ಹಾಸ್ಯ ನಟ ರಾಜು ತಾಳಿಕೋಟೆ ವಿರುದ್ಧ ಹಲ್ಲೆ ಆರೋಪ..!

ಹಾಸ್ಯ ನಟ ರಾಜು ತಾಳಿಕೋಟೆ ವಿರುದ್ಧ ಹಲ್ಲೆ ಆರೋಪ..!

ವಿಜಯಪುರ: ಸ್ಯಾಂಡಲ್​ವುಡ್​ ಹಾಸ್ಯ ನಟ ರಾಜು ತಾಳಿಕೋಟೆ ವಿರುದ್ಧ ಅಳಿಯನ ಪತ್ನಿಯ ಮೇಲೆ ಹಲ್ಲೆ ನಡೆಸಿರುವ ಆರೋಪ ಕೇಳಿಬಂದಿದೆ.

ಅಳಿಯನ ಕೌಟುಂಬಿಕ ಕಲಹದಲ್ಲಿ ಭಾಗಿಯಾದ ರಾಜು ತಾಳಿಕೋಟೆ, ಅಳಿಯ ಫಯಾಜ್ ಕರಜಗಿಯ ಪರವಾಗಿ ನಿಂತು, ಸನಾ ಕರಜಗಿ ಎಂಬ ಮಹಿಳೆ ಮೇಲೆ ಹಲ್ಲೆ ನಡೆಸಿದಲ್ಲದೇ, ಬಲವಂತವಾಗಿ ವಿಷ ಕುಡಿಸಿರುವ ಆರೋಪ ಕೇಳಿಬಂದಿದೆ.

ಸನಾ ಕರಜಗಿ ವಿಜಯಪುರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು, ಐಸಿಯು ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಘಟನೆ ಸಂಬಂಧ ರಾಜು ತಾಳಿಕೋಟಿ, ಅವರ ಪತ್ನಿ ಪ್ರೇಮಾ ತಾಳಿಕೋಟಿ ಹಾಗೂ ಸನಾ ಪತಿ ಫಯಾಜ್ ಕರಜಗಿ, ಸನಾ ಭಾವ ಪಿಂಟು ಕರಜಗಿ ಸೇರಿದಂತೆ ಇತರರ ವಿರುದ್ಧ ಹಲ್ಲೆಗೊಳಗಾದ ಸನಾ ತಾಯಿ ಫಾತಿಮಾ ಶಿರಹಟ್ಟಿ ಅವರು ದೂರು ದಾಖಲಿಸಿದ್ದಾರೆ.

Related Stories

No stories found.
TV 5 Kannada
tv5kannada.com