ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್​ ಅಧಿಕಾರಕ್ಕೆ ಬರೋದು ಪಕ್ಕಾ - ಯುಟಿ ಖಾದರ್

ಡಿ.ಕೆ ಶಿವಕುಮಾರ್​, ಸಿದ್ದರಾಮಯ್ಯ ಕಾಂಗ್ರೆಸ್​ನ‌ ಒಂದೇ ಧ್ವಜದ ಅಡಿಯಲ್ಲಿದ್ದಾರೆ.
ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್​ ಅಧಿಕಾರಕ್ಕೆ ಬರೋದು ಪಕ್ಕಾ - ಯುಟಿ ಖಾದರ್

ದಕ್ಷಿಣಕನ್ನಡ: ಬಿಜೆಪಿ ಹೀಗಾಗಲೇ ಕಾಂಗ್ರೆಸ್ ವಿರುದ್ಧ ಸೋಲು ಒಪ್ಪಿಕೊಂಡಿದೆ. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರೋದು ಪಕ್ಕಾ ಎಂದು ಮಾಜಿ ಸಚಿವ ಯು.ಟಿ ಖಾದರ್ ಅವರು ಸೋಮವಾರ ಹೇಳಿದ್ದಾರೆ.

ಮಂಗಳೂರಿನಲ್ಲಿಂದು ಮಾಧ್ಯಮದ ಜೊತೆ ಮಾತನಾಡಿದ ಅವರು, ಬಿಜೆಪಿಯ ಬೇಜವಾಬ್ದಾರಿ ಆಡಳಿತ ಅವರ ನಾಯಕರಿಗೆ ಇಷ್ಟವಿಲ್ಲ, ಪ್ರತಿ ಪಕ್ಷದ ನಾಯಕರಲ್ಲೇ ಕಾಂಗ್ರೆಸ್ ಬಗ್ಗೆ ಒಲವು ಹೆಚ್ಚಾಗಿದೆ. ಕಾಂಗ್ರೆಸ್ ಪಕ್ಷ ಒಗಟ್ಟಿನಲ್ಲಿದೆ. ಪಕ್ಷದ ಉದ್ದೇಶ ಜನರ ಪರ ಆಗಿದೆ. ಕಾಂಗ್ರೆಸ್ ನಮ್ಮ ಎಲ್ಲಾ ನಾಯಕರು ಒಗ್ಗಟಿನಲ್ಲಿದ್ದಾರೆ ಎಂದರು.

ಸದ್ಯ ಬಿಜೆಪಿ ನಾಯಕರು ಕಾಂಗ್ರೆಸ್ ಒಗ್ಗಟ್ಟನ್ನು ಮುರಿಯುವ ಪ್ರಯತ್ನಲ್ಲಿದ್ದಾರೆ. ಡಿ.ಕೆ ಶಿವಕುಮಾರ್​, ಸಿದ್ದರಾಮಯ್ಯ ಕಾಂಗ್ರೆಸ್​ನ‌ ಒಂದೇ ಧ್ವಜದ ಅಡಿಯಲ್ಲಿದ್ದಾರೆ. ಡಿಕೆಶಿ ನಮ್ಮ ಪಕ್ಷದ ಅಧ್ಯಕ್ಷರು. ಸಿದ್ದರಾಮಯ್ಯ ನಮ್ಮ ಪಕ್ಷದ ಮುಖಂಡ, ಪ್ರತಿ ಪಕ್ಷದಲ್ಲಿ ಇನ್ನೊಂದು ಪಕ್ಷದ ಬಗ್ಗೆ ಚರ್ಚೆಯ ಅರ್ಥ ಏನು(?) ಎಂದು ಯು.ಟಿ ಖಾದರ್​ ಪ್ರಶ್ನೆ ಮಾಡಿದ್ದಾರೆ.

Related Stories

No stories found.
TV 5 Kannada
tv5kannada.com