ಯಾವುದೇ ಕಾರಣಕ್ಕೂ ಶಾಲೆ-ಕಾಲೇಜು ತೆಗೆಯಬೇಡಿ - ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ

ಆತುರದ ನಿರ್ಧಾರ ತೆಗೆದುಕೊಳ್ಳಬೇಡಿ. ಒಂದು ವರ್ಷ ಶಾಲೆ ಮುಂದಕ್ಕೆ ಹಾಕಿದ್ರೆ ಆಕಾಶ ಬೀಳಲ್ಲ
ಯಾವುದೇ ಕಾರಣಕ್ಕೂ ಶಾಲೆ-ಕಾಲೇಜು ತೆಗೆಯಬೇಡಿ - ಪ್ರತಿಪಕ್ಷ ನಾಯಕ  ಸಿದ್ದರಾಮಯ್ಯ

ತುಮಕೂರು: ಜನರ ಜೀವ ಮುಖ್ಯ. ಒಂದು ವರ್ಷ ಎಲ್ಲಾರಿಗೂ ಪಾಸ್ ಕೊಟ್ಟರೆ ಪ್ರಪಂಚ ಪ್ರಳಯ ಆಗಲ್ಲ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಶುಕ್ರವಾರ ಹೇಳಿದ್ದಾರೆ.

ನವೆಂಬರ್​ 17ರಂದು ಕಾಲೇಜು ಪ್ರಾರಂಭ ವಿಚಾರಕ್ಕೆ ಸಂಬಂಧಿಸಿದಂತೆ ತುಮಕೂರು ಜಿಲ್ಲೆಯ ಶಿರಾದಲ್ಲಿ ಮಾಧ್ಯಮದ ಜೊತೆ ಮಾತನಾಡಿದ ಅವರು, ಅಶ್ವಥ್ ನಾರಾಯಣ್, ಸುರೇಶ್​ ಕುಮಾರ್, ಯಡಿಯೂರಪ್ಪಗೆ ಹೇಳುತ್ತೇನೆ. ಆತುರದ ನಿರ್ಧಾರ ತೆಗೆದುಕೊಳ್ಳಬೇಡಿ. ಒಂದು ವರ್ಷ ಶಾಲೆ ಮುಂದಕ್ಕೆ ಹಾಕಿದ್ರೆ ಆಕಾಶ ಬೀಳಲ್ಲ. ಯಾವುದೇ ಕಾರಣಕ್ಕೂ ಶಾಲೆ ಕಾಲೇಜು ತೆಗೆಯಬೇಡಿ. ಇದು ಮೂರ್ಖತನದ ನಿರ್ಧಾರ. ಜನರ ಜೀವನದ ಜೊತೆಗೆ ಚೆಲ್ಲಾಟವಾಡುತ್ತಿದ್ದಾರೆ ಎಂದು ಕಾಲೇಜು ಪ್ರಾರಂಭವಿಸುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ನಾನು ಮುಖ್ಯಮಂತ್ರಿ ಆಗುವುದು ಬಿಡುವುದು ವಿಷಯ ಕೇಂದ್ರ ಹೈಕಮಾಂಡ್​ಗೆ ಬಿಟ್ಟಿದ್ದು. ಜಮೀರ್​ದು ಅವರ ವೈಯಕ್ತಿಕ ಅಭಿಪ್ರಾಯ, ಅಭಿಮಾನದಿಂದ ಎಲ್ಲಾರು ಹೇಳುತ್ತಾರೆ. ಅದು ಪಕ್ಷದ ನಿರ್ಧಾರವಲ್ಲ, ಡಿಸಿಎಂ ಮಾಡಿದ್ದು ಅವರಲ್ಲ, ಆಗಲೇ ಸಿಎಂ ಆಗಬೇಕಿತ್ತು. ಇವರೇನು ಮಾಡಿದರು. ನಾನು 1983 ನಾನು ಪಕ್ಷೇತ್ರರವಾಗಿ ಗೆದ್ದಿದ್ದು ಆಗ ದೇವೇಗೌಡರು ಬೆಂಬಲಿಸಿದ್ರಾ(?) ವಿಶ್ವನಾಥ್ ಯಕಶ್ಚಿತ್ ರಾಜಕಾರಣಿ, ಅವರಿಗೆ ರಾಜಕೀಯ ಪ್ರೌಢಮೆ ಬಂದಿಲ್ಲ ಎಂದು ಕಾಂಗ್ರೆಸ್​ ಮುಂದಿನ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಸ್ಪಷ್ಟನೆ ನೀಡಿದ್ದಾರೆ.

ಕಾಂಗ್ರೆಸ್ ಮನೆಯೊಂದು ಮೂರು ಬಾಗಿಲು ಎಂಬ ಲಕ್ಷ್ಮಣ ಸವದಿ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಯಡಿಯೂರಪ್ಪನ್ನು ಕೇಳಗಿಳಿಸಲು ಯಾರು ಪ್ರಯತ್ನ ಮಾಡಿದ್ದಾರೆ ಅಂತ ಸವದಿ ಕೇಳಿ. ಬಿಎಸ್​ವೈನವರನ್ನ ಕೆಳಗಿಳಿಸುವರಲ್ಲಿ ಸವದಿಯೂ ಒಬ್ಬ ಎಂದು ತಿರುಗೇಟು ನೀಡಿದ್ದಾರೆ.

Related Stories

No stories found.
TV 5 Kannada
tv5kannada.com