Tuesday, August 16, 2022

ಅಗಲಿದ ಕವಿ ನಿಸಾರ್ ಅಹಮದ್‌ರಿಗೆ ಕವಿತೆ ಮೂಲಕ ನಮನ ಸಲ್ಲಿಸಿದ ಯೋಗರಾಜ್ ಭಟ್ಟರು..!

Must read

ಅಗಲಿದ ಕವಿ ನಿಸಾರ್ ಅಹಮದ್ ಅವರಿಗೆ ಸ್ಯಾಂಡಲ್‌ವುಡ್ ವಿಕಟಕವಿ ಯೋಗರಾಜ್ ಭಟ್ಟರು ಕವಿತೆ ಮೂಲಕ ನಮನ ಸಲ್ಲಿಸಿದರು.

ನಿಧನ ನಗುವನು ಚೆಲ್ಲಿ

ಹೃದಯವಾಗಿದೆ ಖಾಲಿ…

ಮರಳಿ ಕೇಳುವ ಬನ್ನಿ

ಕವಿ ನಿಸಾರರ ಲಾಲಿ…

ವಂದನೆ, ಅಭಿನಂದನೆ…

ಜನಿಸಿ ಬಂದರು ಅವರು ಎಂದು

ತಿಳಿಯಬೇಕಿದೆ ನಾವು ಇಂದು,

ಉಸಿರು ನಿಂತರು ನೆನಪು ನಿಲ್ಲುವುದೇ??

ಹೋಗಿ ಬನ್ನಿ ಕವಿಗಳೇ

ತಮಗೆ ಮುಡಿಪಿದು ಗಾಯನ…

ಮರೆಯಲಾರೆವು ಎಂದಿಗು

ತಾವು ಕಲಿಸಿದ ಜೀವನ…

Latest article