ದಕ್ಷಿಣಕನ್ನಡ ಜಿಲ್ಲೆಯಲ್ಲಿ ಧಾರ್ಮಿಕ ಕಟ್ಟಡಗಳ ತೆರವಿಗೆ ಪಟ್ಟಿ ಸಿದ್ಧ...!

ದಕ್ಷಿಣಕನ್ನಡ ಜಿಲ್ಲೆಯಲ್ಲಿ ಧಾರ್ಮಿಕ ಕಟ್ಟಡಗಳ ತೆರವಿಗೆ ಪಟ್ಟಿ ಸಿದ್ಧ...!

ಮಂಗಳೂರು: ದಕ್ಷಿಣಕನ್ನಡ ಜಿಲ್ಲೆಯಲ್ಲೂ ಧಾರ್ಮಿಕ ಕಟ್ಟಡಗಳ ತೆರವಿಗೆ ಪಟ್ಟಿ ಸಿದ್ಧವಾಗಿದೆ. 2009ರ ಹಿಂದಿನ ಅನಧಿಕೃತ ಕಟ್ಟಡಗಳ ಮಾಹಿತಿ ಪ್ರಕಾರ, ಜಿಲ್ಲೆಯಲ್ಲಿ ಒಟ್ಟು 902 ಅನಧಿಕೃತ ಧಾರ್ಮಿಕ ಕಟ್ಟಡಗಳಿವೆ.

ಇದರಲ್ಲಿ 667 ದೇವಸ್ಥಾನಗಳು,186 ಮಸೀದಿಗಳು, 56 ಚರ್ಚ್​ಗಳು ಮತ್ತು 11 ಇತರೆ ಧಾರ್ಮಿಕ ಕಟ್ಟಡಗಳು ಸೇರಿವೆ. ಈ ಪೈಕಿ ಸುಮಾರು 400 ಕಟ್ಟಡಗಳು ಸಕ್ರಮ ಆಗುವ ಸಾಧ್ಯತೆಯಿದೆ. ಮಂಗಳೂರಿನ ಶಕ್ತಿನಗರದಲ್ಲಿರುವ 700 ವರ್ಷಗಳ ಹಿಂದಿನ‌ ಶ್ರೀ ವೈದ್ಯನಾಥ ದೈವಸ್ಥಾನವೂ ಈ ಪಟ್ಟಿಯಲ್ಲಿದೆ.

2009ರ ಈಚೆಗೆ ನಿರ್ಮಾಣವಾದ ಕಟ್ಟಡಗಳ ಬಗ್ಗೆ ಸರ್ವೆ ಮುಂದುವರೆದಿದ್ದು, ಜಿಲ್ಲಾಡಳಿತ‌ ಈ ಬಗ್ಗೆ ಮಾಹಿತಿ ಪಡೆದುಕೊಳ್ಳುತ್ತಿದೆ.

Related Stories

No stories found.
TV 5 Kannada
tv5kannada.com