ಅಮೇರಿಕಾ: ಅಬುಬಕರ್ ಅಲ್ ಬಾಗ್ದಾದಿ. ವಿಶ್ವವಕ್ಕೆ ಕಂಟಕವಾಗಿ ಕಾಡುತ್ತಿ ರಕ್ತ ಪಿಪಾಸು. ಅಷ್ಟೇ ಯಾಕೆ ಭಯೋತ್ಪಾದನೆ ಅನ್ನು ವಿಷ ಬೀಜವನ್ನು ಜಗತ್ತಿನೆಲ್ಲೆಡೆ ಬಿತ್ತಿದ ನರಹಂತಕ. ಉತ್ತರ ಸಿರಿಯಾದಲ್ಲಿ ಕುಳಿತು ಸಾವಿರಾರು ಮಂದಿಯ ರಕ್ತದ ಕೋಡಿ ಹರಿಸಿದವ ಈಗ ಬೀದಿ ಹೆಣವಾಗಿದ್ದಾನೆ.
ಹೇಡಿಗಳಂತೆ ಅಡಗಿ ಕುಳತಿದ್ದವನನ್ನು ಅಮೆರಿಕಾ ಸೈನಿಕರು ಅಟ್ಟಾಡಿಸಿ ಬೇಟೆಯಾಡಿದ್ದಾರೆ. ಅಮೆರಿಕ ಪಡೆಗಳ ಕ್ಷಿಪ್ರ ಕಾರ್ಯಾಚಾರಣೆಯಲ್ಲಿ ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆಯ ಮುಖ್ಯಸ್ಥನ ಚೆಂಡಾಡಿದ್ದಾರೆ ಎಂದು ‘ಬ್ಲೂಮ್ಬರ್ಗ್’ ವರದಿ ಮಾಡಿದೆ.
ವಿಶ್ವದ ಮೋಸ್ಟ್ ಉಗ್ರರ ಸ್ಥಾನದಲ್ಲಿ ನಿಲ್ಲುತ್ತಿದ್ದ ಈ ಪಾಪಿ ಬಗ್ದಾದಿ. 2014ರಿಂದಲೂ ಭೂಗತನಾಗಿದ್ದ ಈತ ಕಳೆದ ಏಪ್ರಿಲ್ ನಲ್ಲಿ ಏಕಾಏಕಿ ವಿಡಿಯೋವೊಂದರಲ್ಲಿ ಕಾಣಿಸಿಕೊಂಡಿದ್ದ. ಅಲ್ಲಿಯವರೆಗೂ ಎಲ್ಲಿದ್ದಾನೆ. ಬದುಕಿದ್ದನಾ ಅನ್ನುವ ಸುಳಿವು ಇಲ್ಲದವರಿಗೆ ಶಾಕ್ ಆಗಿತ್ತು.
ಕತ್ತಲೆ ಕೋಣೆಯಲ್ಲಿ ಕುಳಿತು ಹೊಂಚು ಹಾಕ್ತಿದ್ದವನ ಹೆಡೆಮುರಿ ಕಟ್ಟಲು ಅಮೆರಿಕ ಸೇನೆ ಪಟ್ಟ ಪಾಡು ಅಷ್ಟಿಷ್ಟಲ್ಲ. ರಕ್ತಾಸುರನ ಜಾಡು ಹಿಡಿದು 2017ರಲ್ಲಿ ವಾಯುದಾಳಿ ನಡೆಸಿದ್ದ ಅಮೆರಿಕ ಸೇನೆ ಬಾಗ್ದಾದಿಯ ಬುಡಮೇಲು ಮಾಡಿತ್ತು. ಬಾಗ್ದಾದಿ ಕೋಟೆಯನ್ನು ಸರ್ವನಾಶ ಮಾಡ್ತಿದ್ದಂತೆ ಅಲ್ಲಿಂದ ಕಾಲ್ಕಿತ್ತಿದ್ದ ಪಾಪಿ ಪಿಪಾಸು ಬದುಕಿರುವ ಬಗ್ಗೆಯೇ ಸುಳಿವು ಕೊಟ್ಟಿರಲಿಲ್ಲ. ಈತನ ರಕ್ತದೋಕುಳಿಗೆ ಪಟ್ಟು ಹಿಡಿದಿದ್ದ ಅಮೇರಿಕ ಬಾಗ್ದಾದಿಯ ಸುಳಿವು ಕೊಟ್ಟವರಿಗೆ 25 ಮಿಲಿಯನ್ ಡಾಲರ್ ಬಹುಮಾನ ನೀಡುವುದಾಗಿ ಘೋಷಣೆ ಮಾಡಿತ್ತು.
ನಿನ್ನೆ ಟ್ವೀಟ್ವೊಂದನ್ನು ಮಾಡಿದ್ದ ಶ್ವೇತ ಭವನ, ಭಾನುವಾರ ಡೊನಾಲ್ಡ್ ಟ್ರಂಪ್ ಮಹತ್ತರ ಹೇಳಿಕೆಯೊಂದನ್ನು ನೀಡಲಿದ್ದಾರೆ. ಎಂದು ಕುತೂಹಲ ಮೂಡಿಸಿತ್ತು. ಇದರ ಬೆನ್ನಲ್ಲೇ ಇಂದು ಮುಂಜಾನೆ ಟ್ವೀಟ್ ಮಾಡಿರೋ ಡೊನಾಲ್ಡ್ ಟ್ರಂಪ್ ‘ಮಹತ್ತರವಾದದ್ದು ಈಗಷ್ಟೇ ಆಗಿದೆ’ ಎಂದು ಬರೆದು ಕೊಂಡಿದ್ದರು.
ಇದು ಜಗತ್ತಿನೆಲ್ಲೆಡೇ ಚರ್ಚೆಗೆ ಕಾರಣವಾಗಿತ್ತು. ಬಾಗ್ದಾದಿ ಹತ್ಯೆ ಬಗ್ಗೆ ಎಲ್ಲೂ ಅಧಿಕೃತವಾಗಿ ಮಾಹಿತಿ ಹೊರ ಬಿದ್ದಿಲ್ಲ. ಅಂತಾರಾಷ್ಟ್ರೀಯ ಮಾಧ್ಯಮಗಳು ಸುದ್ದಿ ಪ್ರಕಟಿಸಿದ್ದು, ರಕ್ತ ಪಿಪಾಸು ಸಂಹಾರವಾಗಿದೆ ಎಂದು ಸಂಭ್ರಮಿಸಿವೆ.
ನ್ಯೂಸ್ಡೆಸ್ಕ್ ಟಿವಿ5