ಉತ್ತರಕನ್ನಡ: ದೇಶ ತುಂಡು ಮಾಡುವ ಪರಿಸ್ಥಿತಿಯಿಂದ ಹಿಡಿದು ಇಂದು ದೇಶ ಹರಾಜು ಹಾಕುವ ಸ್ಥಿತಿಗೆ ಬಂದಿರುವುದು ಕಾಂಗ್ರೆಸ್ ರಾಜಕಾರಣದಿಂದ ಎಂದು ಬಿಜೆಪಿ ಸಂಸದ ಅನಂತಕುಮಾರ್ ಹೆಗಡೆ ಶನಿವಾರ ಹೇಳಿದರು.
ಜಿಲ್ಲೆಯ ಶಿರಸಿ ತಾಲೂಕಿನ ಮಳಗಿ ಕಾರ್ಯಕರ್ತರ ಸಭೆಯಲ್ಲಿಂದು ಮಾತನಾಡಿದ ಅವರು, ಮೊದಲು ಕೆಟ್ಟವರನ್ನು ತೆಗೆದು ಹಾಕಬೇಕು ಯಾವುದೇ ಮುಲಾಜು, ಮುಜುಗರ ಇಲ್ಲದೇ. ನಾಳೆ ಪ್ರಚಾರಕ್ಕೆ ಸಿದ್ದರಾಮಯ್ಯ ಯಲ್ಲಾಪುರಕ್ಕೆ ಬರುತ್ತಾರೆ, ಬಂದು ಏನು ಹೇಳಿ ಹೋಗುತ್ತಾರೆ ನೋಡೋಣ ಎಂದು ತಿಳಿಸಿದರು.
ಇನ್ನು ನಾನೂ ಯಲ್ಲಾಪುರಕ್ಕೆ ಹೋಗುವವನು ಇದ್ದೆ ಆದರೆ ಯಡಿಯೂರಪ್ಪ ಕಾರ್ಯಕ್ರಮ ಇರುವುದರಿಂದ ಹೋಗೋಕೆ ಆಗುತ್ತಿಲ್ಲ. ಕಬಡ್ಡಿ ಆಡಬೇಕೆಂದರೆ ಸರಿ-ಸರಿ (Equal) ಇರಬೇಕು ಇಲ್ಲ ಅಂದರೆ ಅದರ ಮಜಾ ಬರುವುದಿಲ್ಲ ಎಂದು ಅನಂತಕುಮಾರ್ ಹೆಗಡೆ ಸಿದ್ದರಾಮಯ್ಯಗೆ ಟಾಂಗ್ ಕೊಟ್ಟರು.
ಅಂತೆಯೇ ಈ ಬಾರಿ ಯಲ್ಲಾಪುರ-ಮುಂಡಗೋಡ್ ವಿಧಾನಸಭಾ ಕ್ಷೇತ್ರದಲ್ಲಿ ಖಂಡಿತ ಶಿವರಾಮ ಹೆಬ್ಬಾರ್ ಗೆಲ್ಲುತ್ತಾರೆ. ಎಂಪಿ ಚುನಾವಣೆಯಲ್ಲಂತೂ, ಕಾಂಗ್ರೆಸ್-ಬಿಜೆಪಿ ಅಂತೇನು ಇರಲಿಲ್ಲ, ಎಲ್ಲರೂ ಒಟ್ಟಿಗೆ ಕೆಲಸ ಮಾಡಿದ್ದಾರೆ ಎಂದು ಹೇಳಿದರು.