ಮಂಗಳೂರಿನಲ್ಲಿ ನಿಫಾ ವೈರಸ್​ ಲಕ್ಷಣ ಪತ್ತೆ..!

ರೋಗಿಯ ಸ್ಯಾಂಪಲ್ ಪಡೆದು ಬೆಂಗಳೂರಿಗೆ ರವಾನಿಸಿದ ಜಿಲ್ಲಾ ಆರೋಗ್ಯ ಇಲಾಖೆ
ಮಂಗಳೂರಿನಲ್ಲಿ ನಿಫಾ ವೈರಸ್​ ಲಕ್ಷಣ ಪತ್ತೆ..!

ದಕ್ಷಿಣ ಕನ್ನಡ: ಮಂಗಳೂರು ಆಸ್ಪತ್ರೆಗೆ ದಾಖಲಾದ ರೋಗಿಯಲ್ಲಿ ನಿಫಾ ವೈರಸ್ ಲಕ್ಷಣ ಪತ್ತೆಯಾಗಿದ್ದು, ರೋಗಿಯ ಸ್ಯಾಂಪಲ್​ನನ್ನು ಜಿಲ್ಲೆಯ ಆರೋಗ್ಯ ಇಲಾಖೆ ಪರೀಕ್ಷೆಗೆ ರವಾನಿಸಿದೆ.

ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಕಾರವಾರ ಮೂಲದ ಯುವಕನಲ್ಲಿ ಜ್ವರ ಸೇರಿದಂತೆ ನಿಫಾ ವೈರಸ್​ ಲಕ್ಷಣ ಪತ್ತೆಯಾಗಿದೆ. ಗೋವಾದ ಲ್ಯಾಬ್ ಒಂದರಲ್ಲಿ ಮೈಕ್ರೋಬಯೋಲಾಜಿಸ್ಟ್ ಆಗಿರುವ ಯುವಕ ತನಗೆ ನಿಫಾದ ಆತಂಕವಿದೆ ಎಂದು ಹೇಳಿ ಪರೀಕ್ಷೆಗೆ ಮನವಿ ಮಾಡಿದ್ದಾನೆ.

ನೆರೆಯ ರಾಜ್ಯ ಕೇರಳದಲ್ಲಿ ಈಗಾಗಲೇ ನಿಫಾ ವೈರಸ್​ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲೆಯ ಆರೋಗ್ಯ ಇಲಾಖೆ ರೋಗಿಯ ಸ್ಯಾಂಪಲ್ ಪಡೆದು ಬೆಂಗಳೂರಿಗೆ ರವಾನಿಸಿದೆ. ಸದ್ಯ ಟೆಸ್ಟ್ ರಿಪೋರ್ಟ್​ಗಾಗಿ ವೈದ್ಯರು ಕಾಯುತ್ತಿದ್ದಾರೆ.

Related Stories

No stories found.
TV 5 Kannada
tv5kannada.com