Wednesday, May 18, 2022

ಅಪಪ್ರಚಾರದ ಮಾತುಗಳಿಗೆ ಯಾರು ಕಿವಿ ಕೊಡಬೇಡಿ – ಡಾ. ಡಿ ವೀರೇಂದ್ರ ಹೆಗ್ಗಡೆ

Must read

ಮಂಗಳೂರು: ಧರ್ಮಸ್ಥಳದಲ್ಲಿ‌ ನಂದಾದೀಪ ನಂದಿ ಹೋದ ವದಂತಿ ವಿಚಾರವಾಗಿ ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆ ಸ್ಪಷ್ಟನೆ ನೀಡಿದ್ದಾರೆ.

ಅಪಪ್ರಚಾರದ ಮಾತುಗಳಿಗೆ ಯಾರು ಕಿವಿ ಕೊಡಬೇಡಿ, ರಾತ್ರಿ 8 ಗಂಟೆಗೆ ದೇಗುಲದ ಬಾಗಿಲು ಹಾಕಲಾಗುತ್ತದೆ. ಬೆಳಗ್ಗೆ 5 ಗಂಟೆಗೆ ಬಾಗಿಲು ತೆರೆಯುತ್ತಾರೆ. ಮಧ್ಯದಲ್ಲಿ ಭಕ್ತರು ಯಾರು ಪ್ರವೇಶ ಮಾಡುವುದಿಲ್ಲ, ನಂತರ ಪ್ರವೇಶ ಮಾಡಿದವರು ಯಾರು? ನಂದಾದೀಪ ನಂದಿ ಹೋಗಿದನ್ನು ನೋಡಿದ್ದು ಯಾರು? ಇದು ಭಕ್ತರ ಭಾವನೆ, ನಂಬಿಕೆ ಜೊತೆ ಕಿಡಿಕೇಡಿಗಳು ಮಾಡಿದ ಸುಳ್ಳು ವದಂತಿ ಎಂದು ತಿಳಿಸಿದ್ದಾರೆ.

ವದಂತಿಯಿಂದ ದೂರ ಇದ್ದು ಮನೆಯೊಳಗೆ ಮಂಜುನಾಥನ ಪ್ರಾರ್ಥನೆ ಮಾಡಿ, ಕರೊನಾ ಮಹಾಮಾರಿಯನ್ನು ಮನುಜಕುಲದಿಂದ ದೂರ ಮಾಡಿ ಎಂದು ಭಕ್ತರಿಗೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ ವೀರೇಂದ್ರ ಹೆಗ್ಗಡೆ ಕರೆ ಕೊಟ್ಟರು.

Latest article