ಸೆನ್ಸೇಷನಲ್ ಸ್ಟಾರ್ ಕೋಮಲ್ ಯಾಕೋ ಇದ್ದಕ್ಕಿದಂತೆ ಸೈಲೆಂಟಾಗ್ಬಿಟ್ಟಿದರು. ಕೆಂಪೇಗೌಡ-2 ಸಿನಿಮಾನೇ ಕೊನೆ. ಆ ನಂತರ ಅವರ ಹೊಸ ಸಿನಿಮಾ ಕಥೆಯೂ ಇಲ್ಲ. ಅವರು ಎಲ್ಲೂ ಹೆಚ್ಚು ಕಾಣಿಸಿಕೊಳ್ಳಲೂ ಇಲ್ಲ. ಇದೀಗ ಕೋಮಲ್ ಹೊಸ ಸಿನಿಮಾ ಅನೌನ್ಸ್ ಆಗಿದೆ. ಅಭಿಮಾನಿಗಳು ಅವ್ರನ್ನ ಹೇಗೆ ನೋಡ್ಬೇಕು ಅಂದುಕೊಂಡಿದ್ರೋ ಅದೇ ರೀತಿ ರಂಜಿಸೋಕ್ಕೆ ಬರ್ತಿದ್ದಾರೆ.
ಕೋಮಲ್ ಅಂದ್ರೆ, ಕಾಮಿಡಿ. ಕಾಮಿಡಿ ಅಂದ್ರೆ ಕೋಮಲ್. ಜಗ್ಗೇಶ್ ಸಹೋದರ ತೆರೆಮೇಲೆ ಬಂದ್ರೆ, ಪ್ರೇಕ್ಷಕರು ಬಿದ್ದು ಬಿದ್ದು ನಗ್ತಾರೆ. ಪ್ರೇಕ್ಷಕರನ್ನ ಹೊಟ್ಟೆ ಹುಣ್ಣಗಿಸುವಂತೆ ನಗಿಸುವ ತಾಕತ್ತು ಕೋಮಲ್ಗಿದೆ. ಅದು ಸಾಕಷ್ಟು ಸಿನಿಮಾಗಳಲ್ಲಿ ಸಾಬೀತಾಗಿದೆ.
ಕಾಮಿಡಿ ಟೈಮಿಂಗ್ನಿಂದ ಪ್ರೇಕ್ಷಕರ ಹೊಟ್ಟೆ ಹುಟ್ಟಾಗುವಂತೆ ನಗಿಸ್ತಿದ್ದ ನಟ ಕೋಮಲ್. ಅದ್ಯಾಕೋ ಕೆಂಪೇಗೌಡ -2 ಸಿನಿಮಾ ಮಾಡೋಕ್ಕೆ ಹೋಗಿ ಕೋಮಲ್ ಕಳೆದೇ ಹೋಗಿ ಬಿಟ್ಟಿದ್ದರು. ಇದೀಗ ಮತ್ತೆ ಹಳೇ ಖದರ್ನಲ್ಲೇ ಪ್ರೇಕ್ಷಕರ ಮನ ಗೆಲ್ಲೋಕ್ಕೆ ಕೋಮಲ್ ಬರ್ತಿದ್ದಾರೆ.

ಕೆಂಪೇಗೌಡ-2 ಸಿನಿಮಾದಲ್ಲಿ ಪೊಲೀಸ್ ಆಫಿಸರ್ ಪಾತ್ರದಲ್ಲಿ ಕೋಮಲ್ ಕಮಾಲ್ ಮಾಡಿದರು. ಆದರೆ, ಸಿನಿಮಾ ಸಕ್ಸಸ್ ಆಗ್ಲಿಲ್ಲ. ‘ಕೊಂಗ್ಕಾ ಪಾಸ್’ ಅನ್ನೋ ಹೊಸ ಸಿನಿಮಾದಲ್ಲಿ ಕೋಮಲ್ ಆರ್ಮಿ ಆಫೀಸರ್ ರೋಲ್ನಲ್ಲಿ ಬಣ್ಣ ಹಚ್ಚಿದ್ದಾರೆ. ಮಿರೋಷ್ ಮೋಹನ್ ನಿರ್ದೇಶನದ ಈ ಚಿತ್ರಕ್ಕೆ ಸ್ವತಃ ಕೋಮಲ್ ಕತೆ ಬರೆದಿದ್ದಾರೆ. ಆದರೆ, ಇದೀಗ ಹೊಸ ಚಿತ್ರವೊಂದಕ್ಕೆ ಕೋಮಲ್ ಗ್ರೀನ್ ಸಿಗ್ನಲ್ ಕೊಟ್ಟಿದ್ದು, ಇದು ಕಾಮಿಡಿ ಸಿನಿಮಾ ಅನ್ನೋದು ವಿಶೇಷ.
ಕೋಮಲ್ ಇನ್ಮುಂದೆ ಕಾಮಿಡಿ ಸಿನಿಮಾಗಳಲ್ಲಿ ನಟಿಸೋದೇ ಇಲ್ವೇನೋ ಅಂದುಕೊಂಡಿದ್ದ ಪ್ರೇಕ್ಷಕರಿಗೆ ಈ ಸುದ್ದಿ ಸಂತಸ ತಂದಿದೆ. ಚಮಕ್’, ‘ಅಯೋಗ್ಯ’ ಸೇರಿದಂತೆ ಸಾಲು ಸಾಲು ಸಿನಿಮಾಗಳನ್ನು ನಿರ್ಮಾಣ ಮಾಡಿರುವ ನಿರ್ಮಾಪಕ ಟಿ.ಆರ್. ಚಂದ್ರಶೇಖರ್ ನಿರ್ಮಾಣದ ಹೊಸ ಚಿತ್ರದಲ್ಲಿ ಕೋಮಲ್ ಹೀರೋ ಆಗಿ ನಟಿಸುತ್ತಿದ್ದಾರೆ. ನಿಮಾಗಳಿಗೆ ಸಂಭಾಷಣೆ ಬರೆದಿರುವ ಕೆ.ಎಲ್ ರಾಜಶೇಖರ್ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿಕೊಳ್ಳುತ್ತಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಸದಾ ಆಕ್ಟೀವ್ ಆಗಿರೋ ಜಗ್ಗೇಶ್, ಕೋಮಲ್ ಹೊಸ ಸಿನಿಮಾ ಬಗ್ಗೆ ಭವಿಷ್ಯ ನುಡಿದಿದ್ದಾರೆ. ಪ್ರೇಕ್ಷಕರು ಕೋಮನ್ ಅವ್ರನ್ನ ಹೇಗೆ ನೋಡ್ಬೇಕು ಅಂದುಕೊಂಡಿದ್ರೋ ಅದೇ ರೀತಿಯಲ್ಲಿ ಈ ಸಿನಿಮಾ ಬರುತ್ತೆ. ಅದ್ಭುತ ಕಾಮಿಡಿ ಚಿತ್ರವಾಗುತ್ತೆ, ಅಂತ ಟ್ವೀಟ್ ಮಾಡಿದ್ದಾರೆ.
ಕ್ರಿಸ್ಟಲ್ ಪಾರ್ಕ್ ಸಿನಿಮಾಸ್ ಬ್ಯಾನರ್ನ ಎಂಟನೇ ಸಿನಿಮಾ ಇದಾಗಲಿದೆ. ಕೆ.ಎಲ್ ರಾಜಶೇಖರ್ ಹೇಳಿದ ಕಥೆ ಕೇಳಿ ಚಂದ್ರಶೇಖರ್ ಸಿನಿಮಾ ನಿರ್ಮಾಣಕ್ಕೆ ಒಪ್ಪಿದ್ದಾರೆ. ಕೋಮಲ್ ಕೂಡ ಕಥೆ ಕೇಳಿ ನಟಿಸೋಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ಧಾರೆ. ಶೀಘ್ರದಲ್ಲೇ ಈ ಸಿನಿಮಾ ಸೆಟ್ಟೇರಲಿದೆ. ಒಟ್ನಲ್ಲಿ ಕೋಮಲ್ ಮತ್ತೆ ಕಾಮಿಡಿ ಸಿನಿಮಾಗಳತ್ತ ಹೊರಳಿರೋದು ಅಭಿಮಾನಿಗಳಿಗೆ ಸಂತಸ ತಂದಿದೆ.