ಚಿಕ್ಕೋಡಿ: ವಾಯವ್ಯ ಕರ್ನಾಟಕ, ಈಶಾನ್ಯ ಕರ್ನಾಟಕ ಎಂದು ಸರ್ಕಾರಿ ಬಸ್ಗಳ ಹೆಸರಿದ್ದು ಅವುಗಳಲ್ಲಿ ಯಾವುದು ಎಂಬುದೇ ಸರಿಯಾಗಿ ಗೊತ್ತಾಗುವುದಿಲ್ಲ. ಹೀಗಾಗಿ ಅವುಗಳ ಹೆಸರುಗಳನ್ನು ಬದಲಾವಣೆ ಮಾಡಲು ಚಿಂತನೆ ನಡೆದಿದೆ ಎಂದು ಸಾರಿಗೆ ಸಚಿವ ಲಕ್ಷ್ಮಣ್ ಸವದಿ ಅವರು ಹೇಳಿದ್ದಾರೆ.
ಜಿಲ್ಲೆಯ ಅಥಣಿ ಬಸ್ ನಿಲ್ದಾಣ ಉದ್ಘಾಟಿಸಿ ಮಾತನಾಡಿದ ಅವರು, ಸಾರಿಗೆ ಇಲಾಖೆಯ ನಿಗಮಗಳನ್ನು ನೋಡಿದರೆ ನಮಗೆ ಅದರ ಹೆಸರುಗಳು ಕನ್ಪ್ಯೂಸ್ ಆಗುತ್ತವೆ. ಸಾರಿಗೆ ಇಲಾಖೆಗೆ ಒಂದು ರೂಪ ಒಂದು ಗತಿಗೆ ಅದನ್ನು ನಾನು ತರುತ್ತೇನೆ ಎಂದರು.
ಇನ್ನು ಸಾರಿಗೆ ಇಲಾಖೆ ಎಂದರೆ ಅಲ್ಲೇನು ತಲೆ ಕಡೆಸಿಕೊಳ್ಳುವುದಿರುವುದಿಲ್ಲ ಎಂದು ನಾನು ಭಾವಿಸಿದ್ದೆ. ಆದರೆ ನಾನು ಒಳಗೆ ಬಂದ ಮೇಲೆ ನನಗೆ ಗೊತ್ತಾಯಿತು ಇಲ್ಲಿ ನನ್ನನ್ನು ತೆಲೆ ಕೆಡಿಸಿಕೊಳ್ಳಲೆಂದೆ ಹಾಕಿದ್ದಾರೆ ಎಂದು ಅವರು ತಮ್ಮ ಸ್ವಂತ ಇಲಾಖೆಯ ಬಗ್ಗೆ ಅಸಮಾಧಾನ ಹೊರಹಾಕಿದರು.
ಸರ್ಕಾರಿ ಬಸ್ 1 ಕಿ.ಮೀ ಓಡಿದರೆ ನಮಗೆ 8 ರಿಂದ 9 ರೂಪಾಯಿ ಹಾನಿ ಇದೆ. ನಾವು ಟಿಕೇಟ್ ದರ ಹೆಚ್ಚು ಮಾಡಿಲ್ಲ ಆದರೆ ಡಿಸೇಲ್ ಮತ್ತು ಸ್ಪೇರ್ ರೇಟ್ಸ್ ಜಾಸ್ತಿಯಾಗಿದೆ. ಒಂದೊಂದು ಗ್ರಾಮಕ್ಕೆ ಸ್ಪಲ್ಪ ಪ್ರಮಾಣದ ವಿದ್ಯಾರ್ಥಿಗಳನ್ನು ತರಲು ಮತ್ತು ಬಿಟ್ಟು ಬರಲು ಬಸ್ಸುಗಳನ್ನು ಬಿಡುತ್ತಿದ್ದೇವೆ. ಹೀಗಾಗಿ ಸಾರ್ವಜನಿಕರು ಹೆಚ್ಚಾಗಿ ಸಾರ್ವಜನಿಕ ಬಸ್ಸುಗಳನ್ನು ಬಳಸಿದೆ ಸಾರಿಗೆ ಇಲಾಖೆಗೆ ಅನುಕೂಲವಾಗಲಿದೆ ಎಂದು ಅವರು ಅಲ್ಲಿ ನೆರೆದಿದ್ದ ಜನರಿಗೆ ಮನವಿ ಮಾಡಿಕೊಂಡರು.