ದಾವಣಗೆರೆ: ಸಿಎಂ ಬಿ.ಎಸ್ ಯಡಿಯೂರಪ್ಪ ಅವರು ಪ್ರಚಾರಕ್ಕೆ ಹೋದ ಕಡೆಯಲ್ಲ ತಮ್ಮ ಅಭ್ಯರ್ಥಿಗಳನ್ನು ಮಂತ್ರಿ ಮಾಡ್ತಿನಿ ಎನ್ನುತ್ತಿನಿ ಎನ್ನುವುದಲ್ಲದೆ, ಜಾತಿ ಹೆಸರಲ್ಲಿ ಮತ ಕೇಳುತ್ತಿದ್ದಾರೆ. ಇದು ಅಪೇನ್ಸ್ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರು ಇಂದು ಹೇಳಿದರು.
ನಗರದಲ್ಲಿಂದು ಸುದ್ದಿಗರರೊಂದಿಗೆ ಮಾತನಾಡಿದ ಅವರು, ಹಣ, ಅಧಿಕಾರದ ಅಮೀಷ ಒಡ್ಡಿ ಉಪಚುನಾವಣೆ ನಡೆಸುತ್ತಿದ್ದಾರೆ. ಈ ಬಗ್ಗೆ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದೇವೆ. ಆದರೆ ಚುನಾವಣಾ ಆಯೋಗ ಅಡಳಿತ ಪಕ್ಷದ ಕೈಗೊಂಬೆಯಾಗಿದೆ ಎಂದು ಅವರು ಕಿಡಿಕಾರಿದರು.
ಇನ್ನು ಪಹಾರಾಷ್ಟ್ರದ ರಾಜಕೀಯ ಬೆಳವಣಿಗೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ಅಲ್ಲಿನ ಪರಿಸ್ಥಿತಿ ನೋಡಿ, ಪ್ರಜಾಪ್ರಭುತ್ವವನ್ನೇ ಕಗ್ಗೊಲೆ ಮಾಡಿದ್ದಾರೆ. ಕೇಂದ್ರ ಸರ್ಕಾರವೇ ಖುದ್ದು ನಿಂತು ಮಾಡಿದೆ. ಯಾರೇ ಕಾನೂನು ಮೀರಿ ತಪ್ಪು ಮಾಡಿದ್ರೆ ಅದು ತಪ್ಪು ಎಂದರು.
ಅಲ್ಲದೇ ಬಿಜೆಪಿ ಅಭ್ಯರ್ಥಿ ಬಿಸಿ ಪಾಟೀಲ್ ಅವರು ಬೇರೆ ಪಕ್ಷದಿಂದ ಹಣ ಪಡೆದಿದ್ದಾರೆ ಎನ್ನುವ ಆರೋಪಕ್ಕೆ ಉತ್ತರಿಸಿ, ನಾನು ಜೆಡಿಎಸ್ನೇನು ಬಿಡಲಿಲ್ಲ, ಪಕ್ಷದಿಂದಲೇ ಉಚ್ಚಾಟಿಸಿದ್ದು. ಉಚ್ಚಾಟಿಸಿದ ಒಂದು ವರ್ಷದ ಮೇಲೆ ನಾನು ಕಾಂಗ್ರೆಸ್ ಸೇರಿದ್ದು. ಆಗ ಕಾಂಗ್ರೆಸ್ ಅಧಿಕಾರದಲ್ಲಿ ಇರಲಿಲ್ಲ, ಸೋನಿಯಾ ಗಾಂಧಿಯವರು ನನಗೆ ಅಫರ್ ಕೊಟ್ಟಿದ್ದರು. ಬಿಸಿ ಪಾಟೀಲ್ ಅವರಿಗೆ ಇದೆಲ್ಲ ಗೊತ್ತಿರೋದಿಲ್ಲ. ನಾನು ಅವರ ಹಾಗೆ ಹಣ, ಅಧಿಕಾರಕ್ಕೆ ಪಕ್ಷ ಬಿಟ್ಟಿಲ್ಲ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಬಿಸಿ ಪಾಟಿಲ್ ಮೇಲೆ ಹರಿಹಾಯ್ದರು.