Wednesday, May 18, 2022

ಯೂಟ್ಯೂಬ್‌ನಲ್ಲಿ ಚಾರ್ಲಿ ಟಾರ್ಚರ್‌ ಟ್ರೆಂಡಿಂಗ್..!‌

Must read

ಸಿಂಪಲ್​ ಸ್ಟಾರ್ ರಕ್ಷಿತ್ ಶೆಟ್ಟಿ ಅಭಿನಯದ 777 ಚಾರ್ಲಿ ಒಂದಲ್ಲ ಒಂದು ವಿಚಾರವಾಗಿ ಸುದ್ದಿ ಮಾಡ್ತಾನೇ ಇದೆ. ರೀಸೆಂಟಾಗಿ ಚಿತ್ರದ ಟೀಸರ್​​​ನಿಂದ ಸೌಂಡ್ ಮಾಡಿದ್ದ 777 ಚಾರ್ಲಿ, ಇದೀಗ ಟಾರ್ಚರ್ ಸಾಂಗ್​ ರಿಲೀಸ್​ ಮಾಡಿದೆ. ಅಷ್ಟೇ ಸಿನಿಮಾ ರಿಲೀಸ್​ ಡೇಟನ್ನು ಅನೌನ್ಸ್​ ಮಾಡಿ ಫ್ಯಾನ್ಸ್​ಗೆ ಸರ್​ಪ್ರೈಸ್​ ಕೊಟ್ಟಿದ್ದಾರೆ.

ಚಾರ್ಲಿ 777 ಟೀಸರ್‌ನಿಂದಲೇ ಕರ್ನಾಟಕದ ಮನೆ ಮನೆಗೂ ಸೇರಿದ ಸಿನಿಮಾ. ಈ ಸಿನಿಮಾ ಟೀಸರ್‌ ನೋಡಿದ ಅಬ್ಬಾಬ್ಬಾ ಹೀಗೂ ಒಂದು ಸಿನಿಮಾ ಮಾಡಬಹುದು ಅಂತ ಮೂಗಿನ ಮೇಲೆ ಬೆರಳಿಟ್ಟುಕೊಂಡಿದ್ರು. ನಾಯಿಯನ್ನೇ ಪ್ರಧಾನ ಪಾತ್ರವನ್ನಾಗಿ ಮಾಡಿ. ನಾಯಕ ನಟನನ್ನೆ ಕೊನೆಯ ಹಲವು ಸೆಕೆಂಡ್‌ಗಳ ಕಾಲ ಮಾತ್ರ ತೋರಿಸಿ ಹೀಗೂ ಟೀಸರ್‌ ಮಾಡಬಹುದು ಅನ್ನೋದನ್ನ ಚಾರ್ಲಿ ಚಿತ್ರತಂಡ ತೋರಿಸಿತ್ತು. ನಾಯಿ ಮತ್ತು ಮನುಷ್ಯನ ನಡುವಿನ ಬಾಂಧವ್ಯವನ್ನ ಟೀಸರ್‌ನಲ್ಲಿ ತೋರಿಸಿತ್ತು. ಇದೀಗ ಚಾರ್ಲಿ 777 ಚಿತ್ರದ ಸಾಂಗ್‌ವೊಂದು ರಿಲೀಸ್‌ ಆಗಿದೆ. ಈ ಸಾಂಗ್‌ ಯೂಟ್ಯೂಬ್‌ನಲ್ಲಿ ಸಖತ್‌ ಟ್ರೆಂಡಿಂಗ್‌ನಲ್ಲಿದೆ.

ಚಾರ್ಲಿಯ ಟಾರ್ಚರ್‌ ಸಾಂಗ್‌ ರಿಲೀಸ್‌ ಆಗಿದೆ. ಈ ಸಾಂಗ್‌ ಚಾರ್ಲಿ ಚಿತ್ರದ ನಾಯಕ ಧರ್ಮನಿಗೆ ಸಖತ್‌ ಟಾರ್ಚರ್‌ ಕೊಡ್ತಿದೆ. ಚಾರ್ಲಿ ಟಾರ್ಚರ್‌ಗೆ ಧರ್ಮ ಸುಸ್ತಾಗಿ ಹೋಗಿದ್ದಾನೆ. ನಾಯಿಯ ಕಿಟಲೆ, ಕಿತಾಪತಿ, ಧರ್ಮ ಮತ್ತು ಚಾರ್ಲಿ ನಡುವಿನ ಕಿತ್ತಾಟ ಜನರನ್ನ ರಂಜಿಸುತ್ತಿದೆ. ಏನೇ ಮಾಡಿದ್ರೂ ನಾಯಿ ರಕ್ಷಿತ್‌ ಶೆಟ್ಟಿ ಬೆನ್ನು ಬಿಡುತ್ತಿಲ್ಲ. ಚಾರ್ಲಿಯ ಟಾರ್ಚರೇ ಸಾಂಗ್‌ ಹೈಲೆಟ್‌. ಟೀಸರ್‌ನಲ್ಲಿ ಚಾರ್ಲಿಯ ತುಂಟಾಟ ನೋಡಿದ್ದ ಜನ. ಈಗ ಟಾರ್ಚರ್‌ ನೋಡಿ ವಿಶಲ್‌ ಹೊಡೆಯುತ್ತಿದ್ದಾರೆ.

ಚಿತ್ರದ ಮೊದಲ ಸಾಂಗ್‌ನ ಜೊತೆಗೆ ಚಿತ್ರತಂಡ ಮತ್ತೊಂದು ಬ್ರೇಕಿಂಗ್‌ ನ್ಯೂಸ್‌ ನೀಡಿದೆ. ಚಿತ್ರದ ರಿಲೀಸ್‌ ಡೇಟ್‌ ಅನ್ನು ಅನೌನ್ಸ್​ ಮಾಡಿದೆ. ಡಿಸೆಂಬರ್‌ 31ಕ್ಕೆ ತೆರೆ ಮೇಲೆ ಬರ್ತಿದ್ದೆವೆ ಅಂತ ಚಾರ್ಲಿ ಟೀಮ್‌ ಘೋಷಣೆ ಮಾಡಿದೆ. ವಿಶೇಷ ಅಂದ್ರೆ ರಕ್ಷಿತ್‌ ಶೆಟ್ಟಿಗೆ ಸಿನಿ ಕರಿಯರ್‌ಗೆ ಬಹುದೊಡ್ಡ ಬ್ರೇಕ್‌ ಕೊಟ್ಟ ಕಿರಿಕ್‌ ಪಾರ್ಟಿಗೂ ಇದೇ ಡೇಟ್‌ಗೆ ರಿಲೀಸ್‌ ಆಗಿತ್ತು. ಇದೀಗ ಮತ್ತೊಮ್ಮೆ ಅದೆ ದಿನದಂದು ರಕ್ಷಿತ್‌ ಶೆಟ್ಟಿ ತಮ್ಮ ಅದೃಷ್ಟ ಪರೀಕ್ಷೆಗೆ ಮುಂದಾಗುತ್ತಿದ್ದಾರೆ.

Also read:  ಥಿಯೇಟರ್​ನಲ್ಲಿ ದಾರಿ ತಪ್ಪಿದ ಮಗ

Latest article