ರಾಮನಗರ: ಜೆಡಿಎಸ್ ಪಕ್ಷ ಸಮಯ ಸಾಧಕ ಪಕ್ಷ. ಅಧಿಕಾರ ಎಲ್ಲಿ ಸಿಗುತ್ತದೆ ಆ ಕಡೆ ಹೋಗುತ್ತಾರೆ ಎಂದು ವಿಧಾನ ಪರಿಷತ್ ಸದಸ್ಯ ಸಿಎಂ ಲಿಂಗಪ್ಪ ಅವರು ಜೆಡಿಎಸ್ ವಿರುದ್ದ ಗರಂ ಆಗಿದ್ದಾರೆ.
ನಗರದಲ್ಲಿಂದು ಕಾಂಗ್ರೆಸ್-ಜೆಡಿಎಸ್ ಮೈತ್ರಿ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಜೆಡಿಎಸ್ಗೆ ಅಧಿಕಾರದ ಚಪಲತೆ ಹೆಚ್ಚು, ಜೆಡಿಎಸ್ ಪಕ್ಷದವರ ಸಹವಾಸವೇ ಬೇಡ. ಈಗ ಬಿಜೆಪಿ ಸರ್ಕಾರ ಅಧಿಕಾರದಲ್ಲಿದೆ. ಯಡಿಯೂರಪ್ಪ ಮೂರು ವರ್ಷ ಸಿಎಂ ಆಗಿರಲಿ ಅಭಿವೃದ್ಧಿ ಕೆಲಸ ಮಾಡಲಿ.
ಅಂತೆಯೇ ಮಾತನಾಡಿ, ನಾವು ವಿರೋಧ ಪಕ್ಷದಲ್ಲೆ ಇರುತ್ತೇವೆ. ಯಾವುದೇ ರೀತಿಯಲ್ಲಿ ಜೆಡಿಎಸ್ ಜೊತೆ ಸಹವಾಸ ಬೇಡ. ಹೀಗಾಗಲೇ ಅವರ ಜೊತೆ ಸಹವಾಸ ಮಾಡಿ ಕಷ್ಟ ಅನುಭವಿಸಿದ್ದೇವೆ ಎಂದು ಸಿಎಂ ಲಿಂಗಪ್ಪ ಅವರು ಹೇಳಿದರು.