Tuesday, August 16, 2022

'ಏಪ್ರಿಲ್‌ನಲ್ಲಿ ಜನ್ಮ ದಿನ ಆಚರಿಸಲಿಕ್ಕೆ ಆಗದೇ ಇದ್ರೆ, ಮೇ ಇದೆ, ಜೂನ್ ಇದೆೆ. ಆವಾಗ ಸೆಲೆಬ್ರೇಟ್ ಮಾಡಿದ್ರಾಯ್ತು'

Must read

ಬೆಂಗಳೂರು: ನಟ ಸಾರ್ವಭೌಮ ಡಾ.ರಾಜ್‌ಕುಮಾರ್ ಅವರ 91ನೇ ಹುಟ್ಟುಹಬ್ಬದ ಬಗ್ಗೆ ಪುತ್ರ ಡಾ.ಶಿವರಾಜ್‌ಕುಮಾರ್ ಮಾತನಾಡಿದ್ದು, ಕೊರೋನಾ ಟೈಮಲ್ಲಿ ಅಪ್ಪಾಜಿ ಜನ್ಮ ದಿನ ಬಂದಿದೆ. ಏನೂ ಮಾಡೋತಕೆ ಆಗೋದಿಲ್ಲ. ಎಲ್ಲವನ್ನೂ ಎದುರಿಸಬೇಕು ಎಂದಿದ್ದಾರೆ.

ಲಾಕ್ ಡೌನ್ ನಿಯಮಗಳನ್ನೂ ಪಾಲಿಸಲೇಬೇಕು. ಆರೋಗ್ಯದ ದೃಷ್ಟಿಯಿಂದ ಅದು ಅವಶ್ಯ. ಏಪ್ರಿಲ್‌ನಲ್ಲಿ ಜನ್ಮ ದಿನ ಆಚರಿಸಲಿಕ್ಕೆ ಆಗದೇ ಇದ್ದರೇ, ಮೇ ಇದೆ. ಜೂನ್ ಇದೆೆ. ಆವಾಗ ಸೆಲೆಬ್ರೇಟ್ ಮಾಡಿದ್ರಾಯ್ತು. ತಪ್ಪೇನು..? ಎಂದಿದ್ದಾರೆ.

ಅಲ್ಲದೇ, ಅಭಿಮಾನಿಗಳು ಸೋಷಿಯಲ್ ಡಿಸ್ಟನ್ಸ್ ಕಾಯ್ದು ಕೊಳ್ಳಿ, ಆರಾಮ್ ಆಗಿ ಮನೆಯಲ್ಲಿರಿ. ಕೊರೋನಾಬಂದಿದೆ. ಭಯಪಡ್ಬೇಡಿ, ಬಂದಿದೆ ಹೋಗುತ್ತದೆ. ಲಾಕ್ ಡೌನ್ ಟೈಮ್ ಅಲ್ಲಿ ಮನೆಯಲ್ಲಿಯೇ ಇದ್ದೇನೆ. ಆಕ್ಟೀವ್ ಆಗಿದ್ದೇನೆ. ಸಿನಿಮಾ ನೋಡುತ್ತೇನೆ. ಎರಡೂ ಹೊತ್ತು ಸಿನಿಮಾ ವರ್ಕೌಟ್ ಮಾಡುತ್ತೇನೆ ಎಂದಿದ್ದಾರೆ.

ಡಾ.ರಾಜ್‌ಕುಮಾರ್ ಹುಟ್ಟುಹಬ್ಬದಂದೇ ಯುವರಾಜ್‌ಕುಮಾರ್ ಮೊದಲ ಚಿತ್ರದ ಪೋಸ್ಟರ್ ರಿಲೀಸ್ ಮಾಡಲಾಯ್ತು, ಈ ವೇಳೆ ಮಾತನಾಡಿದ ಶಿವರಾಜ್‌ಕುಮಾರ್, ಕನ್ನಡಕ್ಕೆ ಮತ್ತೊಬ್ಬ ಭರವಸೆಯ ನಟನ ಪ್ರವೇಶ ಆಗುತ್ತಿದೆ. ಯುವರಾಜ್ ಕುಮಾರ್ ಕೂಡ ನನ್ನ ಮಗನೇ. ಯುವರಾಜ್ ಕುಮಾರ್ ಬೆಳವಣಿಗೆ ನೋಡಿಕೊಂಡು ಬರ್ತಿದ್ದೇನೆ. ಪೂರ್ಣಿಮಾ ಪುತ್ರ ಧೀರೆನ ಕೂಡ ಬರ್ತಿದ್ದಾನೆ. ಅವನೂ ಕೂಡ ಪ್ರಾಮಿಸಿಂಗ್ ಆ್ಯಕ್ಟರ್ ಎಂದು ಹೇಳಿದ್ದಾರೆ.

Latest article