Thursday, May 19, 2022

ಕಾಂಗ್ರೆಸ್​ ಪಕ್ಷವು ಮುಖ್ಯಮಂತ್ರಿ ಜೊತೆಗೆ ಇರಲಿದೆ – ಮಾಜಿ ಸಚಿವ ಯುಟಿ ಖಾದರ್​

Must read

ತುಮಕೂರು: ರಾಜಕೀಯ ಜಂಜಾಟ ಬಿಟ್ಟು ರಾಜ್ಯದ ಅಭಿವೃದ್ಧಿಗೆ ಪೂರಕವಾದಂತಹ ಯಾವುದೇ ಕೆಲಸವನ್ನು ಬಿಜೆಪಿ ಸರ್ಕಾರ ಮಾಡುತ್ತಿಲ್ಲ ಎಂದು ಮಾಜಿ ಸಚಿವ ಯು.ಟಿ ಖಾದರ್ ಅವರು ಭಾನುವಾರ ರಾಜ್ಯ ಸರ್ಕಾರದ ವಿರುದ್ದ ಹರಿಹಾಯ್ದರು.

ಪಾವಗಡದಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬಿಜೆಪಿ ಸರ್ಕಾರ ತನ್ನದೇ ಆದಂತಹ ರಾಜಕೀಯ ಜಂಜಾಟದಲ್ಲಿ ಇದೆ. ಇನ್ನುವರೆಗೂ ಪ್ರಕೃತಿ ವಿಕೋಪಕ್ಕೆ ಸಂಬಂಧಿಸಿದಂತೆ ಯಾವುದೇ ರೀತಿಯ ಸ್ಪಷ್ಟವಾದ ನಿರ್ಧಾರವನ್ನು ಕೈಗೊಂಡಿಲ್ಲ. ಕರ್ನಾಟಕದ ಜನತೆಯನ್ನು ಸಂಪೂರ್ಣವಾಗಿ ಸರ್ಕಾರ ಕಡೆಗಣಿಸಿದೆ ಎಂದು ಅವರು ವಾಗ್ದಾಳಿ ನಡೆಸಿದರು.

ಇನ್ನುವರೆಗೂ ರಾಜ್ಯದ ಸರ್ಕಾರದಿಂದ ವಿದ್ಯಾರ್ಥಿಗಳಿಗೆ ಹೊಸ ಯೋಜನೆ ಕೊಟ್ಟಿಲ್ಲ, ಯುವ ಸಮುದಾಯಕ್ಕೆ, ಬೇಕಾದಂತಹ ಉದ್ಯೋಗ ಸೃಷ್ಟಿ ಮಾಡಿಲ್ಲ. ಕೈಗಾರಿಕಾ ನೀತಿಯಲ್ಲಿ ಬದಲಾವಣೆ ಮಾಡಿಲ್ಲ. ರೈತರ ಸಾಲ ಮನ್ನಾ ಯೋಜನೆಯ ಸಂಬಂಧಿಸಿದಂತೆ ಸರ್ಕಾರ ಸರಿಯಾಗಿ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಅವರು ರಾಜ್ಯ ಸರ್ಕಾರಕ್ಕೆ ಮಾತಿನ ಉದ್ದಕ್ಕೂ ಪ್ರಶ್ನಿಸಿದರು.

ಇನ್ನು ಬ್ಯಾಂಕ್​ಗಳು ರೈತರಿಗೆ ಪದೇಪದೇ ನೋಟಿಸ್ ಕೊಡುತ್ತಿದೆ. ಈ ಬಗ್ಗೆ ಸರ್ಕಾರವು ಒಂದು ಮಾತನ್ನು ಆಡುತ್ತಿಲ್ಲ. ಅಲ್ಲದೆ ಕೇಂದ್ರದಿಂದ ರಾಜ್ಯಕ್ಕೆ ಬರಬೇಕಿದ್ದ ನೆರೆ ಪರಿಹಾರವು ಬಂದಿಲ್ಲ. ನೆರೆಪರಿಹಾರ ಕೇಳುವುದು ನಮ್ಮ ಹಕ್ಕು ಆದರೆ ರಾಜ್ಯ ಸರ್ಕಾರ ಕೇಳುವಲ್ಲಿ ವಿಫಲವಾಗಿದೆ ಎಂದರು.

ರಾಜ್ಯದ ಮುಖ್ಯಮಂತ್ರಿಗೆ ಪ್ರಧಾನಮಂತ್ರಿ ಅವರು ತಮ್ಮ ಭೇಟಿಗೆ ಅವಕಾಶ ಮಾಡಿಕೊಟ್ಟಿಲ್ಲ. ಇದು ಕೇವಲ ಮುಖ್ಯಮಂತ್ರಿಗೆ ಮಾಡಿದ ಅವಮಾನ ಅಲ್ಲ. ಇಡೀ ರಾಜ್ಯದ ಜನತೆಗೆ ಮಾಡಿದಂತಹ ಅವಮಾನ, ರಾಜ್ಯದ ಅಭಿವೃದ್ಧಿಗಾಗಿ ಕಾಂಗ್ರೆಸ್​ನವರು ಮುಖ್ಯಮಂತ್ರಿಗಳ ಜೊತೆ ಇರುತ್ತೇವೆ. ಪ್ರಧಾನಮಂತ್ರಿಯನ್ನು ಭೇಟಿಯಾಗಬೇಕಾದರೆ ಸರ್ವಪಕ್ಷಗಳನ್ನ ಮುಖ್ಯಂತ್ರಿಗಳು ಕರೆಯಲಿ ಎಂದು ಮಾಜಿ ಸಚಿವ ಯು.ಟಿ ಖಾದರ್ ಅವರು ನುಡಿದರು.

Latest article