Tuesday, November 29, 2022

'ಎಂಎಸ್​ ಧೋನಿ ಕ್ರಿಕೆಟ್​ನಲ್ಲಿ ಯಾವೊಬ್ಬರು ಮರೆಯಲಾಗದ ಸಾಧನೆ ಮಾಡಿದ್ದಾರೆ'

Must read

ಚಂಡೀಗಡ: ಟೀಮ್ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಕ್ರಿಕೆಟ್‌ ಲೋಕದಲ್ಲಿ ಎಲ್ಲಾ ಮಹತ್ವದ ಸಾಧನೆಗಳನ್ನು ಮಾಡಿದ ಸರ್ವಕಾಲಿಕ ಶ್ರೇಷ್ಠ ನಾಯಕ. ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಈವರೆಗೆ ಯಾವ ನಾಯಕನೂ ಮಾಡಲು ಸಾಧ್ಯವಾಗದ ಮಹತ್ವದ ಗೆಲುವುಗಳನ್ನು ತಂದುಕೊಟ್ಟವರು ಎಂಎಸ್​ಡಿ. ಹೀಗಾಗಿ ಅವರು ಭಾರತೀಯ ಕ್ರಿಕೆಟ್‌ ಇತಿಹಾಸದಲ್ಲಿ ಅವರ ಸಾಧನೆ ವಿಶೇಷ.

ಐಸಿಸಿ ಆಯೋಜಿಯಿಸುವ ಟಿ20 ವಿಶ್ವಕಪ್, ಏಕದಿನ ವಿಶ್ವಕಪ್, ಚಾಂಪಿಯನ್ಸ್ ಟ್ರೋಫಿ, ಟೆಸ್ಟ್​​ನ ಕ್ರಿಕೆಟ್​ನಲ್ಲಿ ನಂಬರ್​ 1 ಸ್ಥಾನವನ್ನು ಭಾರತಕ್ಕೆ ತಂದು ಕೊಟ್ಟ ಏಕಮಾತ್ರ ನಾಯಕ. ಈ ಎಲ್ಲಾ ಸಾಧನೆಯನ್ನು ಇನ್ಯಾವ ನಾಯಕನಿಂದಲೂ ಮಾಡಲು ಈವರೆಗೆ ಸಾಧ್ಯವಾಗಿಲ್ಲ.

ಎಂಎಸ್​ ಧೋನಿಗೆ ಸಾಕಷ್ಟು ಅಭಿಮಾನಿ ಬಗಳವಿದೆ. ಇವರೆಲ್ಲರಿಗಿಂತ ಅಪ್ಪಟ ಅಭಿಮಾನಿ ಎಂದರೆ ಅದು ರಾಮ್ ಬಾಬು. ಇವರು ಕಳೆದ ಹದಿನೈದು ವರ್ಷಗಳಿಂದ ರಾಮ್ ಬಾಬು ಧೋನಿ ಅಭಿಮಾನಿಯಾಗಿ ಭಾರತ ತಂಡದ ಜೊತೆಗೆ ಎಲ್ಲಾ ಪಂದ್ಯಗಳಲ್ಲೂ ಭಾರತ ತಂಡವನ್ನು ಹಾಗೂ ಧೋನಿಯನ್ನು ಬೆಂಬಲಿಸಿಕೊಂಡು ಬಂದಿದ್ದರು. ಇವರು ಧೋನಿಯ ಜರ್ಸಿ ನಂಬರ್, ದೇಶದ ತ್ರಿವರ್ಣಧ್ವಜವನ್ನು ಮೈಮೇಲೆ ಬರೆಸಿಕೊಂಡು ಸ್ಟೇಡಿಯಂನಲ್ಲಿ ಸಂಭ್ರಮಿಸುತ್ತಿದ್ದರು.

ಶನಿವಾರ ರಾತ್ರಿ ಇನ್​ಸ್ಟಾಗ್ರಾಂನಲ್ಲಿ ನಿವೃತ್ತಿ ಘೋಷಣೆ ಮಾಡಿದ ಬಳಿಕ ರಾಮ್ ಬಾಬು ಕೂಡ ಶಾಕ್​ ಆಗಿದ್ದು, ಎಂ.ಎಸ್​. ಧೋನಿ ಅವರ ನಿವೃತ್ತಿ ಸುದ್ದಿ ನನಗೆ ಶಾಕ್​ ನೀಡಿದೆ ಜೊತೆಗೆ ಇದು ನನಗೆ ಭಾವನತ್ಮಕ ಸಂದರ್ಭ ಕೂಡ ಹೌದು. ಯಾವೊಬ್ಬರು ಕೂಡ ಮರೆಯಲಾಗದ ಸಾಧನೆಯನ್ನು ಅವರು ಮಾಡಿದ್ದಾರೆ. ನಾನು ಕ್ಯಾಪ್ಟನ್​ ಕೂಲ್​ನ ಹುಚ್ಚು ಅಭಿಮಾನಿ ಎಂದು ಎಎನ್​ಐಗೆ ಹೇಳಿದ್ದಾರೆ.

ನಾನು ಅವರನ್ನು ಮೊದಲ ಬಾರಿಗೆ ಟಿವಿಯಲ್ಲಿ ನೋಡಿದಾಗ, ನಾನು ಅವರ ಕೇಶವಿನ್ಯಾಸದ ರೀತಿಯೇ ಮಾಡಿಸಿದೆ. ನಾನು ಕ್ರೀಡಾಂಗಣಗಳಿಗೆ ಹೋಗುತ್ತಿದ್ದಾಗ ಜನರು ನನ್ನನ್ನು ಧೋನಿ-ಲುಕಲೈಕ್ ಎಂದು ಕರೆಯುತ್ತಿದ್ದರು ಎಂದು ಅವರು ಅಭಿಮಾನಿಯಾದ ಸಂದರ್ಭದವನ್ನು ಸ್ಮರಿಸಿದರು.

Latest article