Tuesday, August 16, 2022

ಕಾಂಗ್ರೆಸ್​ ನಮ್ಮನ್ನು ಏಕಾಏಕಿ ತೆಗೆದುಹಾಕಿತು, ವಿಧಿ ಇರದೆ ಬಿಜೆಪಿಗೆ ಬಂದೆವು – ಎಸ್.​ಟಿ ಸೋಮಶೇಖರ್​

Must read

ಬೆಂಗಳೂರು: ನಾವೇನು ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿರಲಿಲ್ಲ. ಕಾಂಗ್ರೆಸ್​ನವರು ಹೇಳದೆ, ಕೇಳದೆ ನಮ್ಮನ್ನು ತೆಗೆದು ಹಾಕಿದರು. ಹೀಗಾಗಿ ಬೇರೆ ವಿಧಿ ಇರದೆ ಬಿಜೆಪಿಗೆ ಸೇರಬೇಕಾಯಿತು ಎಂದು ಅನರ್ಹ ಶಾಸಕ ಹಾಗೂ ಯಶವಂತಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್​.ಟಿ ಸೋಮಶೇಖರ್ ಅವರು ಕಾಂಗ್ರೆಸ್​ ವಿರುದ್ಧ ಕಿಡಿಕಾರಿದರು.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಶವಂತಪುರ ಕ್ಷೇತ್ರದಲ್ಲಿ ನನಗೆ ಕಾಂಗ್ರೆಸ್ ಪಕ್ಷದ 70 ಪರ್ಸೆಂಟ್ ಜನ ನಮಗೆ ಸಪೋಟ್ ಮಾಡಿದ್ದಾರೆ. ಇಲ್ಲಿ ಸ್ವಾಭಿಮಾನದ ಪ್ರಶ್ನೆ ಬರಲ್ಲ. ನಾನು ಎರಡು ಬಾರಿ ಸೋಲು ಅನುಭವಿಸಿದ್ದೆ, ಆಗ ನಾನು ನನ್ನ ಕ್ಷೇತ್ರ ಬಿಟ್ಟಿಲ್ಲ. ಆದರೆ ಜೆಡಿಎಸ್​ನವರು ಚುನಾವಣೆ ಬಂದ ಸಂದರ್ಭದಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಾರೆ. ಇನ್ನು ಕಾಂಗ್ರೆಸ್​ನವರು ಯಾರೋ? ಬಿಲ್ಡಿರ್​ನ ನಿಲ್ಲಿಸಿದ್ದಾರೆ ಎಂದು ಅವರು ವ್ಯಂಗ್ಯವಾಡಿದರು.

ಕಾಂಗ್ರೆಸ್​-ಜೆಡಿಎಸ್​ ಅಭ್ಯರ್ಥಿಗಳು ಈ ಕ್ಷೇತ್ರದ ಬಗ್ಗೆ ತಿಳಿದು ಕೊಳ್ಳಲು ಇನ್ನು ಒಂದು ವರ್ಷ ಬೇಕು ಎಂದ ಅವರು, ನಾನು ಎಸ್​.ಟಿ ಸೋಮಶೇಖರ್​ ಗೌಡ ಎಂದು ಹೆಸರು ಬದಲಾವಣೆ ಮಾಡಿಲ್ಲ. ನನ್ನ ಹೆಸರು ಎಸ್ ಟಿ ಸೋಮಶೇಖರ್ ಎಂದು ಇರೋದು. ನಮ್ಮ ಅಪ್ಪ ಅಮ್ಮ ನನಗೆ ಎಸ್​.ಟಿ ಸೋಮಶೇಖರ್ ಎಂದು ಹೆಸರಿಟ್ಟಿದ್ದಾರೆ. ನನ್ನ ಆಫಿಡೆವೇಟ್​ನಲ್ಲೂ ಅದೇ ಹೆಸರಿದೆ ಎಂದು ಅವರು ಸ್ಪಷ್ಟನೆ ನೀಡಿದರು.

ಈ ಹಿಂದೆ ಎಸ್​.ಟಿ ಸೋಮಶೇಖರ್ ಅವರ ಹೆಸರ​ ಮುಂದೆ ಗೌಡ ಎಂಬ ಪದ ಬಳಕೆ ಮಾಡಿದ್ದರು. ಇದರಿಂದ ಒಕ್ಕಲಿಗ, ಲಿಂಗಾಯತ ಮತಗಳನ್ನು ಸೆಳೆಯಲು ಈ ಗೌಡ ಎಂಬ ಪದ ಬಳಕೆ ಮಾಡಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸುದ್ದಿಗೆ ಗ್ರಾಸವಾಗಿತ್ತು.

Latest article