ಆಸ್ಕರ್ ಫರ್ನಾಂಡಿಸ್​ರ ಆರೋಗ್ಯ ವಿಚಾರಿಸಿದ ಡಾ.ವೀರೇಂದ್ರ ಹೆಗ್ಗಡೆ

ಯೆನೆಪೋಯ ಆಸ್ಪತ್ರೆಗೆ ಭೇಟಿ ನೀಡಿ ಆಸ್ಕರ್​ ಫರ್ನಾಂಡಿಸ್​ರ ಆರೋಗ್ಯ ಸ್ಥಿತಿಯ ಮಾಹಿತಿ ಪಡೆದ ವೀರೇಂದ್ರ ಹೆಗ್ಗಡೆ
ಆಸ್ಕರ್ ಫರ್ನಾಂಡಿಸ್​ರ ಆರೋಗ್ಯ ವಿಚಾರಿಸಿದ ಡಾ.ವೀರೇಂದ್ರ ಹೆಗ್ಗಡೆ

ಮಂಗಳೂರು: ಕಾಂಗ್ರೆಸ್ ಹಿರಿಯ ಮುಖಂಡ ಆಸ್ಕರ್ ಫರ್ನಾಂಡಿಸ್ ಆಸ್ಪತ್ರೆಗೆ ದಾಖಲಾಗಿರುವ ಹಿನ್ನೆಲೆಯಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರು ಯೆನೆಪೋಯ ಆಸ್ಪತ್ರೆಗೆ ಭೇಟಿ ನೀಡಿದರು.

ಧರ್ಮಸ್ಥಳದಿಂದ ಮಂಜುನಾಥ ಸ್ವಾಮಿ ಪ್ರಸಾದ ತೆಗೆದುಕೊಂಡು ಬಂದಿದ್ದ ಅವರು ಆಸ್ಕರ್ ಅವರನ್ನು ಕಂಡು, ವೈದ್ಯರ ಬಳಿಕ ಅವರ ಆರೋಗ್ಯ ವಿಚಾರಿಸಿ ಪ್ರಸಾದ ಹಾಕಿದರು. ಬಳಿಕ ಆಸ್ಕರ್​ ಅವರ ಕುಟುಂಬದವರ ಜೊತೆ ಮಾತನಾಡಿ ಧೈರ್ಯ ತುಂಬಿದರು.

ಕೆಲ ಕಾಲ ವೈದ್ಯರ ಜೊತೆ ಮಾತುಕತೆ ನಡೆಸಿ ತೆರಳಿದ ವೀರೇಂದ್ರ ಹೆಗ್ಗಡೆ ಅವರು ಆಸ್ಕರ್​ ಅವರ ಆರೋಗ್ಯ ಸ್ಥಿತಿಯ ಸಂಪೂರ್ಣ ಮಾಹಿತಿ ಪಡೆದರು.

Related Stories

No stories found.
TV 5 Kannada
tv5kannada.com