Wednesday, May 18, 2022

ಅವ್ರು ಬಿಜೆಪಿ ಸೇರ್ಪಡೆ ಆಗ್ಬೇಕನ್ನೋದು ನಮ್ಮ ಉದ್ದೇಶ – ಉಪಮುಖ್ಯಮಂತ್ರಿ ಅಶ್ವಥ್ ನಾರಾಯಣ್

Must read

ಚಿಕ್ಕಬಳ್ಳಾಪುರ: ಅನರ್ಹ ಶಾಸಕರು ಬಿಜೆಪಿ‌ ಸೇರ್ಪಡೆ ಆಗಬೇಕು ಎನ್ನುವುದು ನಮ್ಮೆಲ್ಲರ ಉದ್ದೇಶವಾಗಿದೆ ಎಂದು ಡಿಸಿಎಂ ಡಾ.ಅಶ್ವಥ್ ನಾರಾಯಣ್​ ಅವರು ಭಾನುವಾರ ಹೇಳಿದರು.

ಜಿಲ್ಲೆಯ ಮುದ್ದೇನಹಳ್ಳಿಯ ಖಾಸಗಿ ಕಾರ್ಯಕ್ರಮಕ್ಕೆ ಆಗಮಿಸಿ ಮಾತನಾಡಿದ ಅವರು, ಅನರ್ಹ ಶಾಸಕರು ನಮ್ಮ ಪಕ್ಷಕ್ಕೆ ಬಂದರೆ ಸ್ವಾಗತವನ್ನು ಕೋರುತ್ತೇವೆ. ಅನರ್ಹ ಶಾಸಕರು ಇನ್ನು ಯಾರು ಸಹ ಅಧಿಕೃತವಾಗಿ ಪಕ್ಷಕ್ಕೆ ಸೇರ್ಪಡೆ ಆಗಿಲ್ಲ ಎಂದು ಅವರು ನುಡಿದರು.

ಉಪಚುನಾವಣೆಯಲ್ಲಿ 15 ಕ್ಷೇತ್ರಗಳನ್ನು ನಾವೇ ಗೆಲ್ಲಲಿದ್ದೇವೆ. ಅಲ್ಲದೇ ಬಿಜೆಪಿಯಿಂದ ನೂತನ ಬೆಂಗಳೂರು ಮೇಯರ್ ಆಯ್ಕೆ ವಿಚಾರಕ್ಕೆ ಸಂಭಂದ ಪಟ್ಟಂತೆ ಮಾತನಾಡಿದ ಅವರು ಬೆಂಗಳೂರು ಮೇಯರ್ ಆಯ್ಕೆಗೆ ಭಾರಿ ಡಿಮ್ಯಾಂಡ್ ಇದೆ. ಬಿಬಿಎಂಪಿಯಲ್ಲಿ ಬಿಜೆಪಿ ಪಕ್ಷ ಮೆಜಾರಿಟಿ ಇದ್ರೂ ಅಧಿಕಾರ ಸಿಕ್ಕಿರಲಿಲ್ಲ. ಈಗ ಒಳ್ಳೆಯ ಅವಕಾಶಕ್ಕಾಗಿ ಎಲ್ಲರೂ ಹಾತೊರೆಯುತ್ತಿದ್ದು, ನಾಳೆ ಸಂಜೆ ನೂತನ ಮೇಯರ್ ಆಯ್ಕೆ ಘೋಷಣೆ ಆಗುತ್ತದೆ ಎಂದರು.

ಇನ್ನು ವಿಜಯನಗರ ಹೊಸ ಜಿಲ್ಲೆ ಘೋಷಣೆಯ ಬಗ್ಗೆ ಮಾತನಾಡಿ, ಹೊಸ ಜಿಲ್ಲೆ ಆಗುವುದು ಎಲ್ಲರೂ ಸ್ವಾಗತಿಸಬೇಕು. ವಿಜಯನಗರ ಸಾಮ್ರಾಜ್ಯದ ಬಗ್ಗೆ ಹೆಮ್ಮೆಯಿದೆ. ವಿಜಯನಗರ ಜಿಲ್ಲೆ ಆಗುವುದನ್ನು ಯಾರೂ ಅಡಚಣೆ ಮಾಡಬಾರದು. ವಿಜಯನಗರ ನೂತನ ಜಿಲ್ಲೆ ಘೋಷಣೆಗೆ ಸರ್ಕಾರ ಸಜ್ಜಾಗಿದೆ ಎಂದು ಡಿಸಿಎಂ ಅಶ್ವಥ್ ನಾರಾಯಣ್ ಅವರು ಹೇಳಿದರು.

Latest article