ರಾಜ್ಯದಲ್ಲಿ ಪದೇ ಪದೇ ಕಾಡಾನೆಗಳ ದಾಳಿಯಿಂದ ಜೀವ ಹಾನಿ, ಬೆಳೆ ಹಾನಿ ಸುದ್ದಿಗಳನ್ನು ಕೇಳುತ್ತಲ್ಲೇ ಇರುತ್ತೇವೆ. ಜೊತೆಗೆ ಅರಣ್ಯಾಧಿಕಾರಿಗಳ ಬೇಜವಾಬ್ದಾರಿಗೆ ಫಸಲು ಕಳೆದುಕೊಂಡ ರೈತರು ಸರ್ಕಾರ ಹಾಗೂ ಇಲಾಖೆಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸೋದು ನೋಡುತ್ತಲೇ ಇರುತ್ತೇವೆ. ಆದ್ರೆ, ಮೈಸೂರಿನ ಹೆಚ್.ಡಿ.ಕೋಟೆ ತಾಲೂಕಿನ ಬೂದನೂರು ಗ್ರಾಮದಲ್ಲಿ ಕಾಡಾನೆ ಓಡಿಸಲು ಬಂದ ಅರಣ್ಯ ಇಲಾಖೆ ಸಿಬ್ಬಂದಿ ಮೇಲೆಯೇ ಗ್ರಾಮಸ್ಥರು ಹಲ್ಲೆ ಮಾಡಿದ್ದಾರೆ. ನಿನ್ನೆ ಬೂದನೂರು ಗ್ರಾಮಕ್ಕೆ ಒಂಟಿ ಸಲಗವೊಂದು ಲಗ್ಗೆ ಇಟ್ಟಿತ್ತು. ಸಲಗದ ದಾಂಧಲೆಯಿಂದ ಗ್ರಾಮಸ್ಥರ ಜಮೀನಿಗೆ ಹಾನಿಯಾಗಿತ್ತು. ಇದರಿಂದ ಮೊದಲೇ ಸಿಟ್ಟಿಗೆದಿದ್ದ ಗಾಮಸ್ಥರು ತಡವಾಗಿ ಸ್ಥಳಕ್ಕೆ ಬಂದ ಅರಣ್ಯಾ ಇಲಾಖೆ ಸಿಬ್ಬಂದಿ ಮೇಲೆ ಕೋಪಿತರಾಗಿದ್ದಾರೆ. ಅಲ್ಲದೇ ಸಿಬ್ಬಂದಿಯ ಕೈಯಲ್ಲಿದ್ದ ಬಂದೂಕು ಕಸಿದುಕೊಂಡು ಥಳಿಸದ್ದಾರೆ. ಸದ್ಯ ಹಲ್ಲೆಗೊಳಗಾದ ಮೇಟಿಕುಪ್ಪೆ ಅರಣ್ಯವಲಯ ಸಿಬ್ಬಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಚೇತರಿಸಿಕೊಳ್ಳುತ್ತಿದ್ದಾರೆ