ವಾರಣಾಸಿ: ದೇಶಾದ್ಯಂತ ಈರುಳ್ಳಿ ಬೆಲೆ ಗಗನಕ್ಕೇರಿದ್ದು ಒಂದು ಕೆಜಿ ಕೊಂಡುಕೊಳ್ಳಲು ಗ್ರಾಹಕರು ಯೋಚಿಸುವಂತಾಗಿದೆ. ಕೆಜಿ ಈರುಳ್ಳಿ ಬೆಲೆ 130ರೂ. ತಲುಪಿದ್ದು, ಕತ್ತಿರಿಸುವಾಗಷ್ಟೇ ಅಲ್ಲ. ಕೊಳ್ಳುವಾಗ್ಲೂ ಕಣ್ಮೀರಿಡುಂತಾಗಿದೆ.
ವಿಪರ್ಯಾಸ ಅಂದ್ರೆ ಪ್ರಧಾನಿ ನರೇಂದ್ರ ಮೋದಿ ತವರು ಕ್ಷೇತ್ರದಲ್ಲೇ ಈರುಳ್ಳಿ ಖರೀದಿಸಲು ಸಾಲ ನೀಡಲಾಗ್ತಿದೆ.
ಉತ್ತರ ಪ್ರದೇಶದ ವಾರಣಾಸಿಯಲ್ಲಿ ಸಮಾಜವಾದಿ ಪಕ್ಷದ ಯುವಮೋರ್ಚಾ ಘಟಕ ಪ್ರಧಾನಿ ಮೋದಿ ವಿರುದ್ಧ ವಿನೂತನ ಪ್ರತಿಭಟನೆ ನಡೆಸ್ತು. ಸಾರ್ವಜನಿಕರಿಂದ ಆಧಾರ್ಕಾರ್ಡ್ ಅಡವಿರಿಸಿಕೊಂಡು ಈರುಳ್ಳಿ ಕೊಡ್ತಿದ್ದಾರೆ.
ಮತ್ತೊಂದ್ಕಡೆ ಉತ್ತರ ಪ್ರದೇಶದಲ್ಲಿ ಕೇವಲ 40 ರೂಪಾಯಿಗೆ ಈರುಳ್ಳಿ ಮಾರಾಟ ಮಾಡಿ ಕಾಂಗ್ರೆಸ್ ಕೇಂದ್ರ ಸರ್ಕಾರಕ್ಕೆ ಟಕ್ಕರ್ ಕೊಡ್ತು. ಈರುಳ್ಳಿ ಖರೀದಿಸಲು ಗ್ರಾಹಕರು ಕಿಲೋ ಮೀಟರ್ಗಟ್ಟಲೇ ಕ್ಯೂ ನಿಂತಿದರು.
ಬಿಹಾರ ಸರ್ಕಾರ ಕೋ ಆಪರೇಟಿವ್ ಸಂಘದ ಮೂಲಕ 35 ರೂ ಗೆ ಈರುಳ್ಳಿ ಮಾರಾಟ ಮಾಡುತ್ತಿದೆ. ಒಬ್ಬರಿಗೆ 2 ಕೆ ಜಿ ಮಾರಾಟ ಮಾಡಲಾಗುತ್ತಿದ್ದು, ಮದುವೆ ಕಾರ್ಯಕ್ರಮಗಳಿದ್ದವರು ಆಮಂತ್ರಣ ಪತ್ರಿಕೆ ತೋರಿಸಿ 25 ಕೆಜಿ ಈರುಳ್ಳಿ ಖರೀದಿಸಬಹುದಾಗಿದೆ.
ಇನ್ನು ದೇಶದ ಹಲವೆಡೆ ಸುಮಾರು 25 ಲಕ್ಷ ರೂ. ಮೌಲ್ಯದ ಈರುಳ್ಳಿ ಕಳುವಾಗಿದೆ. ದೆಹಲಿ, ಗುಜರಾತ್, ಪಶ್ಚಿಮ ಬಂಗಾಳ ಮತ್ತು ಬಿಹಾರ ಸೇರಿದಂತೆ ಕೆಲ ರಾಜ್ಯಗಳಲ್ಲಿ ಅಂಗಡಿ ಮತ್ತು ಟ್ರಕ್ ಗಳಲ್ಲಿನ ಈರುಳ್ಳಿಗೆ ಖನ್ನ ಹಾಕ್ತಿದ್ದಾರೆ. ಇಷ್ಟು ದಿನ ಮನೆ, ಅಂಗಡಿ,ಶೋ ರೂಮ್ಗಳಿಗೆ ನುಗ್ಗುತ್ತಿದ್ದ ಕಳ್ಳರು ಈರುಳ್ಳಿ ವಾಸನೆ ಹಿಡಿದು ಹೊರಟಿದ್ದಾರೆ.
ಅದೇನೆ ಇರಲಿ ಕೆಂಪು ಬಂಗಾರದ ಬೆಲೆ ಗಗನಕ್ಕೇರುತ್ತಿದ್ದು, ಗ್ರಾಹಕರಿಗೆ ಕಣ್ಣೀರು ತರಿಸ್ತಿದೆ. ಡಿಸೆಂಬರ್ ಮುಗಿರೋವರೆಗೂ ಬೆಲೆ ಏರಿಕೆ ಹೀಗೆ ಮುಂದುವರೆಯುವ ಸಾಧ್ಯತೆ ಇದೆ.