Tuesday, August 16, 2022

ಅನರ್ಹ ಶಾಸಕ ನಾರಾಯಣಗೌಡಗೆ ತಕ್ಕ ಪಾಠ ಕಲಿಸಿ..!

Must read

ಮೂರೂ ಪಕ್ಷಗಳಿಗೂ ಬೈ ಎಲೆಕ್ಷನ್ ಪ್ರತಿಷ್ಠೆಯ ಕಣ. ಹೀಗಾಗಿ ಚುನಾವಣೆಗೆ ರಣಕಹಳೆ ಮೊಳಗಿಸಿರೋ ಜೆಡಿಎಸ್, ಸಾಲ ಮನ್ನಾ ಅಸ್ತ್ರ ಪ್ರಯೋಗಿಸಿದೆ.

ಅನರ್ಹ ಶಾಸಕ ನಾರಾಯಣಗೌಡ ಉಪಚುನಾವಣೆಗಾಗಿ ಹೋಬಳಿವಾರು ಸಮಾವೇಶ ನಡೆಸಿ, ಮತದಾರರಿಗೆ ಬಾಡೂಟ ಹಾಕಿಸುತ್ತಿದ್ದಾರೆ. ಹೀಗಾಗಿ ನಾರಾಯಣಗೌಡಗೆ ಟಕ್ಕರ್ ಕೊಡಲು ಜೆಡಿಎಸ್ ಸಹ ಅಖಾಡಕ್ಕೆ ಇಳಿದಿದೆ. ಕೆ.ಆರ್.ಪೇಟೆ ಜೆಡಿಎಸ್ ಟಿಕೆಟ್ ಆಕಾಂಕ್ಷಿ, ಜಿ.ಪಂ. ಸದಸ್ಯ ಶೀಳನೆರೆ ಮಂಜು ಬೃಹತ್ ಸಮಾವೇಶ ನಡೆಸಿದರು. ಕಾರ್ಯಕ್ರಮಕ್ಕೂ ಮುನ್ನ ಕುಮಾರಸ್ವಾಮಿ ಸಿಎಂ ಆಗಿದ್ದ ಅವಧಿಯ ಸಾಲಮನ್ನಾ ಬಗ್ಗೆ ಜನರಿಗೆ ಪುಸ್ತಕ ಹಂಚಿಸಿದರು.

ಇನ್ನು ಸಮಾವೇಶದಲ್ಲಿ ಮಾತನಾಡಿದ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು, ನಾರಾಯಣಗೌಡಗೆ ತಕ್ಕ ಪಾಠ ಕಲಿಸಿ ಎಂದು ಕರೆಕೊಟ್ಟರು. ಒಟ್ನಲ್ಲಿ ಉಪ ಚುನಾವಣೆಗೆ ಇನ್ನೂ 25 ದಿನ ಇರುವಂತೆ ದಳಪತಿಗಳು ಅಖಾಡಕ್ಕೆ ಇಳಿದಿದ್ದು, ಸಾಲ ಮನ್ನಾ ಅಸ್ತ್ರ ಪ್ರಯೋಗಿದ್ದಾರೆ.

Latest article