ಗಾಯಾಳು ಮಹಿಳೆ ಹೊತ್ತು ತುಂಬಿದ ಹೊಳೆ ದಾಟಿದ ಯುವಕರು

ಮರಸಂಕಕ್ಕೆ ಸಂಪರ್ಕ ಸೇತುವೆ ನಿರ್ಮಿಸಿ ಎಂದು ಹಲವು ವರ್ಷಗಳಿಂದ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಎನ್ನುವುದು ಸ್ಥಳೀಯರ ಆರೋಪ
ಗಾಯಾಳು ಮಹಿಳೆ ಹೊತ್ತು ತುಂಬಿದ ಹೊಳೆ ದಾಟಿದ ಯುವಕರು

ದಕ್ಷಿಣ ಕನ್ನಡ : ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲು ಯುವಕರು ಅಪಾಯ ಲೆಕ್ಕಿಸದೇ ತುಂಬಿದ ನದಿ ದಾಟಿದ ಘಟನೆ ಜಿಲ್ಲೆಯ ಸುಳ್ಯ ತಾಲೂಕಿನ ಜಾಲ್ಸೂರು ಗ್ರಾಮದ ಮರಸಂಕ ಎಂಬಲ್ಲಿ ನಡೆದಿದೆ.

ಜಾಲ್ಸೂರು ಗ್ರಾಮದ ಮಹಿಳೆ ಮನೆಯಲ್ಲೇ ಬಿದ್ದು ಕಾಲು ಮುರಿದುಕೊಂಡಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯ ಬೇಕಾದ ಪರಿಸ್ಥಿತಿ ಎದುರಾಗಿದೆ. ಹೀಗಾಗಿ ಹೊಳೆಗೆ ಸೇತುವೆಯಿಲ್ಲದ ಕಾರಣ ಅಪಾಯವನ್ನೂ ಲೆಕ್ಕಿಸದೇ ಯುವಕರು ಮಹಿಳೆಯನ್ನು ಹೊತ್ತು, ಸುಮಾರು ಅರ್ಧ ಕಿಲೋ ಮೀಟರ್​ ತುಂಬಿದ ನದಿ ದಾಟಿದ್ದಾರೆ.

ಮರಸಂಕ ಎಂಬಲ್ಲಿ ಸುಮಾರು 9 ಮನೆಗಳಿದ್ದು, ಸುಮಾರು 50 ಜನ ವಾಸಿಸುತ್ತಿದ್ದಾರೆ. ಆದರೆ ಈ ಪ್ರದೇಶದಲ್ಲಿ ಯಾವುದೇ ಸೇತುವೆ ವ್ಯವಸ್ಥೆ ಇಲ್ಲ. ಹಲವು ವರ್ಷಗಳಿಂದ ಅರ್ಧ ಕಿಲೋ ಮೀಟರ್​ ಹೊಳೆ ದಾಟಿ ನಡೆದುಕೊಂಡೇ ಹೋಗಬೇಕಾದ ಪರಿಸ್ಥಿತಿ ಇದೆ. ಸೇತುವೆ ನಿರ್ಮಿಸಿ ಅಂತ ಹಲವು ವರ್ಷಗಳಿಂದ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಎನ್ನುವುದು ಸ್ಥಳೀಯರ ಆರೋಪವಾಗಿದೆ.

ಇನ್ನು ನಿನ್ನೆಯಿಂದ ನಿರಂತರ ಮಳೆಯಿಂದ ಮರಸಂಕದ ಬಳಿ ಇರುವ ಕಿರು ನದು ಉಕ್ಕಿ ಹರಿಯುತ್ತಿದೆ. ಈ ಪ್ರವಾಹ ಪರಿಸ್ಥಿತಿಯಲ್ಲೇ ಮಹಿಳೆಯನ್ನು ಮಹಿಳೆಯನ್ನ ಆಸ್ಪತ್ರೆ ‌ಸೇರಿಸಲು ಹೊಳೆ ದಾಟಿಸೋ ವಿಡಿಯೋ ವೈರಲ್ ಆಗಿದೆ.

Related Stories

No stories found.
TV 5 Kannada
tv5kannada.com