ಚುನಾವಣೆ ದಿನ ನೋಡಿ, ಕಾಂಗ್ರೆಸ್-ಜೆಡಿಎಸ್​ನವರು ಓಡಿಹೋಗ್ತಾರೆ - ಬಿ.ವೈ ವಿಜಯೇಂದ್ರ

ಅನುಮಾನವೇ ಬೇಡ. ಕಾಂಗ್ರೆಸ್​ ನಾಯಕರು ಏನೇ ಮಾಡಲಿ ಅಭ್ಯಂತರವಿಲ್ಲ, ಕ್ಷೇತ್ರದ ಜನ ನಮ್ಮನ್ನೇ ಕೈಹಿಡಿಯುತ್ತಾರೆಂಬ ವಿಶ್ವಾಸವಿದೆ.
ಚುನಾವಣೆ ದಿನ ನೋಡಿ, ಕಾಂಗ್ರೆಸ್-ಜೆಡಿಎಸ್​ನವರು ಓಡಿಹೋಗ್ತಾರೆ - ಬಿ.ವೈ ವಿಜಯೇಂದ್ರ

ತುಮಕೂರು: ಶಿರಾದಲ್ಲಿ ನಮ್ಮ ಅಭ್ಯರ್ಥಿ ಗೆದ್ದೇ ಗೆಲ್ತಾರೆ, ನೆಲೆಯಿಲ್ಲದ ಜಾಗದಲ್ಲಿ ನೆಲೆ ಅರಳಿಸಿದ್ದೇವೆ ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಮಂಗಳವಾರ ಹೇಳಿದ್ದಾರೆ.

ಶಿರಾ ಉಪಚುನಾವಣೆ ಹಿನ್ನೆಲೆ ಮಾತನಾಡಿದ ಅವರು, ಕಾಂಗ್ರೆಸ್​ನವರು ಗೆದ್ದೇ ಬಿಟ್ವಿ ಅಂದುಕೊಂಡಿದರು. ಆದರೆ, ಈಗ ಆಗುತ್ತಿರೋದೇನು(?) ಕೆ.ಆರ್.ಪೇಟೆ ಚುನಾವಣೆ ಬೇರೆ ಇದು ಬೇರೆ. ಚುನಾವಣೆ ದಿನ ನೋಡಿ, ಕಾಂಗ್ರೆಸ್-ಜೆಡಿಎಸ್​ನವರು ಓಡಿಹೋಗ್ತಾರೆ ಎಂದರು.

ಇನ್ನು ನಾವು ಹಣಬಲ, ತೋಳಬಲ ಇಟ್ಟುಕೊಂಡು ಹೊರಟಿಲ್ಲ, ಕ್ಷೇತ್ರದ ಸಮಗ್ರ ಅಭಿವೃದ್ಧಿ ಬಗ್ಗೆ ಗಮನಹರಿಸುತ್ತೇವೆ. ಸೋತರೇ ವಿಜಯೇಂದ್ರ ಮರ್ಯಾದೆ ಹೋಗುತ್ತಾ ಎಂಬ ಪ್ರಶ್ನೆ. ಅಂತಹ ಸ್ಥಿತಿ ಉದ್ಭವವಾದರೆ ತಾನೇ(?) ನಮ್ಮ ಅಭ್ಯರ್ಥಿಯೇ ಗೆಲ್ತಾರೆ, ಅನುಮಾನವೇ ಬೇಡ. ಕಾಂಗ್ರೆಸ್​ ನಾಯಕರು ಏನೇ ಮಾಡಲಿ ಅಭ್ಯಂತರವಿಲ್ಲ, ಕ್ಷೇತ್ರದ ಜನ ನಮ್ಮನ್ನೇ ಕೈಹಿಡಿಯುತ್ತಾರೆಂಬ ವಿಶ್ವಾಸವಿದೆ. ಯಾವುದೇ ಅನುಕಂಪ, ಸ್ಟಾರ್ಟಜಿ ವರ್ಕ್ ಆಗಲ್ಲ ಎಂದು ಬಿ.ವೈ.ವಿಜಯೇಂದ್ರ ಅವರು ಮಾತನಾಡಿದ್ದಾರೆ.

Related Stories

No stories found.
TV 5 Kannada
tv5kannada.com