ಬೆರಣಿ ತಟ್ಟಿದನ್ನು ಪ್ರಶ್ನಿಸಿದ ಮಹಿಳೆ ಮೇಲೆ ಗಂಭೀರ ಹಲ್ಲೆ..!

ಬೆರಣಿ ತಟ್ಟಿದನ್ನು ಪ್ರಶ್ನಿಸಿದ ಮಹಿಳೆ ಮೇಲೆ ಗಂಭೀರ ಹಲ್ಲೆ..!

ಹಾಸನ: ಕ್ಷುಲ್ಲಕ ಕಾರಣಕ್ಕೆ ಮಹಿಳೆ ಮೇಲೆ ಪಕ್ಕದ ಮನೆಯವರು ಗಂಭೀರವಾಗಿ ಹಲ್ಲೆ ಮಾಡಿರುವ ಘಟನೆ ಜಿಲ್ಲೆಯ ಅರಕಲಗೂಡು ತಾಲ್ಲೂಕಿನ ಗೊರವನಹಳ್ಳಿ‌ ಗ್ರಾಮದಲ್ಲಿ ನಡೆದಿದೆ. ವಿಶಾಲಾಕ್ಷಿ (37) ಹಲ್ಲೆಗೊಳಗಾದ ಮಹಿಳೆ.

ಮನೆಯ ಹಿಂಭಾಗದಲ್ಲಿ ಬೆರಣಿ ತಟ್ಟಿ ಗಲೀಜು ಮಾಡುತ್ತಿದ್ದನ್ನು ಪ್ರಶ್ನಿಸಿದ ವಿಶಾಲಾಕ್ಷಿ ಅವರ ಮೇಲೆ ವೆಂಕಟೇಶ್, ಮಂಜ, ಜ್ಯೋತಿ, ಕರಿಗೌಡ ಹಾಗೂ ಪುಟ್ಟಮ್ಮ ಎನ್ನುವವರು ಕಲ್ಲು ಹಾಗೂ ಮಚ್ಚಿನಿಂದ‌ ಹಲ್ಲೆ ನಡೆಸಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ.

ಘಟನೆಯಲ್ಲಿ ವಿಶಾಲಾಕ್ಷಿ ಅವರ ತಲೆಗೆ ಗಂಭೀರ ಗಾಯವಾಗಿದ್ದು, ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ಸಂಬಂಧ ಅರಕಲಗೂಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Stories

No stories found.
TV 5 Kannada
tv5kannada.com