ವಾರೆಂಟ್​ ಜಾರಿ ಮಾಡಲು ಹೋದ ಪೊಲೀಸ್​ ಮೇಲೆ ಹಲ್ಲೆ ನಡೆಸಿದ ಆರೋಪಿ ನಂತರ ಮಾಡಿದ್ದೇನು ಗೊತ್ತಾ..?

ವಾರೆಂಟ್​ ಜಾರಿ ಮಾಡಲು ಹೋದ ಪೊಲೀಸ್​ ಮೇಲೆ ಹಲ್ಲೆ
ವಾರೆಂಟ್​ ಜಾರಿ ಮಾಡಲು ಹೋದ ಪೊಲೀಸ್​ ಮೇಲೆ ಹಲ್ಲೆ ನಡೆಸಿದ ಆರೋಪಿ ನಂತರ ಮಾಡಿದ್ದೇನು ಗೊತ್ತಾ..?
TV5

ಶಿವಮೊಗ್ಗ: ವಾರೆಂಟ್​ ಜಾರಿ ಮಾಡಲು ಹೋದ ಪೊಲೀಸ್​ ಸಿಬ್ಬಂದಿಯ ಮೇಲೆ ಆರೋಪಿಯೊಬ್ಬ ಹಲ್ಲೆ ಮಾಡಿರುವ ಘಟನೆ ಶುಭಮಂಗಳ ಸಮುದಾಯ ಭವನದ ಸಮೀಪದಲ್ಲಿ ನಡೆದಿದೆ.

ರೂಪೇಶ್ ಎಂಬುವಾತ ವಿನೋಭಾನಗರ ಠಾಣೆಯ ಸಿಬ್ಬಂದಿ ಮಂಜುನಾಥ್ ಎನ್ನುವವರ ಮೇಲೆ ಹಲ್ಲೆ ನಡೆಸಿದ್ದಾನೆ.

ಮಂಜುನಾಥ್​ ಇಂದು ಬೆಳಗ್ಗೆ ರೂಪೇಶ್​ ಮೇಲೆ ಐಪಿಸಿ ಸೆಕ್ಷನ್​ 397 ಮೇಲೆ ವಾರೆಂಟ್ ಜಾರಿ ಮಾಡಲು ಹೋಗಿದ್ದರು. ಈ ವೇಳೆ ರೂಪೇಶ್ ಮಂಜುನಾಥ್​ರನ್ನು ಜೋರಾಗಿ ತಳ್ಳಿದ್ದು, ಮಂಜುನಾಥ್​ ಪಕ್ಕದ ಚರಂಡಿಗೆ ಬಿದ್ದು ಗಂಭೀರ ಗಾಯಗೊಂಡಿದ್ದಾರೆ. ಈ ವೇಳೆ ರೂಪೇಶ್​ ಗ್ಲಾಸ್​ ನುಂಗಲು ಯತ್ನಿಸಿದ್ದಾನೆ ಎನ್ನಲಾಗಿದೆ.

ಸದ್ಯ ಪೊಲೀಸ್​ ಸಿಬ್ಬಂದಿ ಹಾಗೂ ಆರೋಪಿ ಇಬ್ಬರನ್ನೂ ಶಿವಮೊಗ್ಗದ ಮೆಗ್ಗಾನ್​ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ಸಂಬಂಧ ಶಿವಮೊಗ್ಗದ ವಿನೋಭಾನಗರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Stories

No stories found.
TV 5 Kannada
tv5kannada.com