Tuesday, August 16, 2022

ಈ ಚುನಾವಣೆಯಲ್ಲಿ ಜೆಡಿಎಸ್ ಏನು ಅನ್ನೋದನ್ನು ತೋರಿಸಬೇಕು – ಕುಮಾರಸ್ವಾಮಿ

Must read

ಬೆಂಗಳೂರು: ಈ ಚುನಾವಣೆಯಲ್ಲಿ ಜೆಡಿಎಸ್ ಏನು ಅನ್ನೋದನ್ನು ತೋರಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಹೆಚ್​.ಡಿ ಕುಮಾರಸ್ವಾಮಿ ಸೋಮವಾರ ಹೇಳಿದ್ದಾರೆ.

ಜವರಾಯಿಗೌಡ ಪರ ರ್ಯಾಲಿಗೆ ಸಾಥ್ ಕೊಟ್ಟ ಬಳಿಕ ಮಾತನಾಡಿದ ಅವರು, ಕರ್ನಾಟಕ ರಾಜ್ಯದಲ್ಲಿ ಬಿಜೆಪಿ ಕುತಂತ್ರದ ರಾಜಕಾರಣದಿಂದ ಅನಿವಾರ್ಯವಾಗಿ 15 ಕ್ಷೇತ್ರಗಳಲ್ಲಿ ಉಪಚುನಾವಣೆ ನಡೆಯುತ್ತೀದೆ ಎಂದು ಕುಮಾರಸ್ವಾಮಿ ಕಿಡಿಕಾರಿದರು.

ಈ ಹಿಂದೆ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಸರ್ಕಾರವಿತ್ತು, ಆಗ ನಾವೇನೂ ಕಾಂಗ್ರೆಸ್ ಅವರ ಮನೆ ಬಾಗಿಲಿಗೆ ಹೋಗಿರಲಿಲ್ಲ, ಅವರಾಗೇ ನಮ್ಮ ಬಾಗಿಲಿಗೆ ಬಂದರು. ಮೈತ್ರಿ ಸರ್ಕಾರ ಇದ್ದಾಗ ನಾನು ತುಂಬಾನೆ ನೋವು ಅನುಭವಿಸಿದ್ದೇನೆ. ನಾನು ಮುಖ್ಯಮಂತ್ರಿ ಆಗಿದ್ದಾಗ ನಮಗೆ ಅವಮಾನ ಮಾಡಿದ್ದರು ಎಂದು ಅಸಮಾಧಾನ ಹೊರಹಾಕಿದರು.

ಇವತ್ತು ಎಸ್ಟಿ ಸೋಮಶೇಖರ್ ಅವರು ಹೇಳ್ತಾರೆ ನಮ್ಮ ಕ್ಷೇತ್ರಕ್ಕೆ ಅನುದಾನಕೊಟ್ಟಿಲ್ಲ ಅಂತಾರೆ. ಹಾಗಾದರೆ ಈ ಹಿಂದೆ ಅವರಿಗೆ ಅನುದಾನ ಕೊಟ್ಟಿರಲಿಲ್ವಾ? ಎಂದು ಇದೇ ವೇಳೆ ಕುಮಾರಸ್ವಾಮಿ ಪ್ರಶ್ನೆ ಮಾಡಿದರು. ಇನ್ನೂ ಉಡುಪಿ ಸಂಸದೆ ಶೋಭ ಕರಂದ್ಲಾಜೆ ಅವರು ಎಸ್ಟಿ ಸೋಮಶೇಖರ್ ಅವರ ಬಗ್ಗೆ ಮಾತಾಡಿದ್ದಾರೆ ಅವರೇನೋ ಉದ್ಧಾರ ಮಾಡೋಕೆ ಬಿಜೆಪಿ ಸೇರಿದ್ದಾರೆ ಎಂದಿದ್ದಾರೆ ಎಂದು ಇದೇ ವೇಳೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ತಿಳಿಸಿದರು.

Latest article