Wednesday, May 18, 2022

ಒಂದೇ ವೇದಿಕೆಯಲ್ಲಿ ಸಿದ್ದರಾಮಯ್ಯ ಎದುರಾಳಿಗಳು..?!

Must read

ಮೈಸೂರು: ಹುಣಸೂರು ಉಪಚುನಾವಣೆ ಹಿನ್ನೆಲೆ, ಮೈಸೂರಿನಲ್ಲಿ ಒಂದೇ ವೇದಿಕೆಯಲ್ಲಿ ಸಿದ್ದರಾಮಯ್ಯ ಎದುರಾಳಿಗಳು ಕಾಣಿಸಿಕೊಂಡಿದ್ದಾರೆ.

ಧರ್ಮಪುರದ ಚೆನ್ನಕೇಶವ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಕ್ರಮದಲ್ಲಿ ವಿಶ್ವನಾಥ್, ಜಿಟಿ ದೇವೇಗೌಡ, ವಿಜಯಶಂಕರ್ ಭಾಗವಹಿಸಿದ್ದು, ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಅಲ್ಲದೇ, ಜಿಟಿಡಿ ಪುತ್ರ ಜಿಡಿ ಹರೀಶ್ ಕೂಡ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ಹುಣಸೂರಿನಲ್ಲಿ ಎಚ್ ವಿಶ್ವನಾಥ್, ವಿಜಯಶಂಕರ್ ಶಕ್ತಿ ಪ್ರದರ್ಶನ ತೋರಿಸಿದ್ದು, ನೀತಿ ಸಂಹಿತೆ ಮುನ್ನಾ ದಿನ ಉಭಯ ನಾಯಕರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಮೊನ್ನೆಯಷ್ಟೇ ಮಾಜಿ ಸಿಎಂ ಸಿದ್ದರಾಮಯ್ಯ ದೇಗುಲ ಉದ್ಘಾಟಿಸಿದ್ರು. ಆದ್ರೆ ನಿನ್ನೆ ಸಂಜೆ ಜಿಟಿ-ವಿಶ್ವನಾಥ್, ವಿಜಯಶಂಕರ್ ಭಾಗಿಯಾಗಿದ್ದು, ಉಭಯ ನಾಯಕರ ಭೇಟಿ ತೀವ್ರ ಕುತೂಹಲ ಮೂಡಿಸಿದೆ.

Latest article