ಅನಿಲ್ ಮತ್ತು ರಾಘವ್ ಉದಯ್.. ಕನ್ನಡ ಚಿತ್ರರಂಗಕ್ಕೆ ಉತ್ತಮ ಖಳನಟರಾಗಬೇಕಿದ್ದವರು ಮಾಸ್ತಿಗುಡಿ ದುರಂತದಲ್ಲಿ ಇಹಲೋಕ ತ್ಯಜಿಸಿದ್ರು. ಈಗಲು ಸ್ಯಾಂಡಲ್ವುಡ್ ಅವರ ನೆನಪುಗಳನ್ನ ಮಾಡಿಕೊಳ್ಳುತ್ಲೇ ಇದೆ. ಈಗ ಅನಿಲ್ ಮತ್ತು ಉದಯ್ ನೆನಪಿನಲ್ಲಿ ಹೊಸ ಸಿನಿಮಾವೊಂದು ಸೆಟ್ಟೇರಿದೆ.
ಅನಿಲ್- ಉದಯ್ ಸಮಾಧಿ ಮುಂದೆ ಸಿನಿ ಮುಹೂರ್ತ..!
‘ಐರಾ’ ಇದು ಅನಿಲ್- ಉದಯ್ ಕಲಾವಿದರ ಸ್ಮರಣಾರ್ಥ
ಗೆಳೆಯರನ್ನು ನೆನೆದ ಬಹುದ್ಧೂರ್ ಗಂಡು ಧ್ರುವ ಸರ್ಜಾ
ಖಳನಟ ಉದಯ ಸಂಬಂಧಿಕರ ಚಿತ್ರಕ್ಕೆ ಭರ್ಜರಿ ಸಾಥ್..!
ಅನಿಲ್ ಮತ್ತು ಉದಯ್.. ಪ್ರತಿಭವಂತ ಖಳನಟರಾಗ ಬೇಕಿದ್ದವರು. ಆದ್ರೆ ವಿಧಿ ಅನ್ನೋ ಕ್ರೂರಿ ಮಾಸ್ತಿಗುಡಿ ಅನ್ನೋ ಚಿತ್ರೀಕರಣದ ದುರಂತದಲ್ಲಿ ಇಬ್ಬರನ್ನು ಬಲಿ ತೆಗೆದುಕೊಳ್ತು. ಅನಿಲ್ ಮತ್ತು ಉದಯ್ ಅವರನ್ನು ಇಂದಿಗೂ ಚಿತ್ರರಂಗ ಆಗಾಗ ನೆನೆಯುತ್ತಲೇ ಇರುತ್ತೆ. ಆದ್ರೆ ಇಲ್ಲೊಂದು ಹೊಸಬರ ಚಿತ್ರತಂಡ ಅವರಿಗಾಗಿಯೇ ತಮ್ಮ ಕನಸಿನ ಸಿನಿಮಾವನ್ನ ಅರ್ಪಿಸುತ್ತಿದೆ. ಆ ಸಿನಿಮಾವೇ ಐರಾ.
ಐರಾ.. ಇದು ದಿವಂಗತ ಅನಿಲ್ ಮತ್ತು ಉದಯ್ ಅವರಿಗೆ ಅರ್ಪಿಸುತ್ತಿರುವ ಸಿನಿಮಾ. ಐರಾ ಚಿತ್ರದ ಮುಹೂರ್ತ ಬಹಳ ವಿಶೇಷವಾಗಿ ನೆರವೇರಿದೆ. ಎಲ್ಲರೂ ಸ್ಟುಡಿಯೋಗಳಲ್ಲಿ , ದೇವಸ್ಥಾನಗಳಲ್ಲಿ ಸಿನಿಮಾದ ಮುಹೂರ್ತವನ್ನು ಮಾಡುತ್ತಾರೆ. ಆದ್ರೆ ಐರಾ ಸಿನಿಮಾ ತಂಡ ಸ್ಮಶಾಣದಲ್ಲಿ ಸಿನಿಮಾ ಮುಹೂರ್ತವನ್ನು ಆಚರಿಸಿಕೊಂಡಿದೆ.

ಅಷ್ಟಕ್ಕೂ ಐರಾ ಸಿನಿಮಾ ರುಧ್ರಭೂಮಿಯಲ್ಲಿ ಮುಹೂರ್ತವನ್ನು ಆಚರಿಸಲು ಕಾರಣ ಅನಿಲ್ ಮತ್ತು ಉದಯ್ ಸಮಾಧಿ. ಚಿತ್ರರಂಗದಲ್ಲಿ ಕೆಲವರು ಅನಿಲ್ ಮತ್ತು ಉದಯ್ ಹೆಸರುಗಳನ್ನು ಬಳಸಿಕೊಂಡು ಪ್ರಚಾರ ಗಿಟ್ಟಿಸಿಕೊಳ್ತಾರೆ. ಆದ್ರೆ ಐರಾ ಸಿನಿಮಾ ತಂಡ ಉದಯ್ ಮತ್ತು ಅನಿಲ್ ಚಿರನಿದ್ರೆಗೆ ಜಾರಿರುವ ಸಮಾಧಿಯ ಮುಂದೆಯ ಮುಹೂರ್ತವನ್ನು ಆಚರಿಸಿಕೊಂಡಿದೆ. ಈ ಹೊಸಬರ ಪ್ರಯತ್ನಕ್ಕೆ ಪೊಗರು ದಸ್ತ್ ಪೋರ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಸಾಥ್ ಕೊಟ್ಟಿದ್ದಾರೆ.
ಮಿರುನಾಳಿನಿ ನಾಯ್ಕರ್ ನಿರ್ಮಾಣದಲ್ಲಿ ರಾಜ್ ಉದಯ್ ಸಾರಥ್ಯದಲ್ಲಿ ಐರಾ ಮೂಡಿಬರಲಿದೆ. ಕಥೆ-ಚಿತ್ರಕಥೆ-ಸಂಭಾಷಣೆಯ ಜೊತೆಗೆ ತಾವೇ ನಿರ್ದೇಶನ ಮಾಡುತ್ತಿದ್ದಾರೆ ರಾಜ್ ಉದಯ್. ಶಿವು , ಕಾರ್ತಿಕ್ ವರ್ನೇಕರ್ ,ಅಕ್ಷತಾ ಹಾಗೂ ಬುಲೇಟ್ ಪ್ರಕಾಶ್ ಚಿತ್ರದ ಮುಖ್ಯಭೂಮಿಕೆಯಲ್ಲಿರಲಿದ್ದಾರೆ.
ಮುಹೂರ್ತವನ್ನು ಆಚರಿಸಿಕೊಂಡಿರುವ ಐರಾ ಸಿನಿಮಾತಂಡ ಕೇರಳ ರಾಜ್ಯಕ್ಕೆ ಶೂಟಿಂಗ್ಗೆಂದು ಪ್ರವಾಸ ಮಾಡಲಿದೆಯಂತೆ. 45ದಿನಗಳ ಶೂಟಿಂಗ್ ಯೋಜನೆ ಹಾಕಿಕೊಂಡಿರುವ ಐರಾ ಫಿಲ್ಮ್ ಟೀಮ್ ಮುಂದಿನ ವರ್ಷಕ್ಕೆ ಪ್ರೇಕ್ಷಕರ ಮುಂದೆ ಬರುವ ಗುರಿಯಲ್ಲಿದೆ.
ಶ್ರೀಧರ್ ಶಿವಮೊಗ್ಗ _ ಎಂಟರ್ಟೈನ್ಮೆಂಟ್ ಬ್ಯೂರೋ_ಟಿವಿ5