ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ಎಂ. ಡಿ ಶ್ರೀಧರ್ ಹ್ಯಾಟ್ರಿಕ್ ಕಾಂಬಿನೇಷನ್ ಸಿನಿಮಾ ಒಡೆಯ. ಟೈಟಲ್ನಿಂದ್ಲೇ ಬೇಜಾನ್ ಹೈಪ್ ಕ್ರಿಯೇಟ್ ಮಾಡಿರೋ ಈ ಚಿತ್ರದ ಟೀಸರ್ ಲಾಂಚ್ಗೆ ಮುಹೂರ್ತ ಫಿಕ್ಸ್ ಆಗಿದೆ.
ಸಂದೇಶ್ ಪ್ರೊಡಕ್ಷನ್ಸ್ ಬ್ಯಾನರ್ನಲ್ಲಿ ಎನ್. ಸಂದೇಶ್ ನಿರ್ಮಾಣದ ಸಿನಿಮಾ ಒಡೆಯ. ಒಂದ್ಕಡೆ ಕುರುಕ್ಷೇತ್ರ ಸಿನಿಮಾ ಭರ್ಜರಿ ಸಕ್ಸಸ್ ಕಂಡಿದ್ದು, ಅದರ ಬೆನ್ನಲ್ಲೇ ಒಡೆಯ ಸಿನಿಮಾ ಬರ್ತಿರೋದು ಅಭಿಮಾನಿಗಳ ಸಂಭ್ರಮ ಹೆಚ್ಚುವಂತೆ ಮಾಡಿದೆ. ಇತ್ತೀಚೆಗಷ್ಟೆ ಸ್ವಿಟ್ಜರ್ಲ್ಯಾಂಡ್ನಲ್ಲಿ ಎರಡು ಕಲರ್ಫುಲ್ ಸಾಂಗ್ಸ್ ಶೂಟಿಂಗ್ ಮುಗಿಸಿ ಬಂದಿದೆ ಒಡೆಯ ಟೀಂ. ರಾಘವಿ ತಿಮ್ಮಯ್ಯ ಒಡೆಯನಿಗೆ ಒಡತಿಯಾಗಿ ಮಿಂಚಿದ್ದಾರೆ.

ಇತ್ತೀಚೆಗಷ್ಟೆ ಒಡೆಯ ಮೋಷನ್ ಪೋಸ್ಟರ್ ರಿಲೀಸ್ ಮಾಡೋದಾಗಿ ಹೇಳಿ, ಚಿತ್ರತಂಡ ಕೊನೆ ಕ್ಷಣದಲ್ಲಿ ಹಿಂದೆ ಸರಿದಿತ್ತು.ಇದೀಗ ಮೋಷನ್ ಪೋಸ್ಟರ್ ಬದ್ಲು ಆ್ಯಕ್ಷನ್ ಪ್ಯಾಕ್ಡ್ ಟೀಸರ್ ಅನ್ನೇ ರಾಜೋತ್ಸವ ಉಡುಗೊರೆಯಾಗಿ ಬಿಡುಗಡೆ ಮಾಡಲಾಗ್ತಿದೆ. ಸಣ್ಣ ಪಂಚಿಂಗ್ ಡೈಲಾಗ್ ಜೊತೆಗೆ ಜಬರ್ದಸ್ತ್ ಆ್ಯಕ್ಷನ್ ಝಲಕ್ ಮಿಕ್ಸ್ ಮಾಡಿ ಟೀಸರ್ ರಿಲೀಸ್ ಮಾಡ್ತಿದ್ದಾರೆ. ಒಡೆಯನ ಅವತಾರದಲ್ಲಿ ದರ್ಶನ್ ಅಬ್ಬರ ಕಣ್ತುಂಬಿಕೊಳ್ಳೋಕ್ಕೆ ಅಭಿಮಾನಿಗಳು ಕಾತರದಿಂದ ಕಾಯ್ತಿದ್ದಾರೆ.
ಪಕ್ಕಾ ಹಳ್ಳಿ ಸೊಗಡಿನ ಒಡೆಯ ಚಿತ್ರದಲ್ಲಿ ದರ್ಶನ್ ನಾಲ್ಕು ಜನ ಸಹೋದರರ ಅಣ್ಣನಾಗಿ ಬಣ್ಣ ಹಚ್ಚಿದ್ದಾರೆ.. ಯಶಸ್, ಪಂಕಜ್, ನಿರಂಜನ್ ಮತ್ತು ಸಮರ್ಥ್ ಒಡೆಯನಿಗೆ ಸಹೋದರರಾಗಿ ಮಿಂಚಿದ್ದಾರೆ.
ಡಿ ಬಾಸ್ ದರ್ಶನ್ ಫ್ಯಾನ್ ಫಾಲೋಯಿಂಗ್ ಬಗ್ಗೆ ಬಿಡಿಸಿ ಹೇಳೋದೇ ಬೇಡ.. ಒಂದೇ ಒಂದು ಡಿ ಬಾಸ್ ಸ್ಟಿಲ್ ಸಿಕ್ರೆ, ಸೋಷಿಯಲ್ ಮೀಡಿಯಾ ಶೇಕ್ ಆಗುವಂತೆ ಟ್ರೆಂಡ್ ಮಾಡೋ ಫ್ಯಾನ್ಸ್, ಒಡೆಯ ಟೀಸರ್ ಬಂದ್ರೆ, ಸುಮ್ನೆ ಬಿಡ್ತಾರಾ..?. ಶುಕ್ರವಾರ ಬೆಳಗ್ಗೆ 9 ಗಂಟೆ 55 ನಿಮಿಷ ಯಾವಾಗ್ಯಾವಾಗ ಆಗುತ್ತೋ ಅಂತ ಕಾದು ಕೂತಿದ್ದಾರೆ.
ಕನ್ನಡ ಸಿನಿಮಾ ಟೀಸರ್ ಅಥವಾ ಟ್ರೈಲರ್ 24 ಗಂಟೆಗಳಲ್ಲಿ ಅತಿ ಹೆಚ್ಚು ವೀವ್ಸ್ ಸಾಧಿಸಿದ ಲೆಕ್ಕಾಚಾರದಲ್ಲಿ ಯಜಮಾನ ಟ್ರೈಲರ್ ಫಸ್ಟ್ ಪ್ಲೇಸ್ನಲ್ಲಿದೆ. ಎರಡನೇ ಸ್ಥಾನದಲ್ಲಿ ಪೊಗರು ಡೈಲಾಗ್ ಟ್ರೈಲರ್ ಇದರ, ಮೂರನೇ ಸ್ಥಾನದಲ್ಲಿ ಕೆಜಿಎಫ್ ಕನ್ನಡ ಟ್ರೈಲರ್ ಇದೆ.

ಈ ಎಲ್ಲಾ ದಾಖಲೆಗಳನ್ನ ಮುರಿದು ಒಡೆಯ ಸಿನಿಮಾ ಟೀಸರ್, ಹೊಸ ದಾಖಲೆ ಬರೆಯುತ್ತೆ ಅನ್ನೋ ಲೆಕ್ಕಚಾರದಲ್ಲಿದ್ದಾರೆ ಚಾಲೆಂಜಿಂಗ್ ಸ್ಟಾರ್ ಫ್ಯಾನ್ಸ್. ಬರೀ ಲೆಕ್ಕ ಹಾಕ್ತಾ ಕೂತಿಲ್ಲ, ಒಡೆಯ ಟೀಸರ್ನ ದೊಡ್ಡಮಟ್ಟದಲ್ಲಿ ಹಿಟ್ ಮಾಡೋಕ್ಕೆ ತಯಾರಿ ನಡೆಸಿದ್ದಾರೆ.
ಡಿಸೆಂಬರ್ನಲ್ಲಿ ಒಡೆಯ ಸಿನಿಮಾ ಗ್ರ್ಯಾಂಡ್ ರಿಲೀಸ್ ಆಗ್ತಿದ್ದು, ಟೀಸರ್ನಿಂದ ಪ್ರಮೋಷನ್ ಶುರುವಾಗಲಿದೆ. ಈ ವರ್ಷ ಯಜಮಾನ, ಕುರುಕ್ಷೇತ್ರ ಸಿನಿಮಾಗಳ ಮೂಲಕ ಬ್ಯಾಕ್ ಟು ಬ್ಯಾಕ್ ಹಿಟ್ ಕೊಟ್ಟಿರೋ ದಚ್ಚು, ಒಡೆಯನಾಗಿ ಹ್ಯಾಟ್ರಿಕ್ ಬಾರಿಸೋ ಹುಮ್ಮಸ್ಸಿನಲ್ಲಿದ್ದಾರೆ.