Monday, November 29, 2021

ಸೆಲ್ಫೀ ಮೈನೇ ಲೇಲಿಯಾ – ದಿಂಚಕ್ ಪೂಜಾ ನೆನಪಿದೆಯಾ ?

Must read

ದಿಂಚಕ್ ಪೂಜಾ ಈ ಹೆಸರು ಹಿಂದಿ ಬಿಗ್ ಬಾಸ್ಗೆ ಎಂಟ್ರಿ ಆಗೋ ಮೊದಲೇ ಸಿಕ್ಕಾಪಟ್ಟೆ ವೈರಲ್ ಆಗಿತ್ತು . ಆ ಪಬ್ಲಿಸಿಟಿಯೇ ಈಕೆಯನ್ನ ಬಿಗ್ಬಾಸ್ ಕದ ತಟ್ಟಿಸಿತ್ತು ಆಂದ್ರೆ ತಪ್ಪೇನಿಲ್ಲ ಬಿಡಿ, ಒಬ್ಬ ವ್ಯಕ್ತಿ ಹೀಗೂ ಫೇಮಸ್ ಆಗ್ಬೋದಾ ಯೋಚಿಸುವಂತೆ ಮಾಡಿದ ಸುಂದರಿ ಈಕೆ. ನಾನು ರ್ಯಾಪರ್ ಅಂತ ಹಿಂದಿಯಲ್ಲಿ ಸರಣಿ ರ್ಯಾಪ್ ಹಾಡುಗಳನ್ನ ಹಾಡಿರುವ ಈಕೆಗೆ ಕರೋಕೆ ಪಾಲೋಮಾಡಿ ಅಬ್ಯಾಸ ಇಲ್ಲ ಏನಿದ್ರು ಟ್ರಾಕ್ ಮುಂದೆ ಬಿಟ್ಟು ಅವ್ರು ಆರಾಮಾಗಿ ಸಾಂಗ್ ಹೇಳ್ಕೊಂಡು ಹೋಗಿನೆ ಅಬ್ಯಾಸ , ಅದ್ರೆ ವಿಚಿತ್ರ ಏನಪ್ಪಾ ಆಂದ್ರೆ ಇವ್ರು ಅತೀ ಕೆಟ್ಟದಾಗಿ ಹಾಡು ಹಾಡಿ ಫೇಮಸ್ ಆದವ್ರು.

ಸೆಲ್ಫಿ ಮೇನೆ ಲೇಲಿಯಾ, ದಿಲೋಂಕ ಶೂಟರ್ ದಿಂಚಕ್ ಪೂಜಾಳ ಫೇಮಸ್ ಹಾಡುಗಳು ಇದೀಗ ದಿಲೋಂಕ ಶೂಟರ್ 2.0 ಬಿಡುಗಡೆ ಆಗಿದೆ ಈ ಹಾಡನ್ನು ಕೇಳಿದ ನಂತರ ಕಿವಿಯಿಂದ ರಕ್ತ ಬರಲಾರಂಭಿಸಿದೆ ಎಂದು ಅನೇಕರು ತಮಾಷೆಯ ಮೀಮ್‌ಗಳನ್ನು ಸಹ ಹಂಚಿಕೊಳ್ಳುತ್ತಿದ್ದಾರೆ. ಇನ್ನು ವಿಡಿಯೋ ಸಾಂಗ್ನಲ್ಲಿ ಹೆಲ್ಮೆಟ್ ಧರಿಸದಿದ್ದಕ್ಕಾಗಿ ಅನೇಕ ಜನರು ದಿಂಚಕ್ ಪೂಜಾಳನ್ನ ಟ್ರೋಲ್ ಮಾಡಿದ್ದಾರೆ .

ಸದ್ಯ ದಿಲ್ಲೋಂಕಾ ಶೂಟರ್ 2.0 ಬಿಡುಗಡೆಯಾದಾಗಿನಿಂದ ಸಾಮಾಜಿಕ ಮಾಧ್ಯಮದಲ್ಲಿ ದಿಂಚಕ್ ಪೂಜಾವನ್ನು ಟ್ರೋಲ್ ಮಾಡಲಾಗುತ್ತಿದೆ ಆದ್ರೆ ಇದ್ಯಾವುದಕ್ಕೂ ಕ್ಯಾರೆ ಎನ್ನದೆ ದಿಂಚಕ್ ಮತ್ತದೇ ದಾಟಿಯಲ್ಲಿ ಹಾಡು ಹಾಡೋದ್ರಲ್ಲಿ ಬ್ಯುಸಿ ಆಗಿದ್ದಾರೆ .
ಕೆಟ್ಟದಾಗಿ ಹಾಡ್ತಾಳೆ ಅಂತ ಕಾಮೆಂಟ್ ಮಾಡಿದ್ರೇನಂತೆ ಲಕ್ಷಾಂತರ ಜನ ವೀಕ್ಷಣೆ ಮಾಡಿದ್ದಾರಲ್ಲ ಎನ್ನುವ ತೃಪ್ತಿ ದಿಂಚಕ್ ಪೂಜಾಳದ್ದಾಗಿರಬಹುದು ಅಂತಾರೆ ಇನ್ನೊಂದಷ್ಟು ಜನ.

 

 

Latest article