ಮಂಗಳೂರಿನಲ್ಲಿ ಗುಡ್ಡ ಕುಸಿತ: ಸಂಚಾರ ಅಸ್ತವ್ಯಸ್ತ

ಬಿ.ಸಿ.ರೋಡ್ ಹಾಗೂ ಪುಂಜಾಲಕಟ್ಟೆ ರಾಷ್ಟ್ರೀಯ ಹೆದ್ದಾರಿ ಬಳಿ ಘಟನೆ
ಮಂಗಳೂರಿನಲ್ಲಿ ಗುಡ್ಡ ಕುಸಿತ: ಸಂಚಾರ ಅಸ್ತವ್ಯಸ್ತ

ದಕ್ಷಿಣ ಕನ್ನಡ: ಜಿಲ್ಲೆಯಾದ್ಯಂತ ನಿರಂತರ ಭಾರೀ ಮಳೆಯಾಗುತ್ತಿದ್ದು, ಬಂಟ್ವಾಳ ತಾಲೂಕಿನ ಕೆಳಗಿನ ವಗ್ಗ ಎಂಬಲ್ಲಿ ಗುಡ್ಡ ಕುಸಿತ ಉಂಟಾಗಿದೆ.

ಬಿ.ಸಿ.ರೋಡ್ ಹಾಗೂ ಪುಂಜಾಲಕಟ್ಟೆ ರಾಷ್ಟ್ರೀಯ ಹೆದ್ದಾರಿ ಬಳಿಯಲ್ಲಿ ಗುಡ್ಡ ಕುಸಿತ ಉಂಟಾಗಿದ್ದು, ಸಂಚಾರ ಅಸ್ತವ್ಯಸ್ತಗೊಂಡಿದೆ. ಇನ್ನು ಘಟನೆಯಲ್ಲಿ 50ಕ್ಕೂ ಅಧಿಕ ತೆಂಗಿನ ಮರಗಳು ಧರೆಗುರುಳಿದೆ.

ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ವೇಳೆ ಅವೈಜ್ಞಾನಿಕವಾಗಿ ಗುಡ್ಡ ಅಗೆದ ಪರಿಣಾಮ ಈ ಅವಘಡ ಉಂಟಾಗಿದೆ ಎನ್ನುವುದು ಸ್ಥಳೀಯರ ಆರೋಪವಾಗಿದೆ. ಸದ್ಯ ರಸ್ತೆ ಮೇಲಿನ ಮಣ್ಣು ತೆರವುಗೊಳಿಸುವ ಕಾರ್ಯಾಚರಣೆ ನಡೆಯುತ್ತಿದೆ.

Related Stories

No stories found.
TV 5 Kannada
tv5kannada.com