Tuesday, August 16, 2022

ಉಪಚುನಾವಣಾ ಪ್ರಚಾರದಲ್ಲಿ ಭಾಗಿಯಾಗುವಂತೆ ಬಚ್ಚೇಗೌಡಗೆ ಆರ್​. ಅಶೋಕ್​ ಮನವಿ.!

Must read

ಬೆಂಗಳೂರು: ಹೊಸಕೋಟೆಯಲ್ಲಿ ಎಂಟಿಬಿ ನಾಗರಾಜ್ ಅವರ ಅಲೆ ಕ್ರಿಯೇಟ್ ಆಗಿದೆ. ಅವರು ಮಾಡಿರುವ ಕೆಲಸದಿಂದ ಆ ಕ್ಷೇತ್ರದಲ್ಲಿ ಬಿಜೆಪಿ ಸುಲಭವಾಗಿ ಗೆಲುವು ಸಾಧಿಸಲಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ಅವರು ಭರವಸೆ ವ್ಯಕ್ತಪಡಿಸಿದರು.

ಡಾಲರ್ಸ್ ಕಾಲೋನಿಯ ಧವಳಗಿರಿ ಸಿಎಂ ನಿವಾಸದಲ್ಲಿ ಮಾತನಾಡಿ, ಎಂಟಿಬಿ ಅವರ ಗೆಲುವಿಗೆ ಬಿಜೆಪಿಯ ತಂಡವು ಪ್ರಯತ್ನ ಮಾಡುತ್ತಿದೆ. ಕಾಂಗ್ರೆಸ್​ನಲ್ಲಿ ಸಿದ್ದರಾಮಯ್ಯ, ದಿನೇಶ್ ಬಿಟ್ಟರೆ ಇನ್ಯಾರೂ ಪ್ರಚಾರ ಮಾಡ್ತಿಲ್ಲ. ಅಲ್ಲದೇ ಕಾಂಗ್ರೆಸ್​ನ ಸ್ಟಾರ್​ ಪ್ರಚಾರಕರು ವಿದೇಶಕ್ಕೆ ಹೋಗಿದ್ದಾರೆ. ಈಗ ಕಾಂಗ್ರೆಸ್ ನಾಯಕರ ನಡೆಯಿಂದ ಕಾರ್ಯಕರ್ತರು ಕಂಗಾಲಾಗಿದ್ದಾರೆ ಎಂದರು.

ಹೊಸಕೋಟೆಯ ಪಕ್ಷೇತರ ಅಭ್ಯರ್ಥಿ ಶರತ್ ಬಗ್ಗೆ ಮಾತನಾಡಿ, ಅವರಿಗೆ ಇನ್ನೂ ಸಮಯ ಇದೆ. ಶರತ್ ಬಚ್ಚೇಗೌಡ ಚುನಾವಣಾ ಕಣದಿಂದ ನಿವೃತ್ತಿ ಆಗಬೇಕು. ಪಕ್ಷದ ನಾಯಕರ ನಿಲುವಿಗೆ ಅವರು ನಿಲ್ಲಬೇಕು. ಬಿಜೆಪಿ ಪರವಾಗಿ ಚುನಾವಣಾ ಪ್ರಚಾರದಲ್ಲಿ ಬಚ್ಚೇಗೌಡ ಭಾಗಿ ಆಗಬೇಕೆಂದು ಈ ಮೂಲಕ ಮನವಿ ಮಾಡುತ್ತೇನೆ ಎಂದರು.

ಇನ್ನು ಬಿಜೆಪಿ ಇಡೀ ರಾಜ್ಯದಲ್ಲಿ ಎಲ್ಲಾ ಕಾರ್ಯಕರ್ತರು, ನಾಯಕರು ಒಟ್ಟಾಗಿ ಹೋಗುತ್ತಿದ್ದಾರೆ. ಅದೇ ಕಾಂಗ್ರೆಸ್-ಜೆಡಿಎಸ್ ಪಕ್ಷದಲ್ಲಿ ಬಹಳ ರೆಬಲ್ಸ್​ಗಳು ಇದ್ದಾರೆ. ಎರಡು ಪಕ್ಷ ಸೋಲಿನ ಭಯದಿಂದ ಒಳ ಒಪ್ಪಂದ ಮಾಡಲು ಯೋಚನೆ ಮಾಡುತ್ತಿದ್ದಾರೆ. ಈ ಮೊದಲು ಹಾವು ಮುಂಗುಸಿ ಥರ ಕಿತ್ತಾಡುತ್ತಿದ್ದರು, ಈಗ ಒಂದೇ ಬುಟ್ಟಿಯಲ್ಲಿ ಪ್ರಯಾಣಿಸಲು ಮುಂದಾಗಿದ್ದಾರೆ ಎಂದು ಆರ್​ ಅಶೋಕ್ ಅವರು ಕಿಡಿಕಾರಿದರು.

Latest article