Wednesday, May 18, 2022

ಇನ್‌ಸ್ಟಾಗ್ರಾಮ್‌ಗೆ ಪ್ರವಾಸದ ಫೋಟೋ ಹಾಕಿದ ಕೆಲ ಹೊತ್ತಿನ ಬಳಿಕ ಗಾಯಕಿಯ ಸಾವು..!

Must read

ಥಾಣೆ: ಗೀತಾ ಮಾಲಿ ಎಂಬ ಮರಾಠಿ ಗಾಯಕಿ ಪ್ರವಾಸ ಮುಗಿಸಿ ಮನೆಗೆ ಹಿಂದಿರುಗುವಾಗ, ಮಹಾರಾಷ್ಟ್ರದ ಥಾಣೆ ಜಿಲ್ಲೆಯಲ್ಲಿ ನಡೆದ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ.

ಗೀತಾ ಮಾಲಿ ಮತ್ತು ಆಕೆಯ ಪತಿ ವಿಜಯ್ 2 ತಿಂಗಳ ಯುಎಸ್‌ ಪ್ರವಾಸ ಮುಗಿಸಿ ಹಿಂದಿರುವಾಗ ಮುಂಬೈ- ಆಗ್ರಾ ಹೈವೇಯಲ್ಲಿ ತನ್ನ ಊರು ನಾಸಿಕ್‌ಗೆ ತೆರಳುವಾಗ ಅಪಘಾತ ಸಂಭವಿಸಿ, ಗೀತಾ ಮತ್ತು ಆಕೆಯ ಪತಿ ಗಂಭೀರವಾಗಿ ಗಾಯಗೊಂಡಿದ್ದರು. ಈ ವೇಳೆ ಅವರನ್ನು ಶಾಹ್‌ಪುರ ರೂರಲ್ ಆಸ್ಪತ್ರೆಗೆ ಸೇರಿಸಲಾಗಿತ್ತು. ಆದ್ರೆ ಚಿಕಿತ್ಸೆ ಫಲಿಸದೇ ಗಾಯಕಿ ಗೀತಾ ಮಾಲಿ ಮೃತಪಟ್ಟಿದ್ದಾರೆ.

ಇನ್ನು ಸಾವಿಗೂ ಕೆಲ ಹೊತ್ತಿನ ಮುಂಚೆ ಗಾಯಕಿ ಗೀತಾ ಬಾಲಿ ತಮ್ಮ ಇನ್‌ಸ್ಟಾ ಗ್ರಾಮ್‌ನಲ್ಲಿ ಫೋಟೋವೊಂದನ್ನ ಪೋಸ್ಟ್ ಮಾಡಿ, ಎರಡು ತಿಂಗಳ ಯುಎಸ್‌ ಪ್ರವಾಸದ ನಂತರ ಮುಂಬೈಗೆ ಬಂದಿಳಿದ ಕ್ಷಣವೆಂದು ಫೋಟೋ ಅಪ್ಲೋಡ್ ಮಾಡಿದ್ದರು.

Latest article