ಸ್ಪಷ್ಟವಾದ ನಿಲುವು ಕೈಗೊಂಡಿದ್ದು ಸ್ವಾಗತರ್ಹ ಎಂದು ಯಲ್ಲಾಪುರ ಕ್ಷೇತ್ರದ ಅನರ್ಹ ಶಾಸಕ ಶಿವರಾಮ್ ಹೆಬ್ಬಾರ್ ಅವರು ನುಡಿದರು.

ಈ ಹಿಂದೆ ಅನರ್ಹ ಶಾಸಕರು ಸುಪ್ರೀಂ ಕೋರ್ಟ್​ಗೆ ಹೋಗಿ ನಮ್ಮ ಶಾಸಕ ಸ್ಥಾನದ ಅನರ್ಹತೆ ಬಗ್ಗೆ ಸ್ಪಷ್ಟವಾದ ಸಂದೇಶ ಬರುವವರೆಗೂ ರಾಜ್ಯದಲ್ಲಿ ಉಪಚುನಾವಣೆ ನಡೆಸದಂತೆ ಕೋರ್ಟ್​ ಮೊರೆ ಹೋಗಿದ್ದರು.

Latest article