Wednesday, May 18, 2022

ಕಾಂಗ್ರೆಸ್​ ಗೆ ಮತ್ತೊಂದು ಬಿಗ್​ ಶಾಕ್​..!?

Must read

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಮತ್ತೇ ಪಕ್ಷಾಂತರ ಪರ್ವ ಶುರುವಾಗಿದೆ. ಬಿಜೆಪಿ ಬಿಟ್ಟು ಕಾಂಗ್ರೆಸ್​ ಹಿಡಿದಿದ್ದ ವಿಜಯಶಂಕರ್ ಇದೀಗಾ ಮತ್ತೇ ಬಿಜೆಪಿ ಸೇರುತ್ತಾರೆ ಎಂಬ ಮಾತುಗಳು ಕೇಳಿಬರುತ್ತಿದೆ.

ಸಿದ್ದರಾಮಯ್ಯ ಮೂಲಕ ಕಾಂಗ್ರೆಸ್ ಸೇರಿದ್ದ ವಿಜಯಶಂಕರ್, ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಮುನಿಸಿನ ಹೊಡೆತಕ್ಕೆ ಸಿಲುಕಿ ಸೋಲುಂಡಿದರು. ಇದಾದ ನಂತರ ಕಾಂಗ್ರೆಸ್ ಮುಖಂಡರ ಜೊತೆ ಅಂತರಕಾಯ್ದುಕೊಂಡಿದ್ದ ಮಾಜಿ ಮಿನಿಸ್ಟರ್​ ಮತ್ತೇ ರಾಜಕಾರಣದಲ್ಲಿ ಸಕ್ರಿಯರಾಗೋಕೆ ಸಕಲ ಸಿದ್ದತೆ ನಡೆಸಿದ್ದಾರೆ.

ಬಿಜೆಪಿ ಸೇರೋದರ ಬಗ್ಗೆ ಸುಳಿವು ನೀಡಿರೋ ವಿಜಯ್​ ಶಂಕರ್​ ನಾನು ರಾಜಕಾರಣದಲ್ಲಿ ಜೀವಂತಿಕೆಯಾಗಿರಬೇಕು. ನಿಂತ ನೀರಾಗದೆ, ಸದಾ ಹರಿಯೋ ನೀರಾಗಬೇಕು ಅಂದ್ಕೊಂಡಿದ್ದೇನೆ. ಎರಡೂವರೆ ವರ್ಷದಿಂದ ಬೆಂಗಳೂರಿನ ಕಾಂಗ್ರೆಸ್ ಕಚೇರಿಗೆ ಬರುವಂತೆ ಯಾರೊಬ್ಬರು ಆಹ್ವಾನ ಸಹ ಕೊಟ್ಟಿಲ್ಲ. ಕಾಂಗ್ರೆಸ್​ನಲ್ಲೇ ಮೂಲ ಕಾಂಗ್ರೆಸಿಗರು, ವಲಸಿಗರು ಅನ್ನೋ ಚರ್ಚೆ ಶುರುವಾಗಿದೆ.

ಸಿದ್ದರಾಮಯ್ಯ ಬಗ್ಗೆ ಇರುವ ಗೌರವವೇ ಬೇರೆ ರಾಜಕಾರಣದ ರಾಜಧರ್ಮವೇ ಬೇರೆ. ನವೆಂಬರ್​ 4ರೊಳಗೆ ನನ್ನ ನಿರ್ಧಾರ ಹೊರ ಹಾಕ್ತೀನಿ ಅಂತಾ ಕುತೂಹಲ ಕಾಯ್ದಿರಿಸಿದ್ದಾರೆ.

ಯಾವಾಗ ವಿಜಯ್​ ಶಂಕರ್​ ಕಾಂಗ್ರೆಸ್​ ಬಿಟ್ಟು, ಕಮಲ ಹಿಡೀತಾರೆ ಅನ್ನೋ ಸುದ್ದಿ ಹೊರ ಬಿತ್ತೋ ಕಾಂಗ್ರೆಸ್​ ಮುಖಂಡರು ಓಡೋಡಿ ಬಂದಿದ್ದಾರೆ. ಮಾಜಿ ಸಂಸದ ಧ್ರುವನಾರಾಯಣ್ ನೇತೃತ್ವದಲ್ಲಿ ವಿಜಯಶಂಕರ್ ನಿವಾಸಕ್ಕೆ‌ ಭೇಟಿ ಕೊಟ್ಟು ಕಾಂಗ್ರೆಸ್​ ನಾಯಕರು ಪಕ್ಷ ಬಿಡದಂತೆ ಮನವೊಲಿಸೋ ಯತ್ನ ಮಾಡಿದರು. ಇದಾದ ನಂತರ ಮಾತನಾಡಿದ ಧೃವನಾರಾಯಣ್ ನಿಮ್ಮಂತ ಸರಳ ಸಜ್ಜನ ವ್ಯಕ್ತಿ ಪಕ್ಷದಲ್ಲೇ ಇರಬೇಕೆಂದು ಹೇಳಿದ್ದೇವೆ. ಅವರಿಗೆ ಬಿಜೆಪಿಯಿಂದ ಒತ್ತಡ ಬಂದಿರುವ ಬಗ್ಗೆ ಅನುಮಾನವಿದೆ ಅಂತಾ ಹೊಸ ಬಾಂಬ್ ಸಿಡಿಸಿದ್ದಾರೆ.

Latest article