ಬೆಂಗಳೂರು: ಸುಪ್ರೀಂ ಕೋರ್ಟ್ ಕೂಡ 17 ಶಾಸಕರನ್ನು ‘ಅನರ್ಹರು’ ಎಂದು ಪರಿಗಣಿಸಿದ್ದು, ಇಂಥವರನ್ನು ಯಾರೂ ಬೆಂಬಲಿಸಬಾರದು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಮನವಿ ಮಾಡಿದ್ದಾರೆ.
ಮತದಾರರು ಸರಿಯಾಗಿ ಅರ್ಥ ಮಾಡಿಕೊಂಡು ಎಲ್ಲಾ ಅನರ್ಹರನ್ನು ಸೋಲಿಸಿ ಪ್ರಜಾಪ್ರಭುತ್ವವನ್ನು ಎತ್ತಿಹಿಡಿಯಬೇಕಾಗಿದೆ. ಎಂದು ಕುಮಾರಸ್ವಾಮಿಯವರು ಟ್ವೀಟ್ ಮಾಡಿದ್ದಾರೆ.
ಸುಪ್ರೀಂ ಕೋರ್ಟ್ ಕೂಡ 17 ಶಾಸಕರನ್ನು ‘ಅನರ್ಹರು’ ಎಂದು ಪರಿಗಣಿಸಿದ್ದು, ಇಂಥವರನ್ನು ಯಾರೂ ಬೆಂಬಲಿಸಬಾರದು. ಇದನ್ನು ಮತದಾರರು ಸರಿಯಾಗಿ ಅರ್ಥ ಮಾಡಿಕೊಂಡು ಎಲ್ಲಾ ಅನರ್ಹರನ್ನು ಸೋಲಿಸಿ ಪ್ರಜಾಪ್ರಭುತ್ವವನ್ನು ಎತ್ತಿಹಿಡಿಯಬೇಕಾಗಿದೆ.#DefeatTheDisqualified#RejectDisqualifiedMLAs
— H D Kumaraswamy (@hd_kumaraswamy) December 3, 2019
ಸಿಎಂ ಯಡಿಯೂರಪ್ಪನವರು ರಾಜ್ಯದ ಜನರಿಗೆ ಕಾಮಧೇನು ಅಲ್ಲ. ಅವರು ಕೇವಲ 17 ಜನ ಅನರ್ಹ ಶಾಸಕರಿಗೆ ಮಾತ್ರ ಕಾಮಧೇನು. ಕಾಂಗ್ರೆಸ್ ಮತ ಕೊಟ್ಟರೆ ಅದೇಲ್ಲೊ ಒಂದು ಕಡೆ ಬಿಜೆಪಿಗೆ ಲಾಭ ಆಗುತ್ತೆ. ಈ ಚುನಾವಣೆಯಲ್ಲಿ ಕಾಂಗ್ರೆಸ್ ಬಿಜೆಪಿಗೆ ಮತ ನೀಡಬೇಡಿ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಈ ಹಿಂದೆ ಕೂಡ ಜನತೆಯಲ್ಲಿ ಮನವಿ ಮಾಡಿದ್ದರು.