ಪ್ರತಿ ವರ್ಷ ‘ಎಯ್ಟೀಸ್ ರೀ ಯೂನಿಯನ್’ ಹೆಸರಿನಲ್ಲಿ 80ರ ದಶಕದ ಸೌತ್ ನಟ-ನಟಿಯರೆಲ್ಲಾ ಒಂದೆಡೆ ಸೇರಿ, ಪಾರ್ಟಿ ಮಾಡ್ತಾರೆ. ಕಳೆದ ವರ್ಷ ನಡೆದ ಪಾರ್ಟಿಯಲ್ಲಿ ಚಿರಂಜೀವಿ, ಆ ಕಾಲದ ನಾಯಕಿಯರ ಜೊತೆ ಮಸ್ತ್ ಮಸ್ತ್ ಸ್ಟೆಪ್ಸ್ ಹಾಕಿರೋ ವೀಡಿಯೋ ಈಗ ರಿವೀಲ್ ಆಗಿದೆ.
ಮೆಗಾಸ್ಟಾರ್ ಅಂದ್ರೆ ಡ್ಯಾನ್ಸ್. ಡ್ಯಾನ್ಸ್ ಅಂದ್ರೆ ಮೆಗಾಸ್ಟಾರ್. ಸೌತ್ ಸಿನಿದುನಿಯಾದಲ್ಲಿ ಎಷ್ಟೇ ಜನ ಹೀರೋಗಳು ಬಂದರು, ಹೋದರು, ಚಿರು ಡ್ಯಾನ್ಸ್ ಮತ್ತು ಆ ಡ್ಯಾನ್ಸ್ನಲ್ಲಿರೋ ಜೋಶ್ನ ಬೀಟ್ ಮಾಡೋಕ್ಕೆ ಸಾಧ್ಯವಿಲ್ಲ. ವಯಸ್ಸು 60 ದಾಟಿದರು, ಚಿರು ಡ್ಯಾನ್ಸ್ಗೆ ಇನ್ನು 20ರ ಹರೆಯ.

ಕಳೆದ ಹತ್ತು ವರ್ಷಗಳಿಂದ 80ರ ದಶಕದ ನಟನಟಿಯರು ಒಂದೆಡೆ ಸೇರಿ ಪಾರ್ಟಿ ಮಾಡಿ ಎಂಜಾಯ್ ಮಾಡ್ತಾ ಬರ್ತಿದ್ದಾರೆ. ಕಳೆದ ವರ್ಷ ಚಿರಂಜೀವಿ ಹೊಸ ಮನೆಯಲ್ಲಿ ಪಾರ್ಟಿ ಮಾಡಿದರು. ಕೆಲ ಫೋಟೋಗಳು ಬಿಟ್ರೆ, ಅದಕ್ಕೆ ಸಂಬಂಧಿಸಿದ ವೀಡಿಯೋ ರಿವೀಲ್ ಆಗಿರಲಿಲ್ಲ. ಇದೀಗ ಸ್ವತಃ ಚಿರು ಬೊಂಬಾಟ್ ವಿಡಿಯೋ ಶೇರ್ ಮಾಡಿದ್ದಾರೆ.
ಸುಹಾಸಿನಿ ಜೊತೆ ರಾಕ್ಷಸುಡು ಚಿತ್ರದ ಹಾಡಿಗೆ ಹೆಜ್ಜೆ ಹಾಕಿರೋ ಚಿರು, ರಾಧ ಜೊತೆ ಮರಣ ಮೃದಗಂ ಚಿತ್ರದ ಹಾಡಿಗೆ ಕುಣಿದು ರಂಗೇರಿಸಿದ್ದಾರೆ. ಖುಷ್ಬು ಜೊತೆ ಬಂಗಾರು ಕೋಡಿ ಪೆಟ್ಟ ಹಾಡಿದೆ ಮೆಗಾಸ್ಟಾರ್ ಹೆಜ್ಜೆ ಹಾಕೋಕ್ಕೆ ಶುರು ಮಾಡ್ತಿದಂತೆ, ಜಯಪ್ರದಾ ಮತ್ತು ಜಯಸುಧ ಸಾಥ್ ಕೊಡ್ತಾರೆ.

ಸುಮಲತಾ ಅಂಬರೀಶ್, ವಿಕ್ಟರಿ ವೆಂಕಟೇಶ್, ಸರಿತಾ, ನಧಿಯಾ, ನಾಗಾರ್ಜುನ, ರಮೇಶ್ ಅರವಿಂದ್, ರಾಧಿಕಾ, ಜಾಕಿಶ್ರಾಫ್ ಸೇರಿದಂತೆ 80ರ ದಶಕದ ಸ್ಟಾರ್ ನಟನಟಿಯರೆಲ್ಲಾ ಡ್ಯಾನ್ಸ್ ನೋಡಿ ಎಂಜಾಯ್ ಮಾಡಿರೋದನ್ನು ನೋಡಬಹುದು.