ಶಿರಾ ಉಪಚುನಾವಣೆ ನಾನು ಬಿಜೆಪಿ ಟಿಕೆಟ್​ ಆಕಾಂಕ್ಷಿ - ಶಾಸಕಿ ಪೂರ್ಣಿಮಾ ಪತಿ

ಹಿರಿಯೂರಿನಲ್ಲಿ ಬಿಜೆಪಿ ಬಾವುಟ ಹಾರಿಸಿದಂತೆ ಶಿರಾದಲ್ಲಿ ಬಾವುಟ ಹಾರಿಸುತ್ತೇವೆ - ಗೊಲ್ಲ ಸಮುದಾಯದ ರಾಜ್ಯಾಧ್ಯಕ್ಷ ಶ್ರೀನಿವಾಸ್.ಡಿ.ಟಿ
ಶಿರಾ ಉಪಚುನಾವಣೆ ನಾನು ಬಿಜೆಪಿ ಟಿಕೆಟ್​ ಆಕಾಂಕ್ಷಿ - ಶಾಸಕಿ ಪೂರ್ಣಿಮಾ ಪತಿ

ತುಮಕೂರು: ಶಿರಾ ಉಪಚುನಾವಣೆ ನಾನು ಬಿಜೆಪಿ ಟಿಕೆಟ್​ ಆಕಾಂಕ್ಷಿ ಎಂದು ಹಿರಿಯೂರು ಶಾಸಕಿ ಪೂರ್ಣಿಮಾ ಪತಿ ಡಿ.ಟಿ ಶ್ರೀನಿವಾಸ್ ಅವರು ಬುಧವಾರ ಹೇಳಿದ್ದಾರೆ.

ತುಮಕೂರು ಜಿಲ್ಲೆ ಶಿರಾ ತಾಲೂಕಿನ ಮುದ್ದೇನಹಳ್ಳಿ ಗ್ರಾಮದಲ್ಲಿ ಗೊಲ್ಲ ಸಮುದಾಯದ ದೇವ ಚಿತ್ರಲಿಂಗೇಶ್ವರನಿಗೆ ಪೂಜೆ ಸಲ್ಲಿಸಿ ಬಳಿಕ ಮಾಧ್ಯಮದ ಜೊತೆ ಮಾತನಾಡಿದ ಅವರು, ಪಾರ್ಲಿಮೆಂಟ್ ಚುನಾವಣೆಯಲ್ಲಿ ಬಸವರಾಜು ಅವರಿಗೆ ನಮ್ಮ ಸಮಾಜ ಆಶೀರ್ವಾದ ಮಾಡಿದೆ. ಪೂರ್ಣಿಮಾ ಅವರು ಗೆದ್ದ ಮೇಲೆ ಎಂಎಲ್​ಸಿಗೆ ನನಗೆ ಅವಕಾಶ ಮಾಡಿಕೊಡಲು ಹೇಳಿದ್ವಿ ಎಂದರು.

ಇನ್ನು ಶಿರಾ ಕುಚಿಂಟಿಗ ಸಮಾಜದ ಚಿದಾನಂದಗೌಡ ಅವರಿಗೆ ಅವಕಾಶ ಮಾಡಿಕೊಟ್ಟಿದೆ. ಹಿಂದುಳಿದ ವರ್ಗಗಳಿಗೆ ಶಕ್ತಿ ನೀಡೋ ನಿಟ್ಟಿನಲ್ಲಿ ನನಗೆ ಅವಕಾಶ ಮಾಡಿಕೊಡಲಿ. ಹಿರಿಯೂರಿನಲ್ಲಿ ಬಿಜೆಪಿ ಬಾವುಟ ಹಾರಿಸಿದಂತೆ ಶಿರಾದಲ್ಲಿ ಬಾವುಟ ಹಾರಿಸುತ್ತೇವೆ. ಪಕ್ಷದ ನಿರ್ಧಾರಕ್ಕೆ ಬದ್ಧವಾಗಿದ್ದು, ಟಿಕೆಟ್​ ಆಕಾಂಕ್ಷಿಗಳಲ್ಲಿ ನಾನು ಒಬ್ಬನಾಗಿದ್ದೇನೆ ಎಂದು ಅವರು ತಿಳಿಸಿದರು.

ಸದ್ಯ ಅಹಿಂದ ಅಭ್ಯರ್ಥಿ ಬೇಕು ಎಂದು ಈ ಭಾಗದ ಜನತೆಯ ಆಸೆಯಾಗಿದೆ. ಅವರ ಆಸೆ ಈಡೇರಬೇಕಾದ್ರೆ ಸೀಟ್ ಘೋಷಣೆಯಾಗಬೇಕು. ನನಗೆ ಆಸೆ ಇದೆ ವಿಶ್ವಾಸ ಇದೆ ಯಡಿಯೂರಪ್ಪನವರು ಅವಕಾಶ ಮಾಡಿಕೊಡ್ತಾರೆ. ಅವಕಾಶ ಕೊಟ್ರೆ ಹಿರಿಯೂರು ಫಲಿತಾಂಶ ಮರುಕಳಿಸುತ್ತೇವೆ ಎಂದು ಗೊಲ್ಲ ಸಮುದಾಯದ ರಾಜ್ಯಾಧ್ಯಕ್ಷ ಶ್ರೀನಿವಾಸ್.ಡಿ.ಟಿ. ಮಾತನಾಡಿದ್ದಾರೆ.

Related Stories

No stories found.
TV 5 Kannada
tv5kannada.com